oyorooms: ಮದುವೆ ಆಗದ ಜೋಡಿಗೆ ಬಿಗ್ ಶಾಕ್‌; ಓಯೋ ಹೊಸ ರೂಲ್ಸ್‌ ಏನು?

author-image
admin
Updated On
oyorooms: ಮದುವೆ ಆಗದ ಜೋಡಿಗೆ ಬಿಗ್ ಶಾಕ್‌; ಓಯೋ ಹೊಸ ರೂಲ್ಸ್‌ ಏನು?
Advertisment
  • ಇನ್ಮುಂದೆ ಅವಿವಾಹಿತ ಜೋಡಿಗೆ ಎಂಟ್ರಿ ಇಲ್ಲ ಎಂದ ಓಯೋ ಮುಖ್ಯಸ್ಥ
  • ಮದುವೆಯಾಗದ ಜೋಡಿಗಳಿಗೆ ಚೆಕ್ ​ಇನ್​ ನೀಡುತ್ತಿದ್ದ ಫ್ಲಾಟ್‌ಫಾರ್ಮ್‌
  • ಈ ಹೊಸ ನಿಯಮ ಮೊದಲು ದೇಶದ ಯಾವ ನಗರದಲ್ಲಿ ಜಾರಿಗೆ ಗೊತ್ತಾ?

ಓಯೋ.. ಭಾರತದ ಅತ್ಯಂತ ಜನಪ್ರಿಯ ಹೋಟೆಲ್​ ಚೆಕ್ ​ಇನ್​​ ಫ್ಲಾಟ್​ಫಾರ್ಮ್​. ವಿಶೇಷವಾಗಿ ಜೋಡಿ ಹಕ್ಕಿಗಳು ಅತಿ ಹೆಚ್ಚು ಬಳಕೆ ಮಾಡಿಕೊಳ್ಳುತ್ತಿದ್ರು. ಇದರಿಂದಲೇ ಸಾಕಷ್ಟು ಜನಪ್ರಿಯವಾಗಿದ್ದ ಈ ಓಯೋ ಇದೀಗ ಲವರ್ಸ್​ಗಳಿಗೆ ಬಿಗ್‌ ಶಾಕ್​ ಕೊಟ್ಟಿದೆ.

ಇನ್ಮುಂದೆ ಅವಿವಾಹಿತ ಜೋಡಿಗೆ ಎಂಟ್ರಿ ಇಲ್ಲ ಅಂತ ಓಯೋ ಹೊಸ ನಿಯಮವನ್ನ ಜಾರಿಗೆ ತಂದಿದೆ. ದಿಢೀರ​ನೇ ಓಯೋ ಈ ನಿರ್ಧಾರಕ್ಕೆ ಬರಲು ಒಂದು ಬಲವಾದ ಕಾರಣವಿದೆ.

ಜನಪ್ರಿಯ ಲಾಡ್ಜ್​ ಬುಕ್ಕಿಂಗ್​ ಕಂಪನಿ ಓಯೋ ಈ ಶಾಕಿಂಗ್ ನಿರ್ಧಾರ ಭಾರೀ ಚರ್ಚೆಯಾಗುತ್ತಿದೆ. ಇನ್ಮುಂದೆ ಅವಿವಾಹಿತ ಜೋಡಿಗೆ ಹೋಟೆಲ್‌ಗಳಿಗೆ ಪ್ರವೇಶ ಇಲ್ಲ. ಮದುವೆಯಾಗದ ಜೋಡಿಗೆ ನಿರ್ಬಂಧ ವಿಧಿಸಲಾಗಿದೆ.

publive-image

ಓಯೋ ಹೊಸ ನಿಯಮದ ಪ್ರಕಾರ ಪ್ರೂಫ್​ ಇದ್ದರಷ್ಟೇ ಒಳಗೆ ಎಂಟ್ರಿ. ಅಂದ್ರೆ ಹೋಟೆಲ್​ಗೆ ಬರುವ ಜೋಡಿಗಳು ಅಗತ್ಯವಾದ ದಾಖಲೆ ತರುವುದು ಕಡ್ಡಾಯವಾಗಿದೆ. ಆನ್‌ಲೈನ್‌ನಲ್ಲಿ ರೂಮ್‌ ಬುಕ್ಕಿಂಗ್‌ ಮಾಡುವಾಗಲೂ ಕೂಡ ಇದು ಕಡ್ಡಾಯ. ಜವಾಬ್ದಾರಿಯುತ ಆತಿಥ್ಯ ಪದ್ಧತಿಗೆ ಬದ್ಧ ಎಂದ ಓಯೋ ಮುಖ್ಯಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: 10 ವರ್ಷಗಳಿಂದ ಪ್ರೀತಿ.. ಓಯೋ ಹೋಟೆಲ್​ಗೆ ಕರೆಸಿಕೊಂಡು ಗುಂಡಿಟ್ಟು ಕೊಂದ ಪಾಪಿ 

ಸದ್ಯ ಉತ್ತರ ಪ್ರದೇಶದ ಮೀರತ್‌ನಲ್ಲಿ ಓಯೋದ ಈ ಹೊಸ ನಿಯಮ ಮೊದಲಿಗೆ ಜಾರಿಗೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ನಗರಗಳಲ್ಲಿಯೂ ಜಾರಿಯಾಗಲಿದೆ. ಮದುವೆಯಾಗದ ಜೋಡಿಗಳಿಗೆ ಚೆಕ್ ​ಇನ್​ ನೀಡದಂತೆ ಹಲವು ದೂರುಗಳು ಬಂದ ಹಿನ್ನೆಲೆ ಓಯೋದಿಂದ ಈ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment