/newsfirstlive-kannada/media/post_attachments/wp-content/uploads/2025/04/sridhar1.jpg)
ಕನ್ನಡ ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಪಾರು ಕೂಡ ಒಂದಾಗಿದೆ. ಪಾರು, ವಧು ಸೀರಿಯಲ್‌ನಲ್ಲಿ ನಾಯಕಿ ಡಿವೋರ್ಸ್ ಲಾಯರ್ ವಧು ಚಿಕ್ಕಪ್ಪನ ಪಾತ್ರದಲ್ಲಿ ನಟ ಶ್ರೀಧರ್ ಅಭಿನಯಿಸುತ್ತಿದ್ದರು. ಆದರೆ, ದಿಢೀರ್ ಅಂತ ನಟ ಶ್ರೀಧರ್ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡಿರೋ ಫೋಟೋವೊಂದು ವೈರಲ್ ಆಗಿದೆ.
ಇದನ್ನೂ ಓದಿ:ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ನಿಶ್ಚಿತಾರ್ಥ.. ಸ್ನೇಹಾಗೆ ಸಾಹೇಬ್ರ ಮೇಲಿರೋ ಪ್ರೀತಿಗೆ ಟ್ವಿಸ್ಟ್
ಹೌದು, ನಟ ಶ್ರೀಧರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇನ್‌ಫೆಕ್ಷನ್‌ನಿಂದಾಗಿ ನಟ ಶ್ರೀಧರ್ ತೀವ್ರ ಅಸ್ವಸ್ಥರಾಗಿದ್ದಾರೆ. ಸದ್ಯ ನಟ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾರು, ವಧು ಹಲವು ಸೀರಿಯಲ್‌ಗಳಲ್ಲಿ ನಟ ಶ್ರೀಧರ್ ಅಭಿನಯಿಸಿದ್ದಾರೆ.
ಅಲ್ಲದೇ ಕಿಚ್ಚ ಸುದೀಪ್ ನಟನೆಯ ಕೆಲವೇ ತಿಂಗಳ ಹಿಂದೆಯಷ್ಟೇ ರಿಲೀಸ್ ಆದ ‘ಮ್ಯಾಕ್ಸ್’ ಸಿನಿಮಾದಲ್ಲೂ ಶ್ರೀಧರ್ ನಟಿಸಿದ್ದರು. ಆದ್ರೆ ಈಗಹ ಅಚ್ಚರಿ ಎಂಬಂತೆ ಶ್ರೀಧರ್ ತಮ್ಮ ಚಿಕಿತ್ಸೆಗಾಗಿ ಜನರಲ್ಲಿ ಸಹಾಯ ಕೋರಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶ್ರೀಧರ್ ವಧು ಸೀರಿಯಲ್ನಿಂದ ಆಚೆ ಬಂದಿದ್ದರು. ಶ್ರೀಧರ್ ನಿರ್ವಹಿಸುತ್ತಿದ್ದ ಪಾತ್ರಕ್ಕೆ ಬೇರೆ ನಟನ ಎಂಟ್ರಿಯಾಗಿತ್ತು.
View this post on Instagram
ಕಮಲಿ ಸೀರಿಯಲ್ ನಟಿ ಅಂಕಿತಾ ಅವರು ಈ ಬಗ್ಗೆ ಮಾತಾಡಿ ಇದ್ದಕ್ಕಿದ ಹಾಗೆ ಅನಾರೋಗ್ಯಕ್ಕೆ ತುತ್ತಾಗಿ ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರನ್ನು ಅಡ್ಮಿಟ್ ಮಾಡಲಾಗಿದೆ. ದಯಮಾಡಿ ತಾವೆಲ್ಲರೂ ಶ್ರೀಧರನಿಗೆ ಕೈಲಾದ ಹಣದ ಸಹಾಯ ಮಾಡಬೇಕೆಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದೇನೆ. ನಿಮಗೆ ಕೈಲಾದಷ್ಟು ಹಣದ ಸಹಾಯ ಮಾಡಿ ಎಂದು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ