newsfirstkannada.com

ಬಂದೂಕು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಹಾರಿದ ಗುಂಡು; ಕಾನ್ಸ್​​ಟೇಬಲ್​ ಸಾವು

Share :

Published August 25, 2023 at 2:27pm

Update August 25, 2023 at 5:52pm

  ರೈಫಲ್​ನಿಂದ ಹಾರಿದ ಗುಂಡಿಗೆ ಪಿಎಸಿ ಕಾನ್ಸ್​ಟೇಬಲ್​ ಸಾವು

  ಕುತ್ತಿಗೆ ಭಾಗಕ್ಕೆ ಗುಂಡು ತಗುಲಿ ಸಾವನ್ನಪ್ಪಿದ ಕಾನ್ಸ್​ಟೇಬಲ್​

  PAC 25 ಬೆಟಾಲಿಯನ್ ರಾಯ್ ಬರೇಲಿ ಬಿ ಕಂಪನಿಯ ಕಾನ್‌ಸ್ಟೆಬಲ್

ಅಯೋಧ್ಯೆ: ರಾಮಜನ್ಮಭೂಮಿ ಸಂಕೀರ್ಣದ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪಿಎಸಿ ಕಾನ್ಸ್​ಟೇಬಲ್​ವೊಬ್ಬರು ಆಕಸ್ಮಿಕವಾಗಿ ಹಾರಿದ ಗುಂಡಿಗೆ ಬಲಿಯಾಗಿದ್ದಾರೆ. ಬಂದೂಕು​ ಸ್ವಚ್ಛಗೊಳಿಸುವ ಸಮಯದಲ್ಲಿ ಗುಂಡು ಹಾರಿದ್ದು, ಇದರಿಂದಾಗಿ ಕುಲದೀಪ್​ ಕುಮಾರ್​ ತ್ರಿಪಾಠಿ ಸಾವನ್ನಪ್ಪಿದ್ದಾರೆ.

ಶುಕ್ರವಾರ ಮುಂಜಾನೆ 6:15ಕ್ಕೆ ಘಟನೆ ನಡೆದಿದೆ. ಕುಲದೀಪ್​​ ಮಳೆಯ ನೀರು ರೈಫಲ್​ ಒಳಗೆ ಹೋಗಿದೆ ಎಂದು ಸ್ಪಚ್ಛ ಮಾಡುತ್ತಿದ್ದರು. ಆದರೆ ಈ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದೆ. ಕುತ್ತಿಗೆ ಭಾಗಕ್ಕೆ ಗುಂಡು ತಗುಲಿದಂತೆ ರಕ್ತ ಹರಿದಿದೆ. ತಕ್ಷಣವೇ ಅವರನ್ನು ಆಸ್ಪತ್ರೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾರೆ.

ಕುಲದೀಪ್​​ ಕುಮಾರ್​ ತ್ರಿಪಾಠಿ, 30 ವರ್ಷ ವಯಸ್ಸಿನವರಾಗಿದ್ದು, 2019 ಬ್ಯಾಚ್​​ನವರಾಗಿದ್ದರು. ಪಿಎಸಿ 25 ಬೆಟಾಲಿಯನ್ ರಾಯ್ ಬರೇಲಿ ಬಿ ಕಂಪನಿಯ ಕಾನ್ಸ್​ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಆಕಸ್ಮಿಕ ಗುಂಡು ತಗುಲಿ ಸಾವನ್ನಪ್ಪಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಂದೂಕು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಹಾರಿದ ಗುಂಡು; ಕಾನ್ಸ್​​ಟೇಬಲ್​ ಸಾವು

https://newsfirstlive.com/wp-content/uploads/2023/07/Crime-News_1.jpg

Load More