/newsfirstlive-kannada/media/post_attachments/wp-content/uploads/2024/10/scholarship.jpg)
ಆಕ್ಸ್ಫರ್ಡ್ ಇಂಡಿಯಾ ಸೆಂಟರ್ ಫಾರ್ ಸಸ್ಟೆನೆಬಲ್ ಡವಲೆಪ್ಮೆಂಟ್ ಜೊತೆ ಸಂಯುಕ್ತಗೊಂಡಿರುವ ಸೊಮವರ್ವಿಲ್ಲೆ ಕಾಲೇಜ್ ಭಾರತೀಯ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಘೋಷಿಸಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಡಾ ಗೀತಾ ಪಿರಮಲ್ ವಿದ್ಯಾರ್ಥಿ ವೇತನ ಘೋಷಿಸಿರುವ ಕಾಲೇಜ್ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಪದವಿ ಪಡೆಯಲು ಬಯಸುವ ವಿದ್ಯಾರ್ಥಿಗಳ ನೆರವಿಗೆ ನಿಂತಿದೆ. ವಿದ್ಯಾರ್ಥಿಗಳು ಸ್ಕಾಲರ್ಶಿಪ್ಗೆ ಬೇಕಾದ ಅರ್ಹತೆಯನ್ನು ನೋಡಲು some.ox.ac.uk/the-oicsd/scholarships/dr-gita-piramal-scholarship. ಈ ವೆಬ್ಸೈಟ್ಗೆ ಹೋಗಿ ಚೆಕ್ ಮಾಡಬಹುದು.
ಇದನ್ನೂ ಓದಿ: RDPR ಕರ್ನಾಟಕ ನೇಮಕಾತಿ.. ಜಿಲ್ಲಾ SMHM ಸಂಯೋಜಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇನ್ನೂ ಸ್ಕಾಲರ್ಶಿಪ್ಗಾಗಿ ಯಾರೆಲ್ಲಾ ಅರ್ಹರು ಹಾಗೂ ಯಾವ ವಿದ್ಯಾರ್ಹತೆಯನ್ನು ಪಡೆದಿರಬೇಕು ಅಂತ ನೋಡುವುದಾದ್ರೆ. ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಭಾರತೀಯ ಪ್ರಜೆಗಳೇ ಆಗಿರಬೇಕು ಹಾಗೂ ಈ ಕೆಳಗಂಡ ಫುಲ್ಟೈಮ್ ಕೋರ್ಸ್ ಮುಗಿಸಿರಬೇಕು
- MSc in Biodiversity, Conservation and Nature Recovery
- MSc in Economics for Development
- MSc in Education (Child Development and Education)
- MSc in Education (Comparative and International Education)
- MSc in Education (Digital and Social Change)
- MSc in Energy Systems
- MSc in Environmental Change and Management
- MSc in Global Governance and Diplomacy
- MSc in Global Health Science and Epidemiology
- MSc in Nature, Society and Environmental Governance
- MSc in Water Science, Policy and Management
ಇನ್ನು ಸ್ಕಾಲರ್ಶಿಪ್ ಸೊಮರ್ವಿಲ್ಲೆ ನಿಯಮದ ಪ್ರಕಾರವೇ ನೀಡಲಾಗುವುದು ಎಂದು ವೆಬ್ಸೈಟ್ ತಿಳಿಸಿದೆ. ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹ ಅಭ್ಯರ್ಥಿಗಳನ್ನು ವಿದ್ಯಾರ್ಹತೆಯ ಪ್ರಕಾರವಾಗಿ ಗಣನೆಗೆ ತೆಗೆದುಕೊಳ್ಳಲಾಗುವುದು. ಯಾವ ಕಾಲೇಜ್ನಲ್ಲಿ ಪದವಿಯನ್ನು ಮುಗಿಸಿದ್ದಾರೆ ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಯಶಸ್ವಿ ಅಭ್ಯರ್ಥಿಯನ್ನು ಸೊಮರ್ವಿಲ್ಲೆಗೆ ಸ್ಕಾಲರ್ಶಿಪ್ ಪಡೆಯಲು ಕಳುಹಿಸಿಕೊಡಲಾಗುವುದು. ಅರ್ಜಿಗಳ ಶಾರ್ಟ್ಲಿಸ್ಟ್ ಹಾಗೂ ಸಂದರ್ಶನ್ ಏಪ್ರಿಲ್ 2025ರಂದು ನಡೆಯಲಿವೆ.
ಇದನ್ನೂ ಓದಿ:ಕರ್ನಾಟಕ ಆರೋಗ್ಯ ಟ್ರಸ್ಟ್ನಲ್ಲಿ ಹಲವು ಹುದ್ದೆಗಳ ನೇಮಕಾತಿ.. ಅರ್ಜಿ ಆಹ್ವಾನ, ತಕ್ಷಣ ಅಪ್ಲೇ ಮಾಡಿ
ಯಾವೆಲ್ಲಾ ಅಭ್ಯರ್ಥಿಗಳು ಕಾಲೇಜಿನ ಮಾನದಂಡಗಳ ಪ್ರಕಾರ ಅರ್ಹತೆಯನ್ನು ಗಳಿಸುತ್ತಾರೋ ಅವರಿಗೆ 2025 ಫೆಬ್ರವರಿ ಕೊನೆಯಲ್ಲಿ ಇ-ಮೇಲ್ ಮೂಲಕ ಅವರು ಯಾವ ಕೋರ್ಸ್ಗೆ ಅರ್ಹರಾಗಿದ್ದಾರೆ ಎಂಬುದನ್ನು ತಿಳಿಸಲಾಗುವುದು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ