/newsfirstlive-kannada/media/post_attachments/wp-content/uploads/2025/03/NF-MANIKYA-BHARATI-5.jpg)
ಮಾರ್ಚ್ 8. ಇವತ್ತು ಅಂತಾರಾಷ್ಟ್ರಿಯ ಮಹಿಳಾ ದಿನ. ಈ ವಿಶೇಷ ದಿನದಂದು ನಮ್ಮ ರಾಜ್ಯದ ಓರ್ವ ಮಹಿಳೆ ಬಗ್ಗೆ ನಿಮಗೆ ಪರಿಚಯ ಮಾಡಿಕೊಡಲೇಬೇಕು. ಮಾರುಕಟ್ಟೆಯಲ್ಲಿ ಹಲವು ಇಂಟರ್‌ನ್ಯಾಷನಲ್ ಬ್ರ್ಯಾಂಡ್‌ಗಳ ಸ್ಯಾನಿಟರಿ ಪ್ಯಾಡ್‌ಗಳಿವೆ. ಆ ಕಂಪನಿಗಳು ಯಾವು ಕೂಡ ಮನೆ ಮನೆಗೆ ಹೋಗಿ, ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸಿಲ್ಲ. ಅವರ ಉದ್ದೇಶ ಬ್ಯುಸಿನೆಸ್ ಅಷ್ಟೇ. ಆದ್ರೆ, ಕೊಪ್ಪಳದ ಈ ಮಹಿಳೆ ಮನೆ ಮನೆಗೂ ಹೋಗಿ ಸ್ಯಾನಿಟರಿ ಪ್ಯಾಡ್ ಬಗ್ಗೆ ಅರಿವು ಮೂಡಿಸಿದ್ದಾರೆ. ಜೊತೆಗೆ ಅವರದ್ದೇ ಆದ ಒಂದು ಸ್ಯಾನಿಟರಿ ಪ್ಯಾಡ್ ಬ್ರ್ಯಾಂಡ್ ಹುಟ್ಟು ಹಾಕಿ, ಗ್ರಾಮೀಣ ಭಾಗದಲ್ಲಿ ಕ್ರಾಂತಿ ಮೂಡಿಸಿದ್ದಾರೆ. ಅವರು ಮತ್ತ್ಯಾರೂ ಅಲ್ಲ, ಭಾರತಿ ಗುಡ್ಲಾನೂರು. ಇವರ ಸೇವೆಯನ್ನು ಮನಗಂಡ ನಿಮ್ಮ ನ್ಯೂಸ್ಫಸ್ಟ್ ‘ಮಹಿಳಾ ಮಾಣಿಕ್ಯ’ ಕಾರ್ಯಕ್ರಮದಲ್ಲಿ ರೇವಾ ಯೂನಿವರ್ಸಿಟಿ ಚಾನ್ಸಲರ್ ಡಾ.ಪಿ.ಶ್ಯಾಮರಾಜು ಅವರ ಪತ್ನಿ ‘ದಿ. ರುಕ್ಮಿಣಿ ಶ್ಯಾಮರಾಜು’ ಸ್ಮರಣಾರ್ಥ ಮಹಿಳಾ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಯಾರು ಭಾರತಿ ಗುಡ್ಲಾನೂರು..?
‘ಕರ್ನಾಟಕದ ಪ್ಯಾಡ್ ವುಮನ್’ ಅಂತಾನೇ ಖ್ಯಾತಿಗಳಿಸಿರೋ, ಬಿ.ಕಾಂ.ಪದವೀಧರೆ. ಭಾರತಿ ಗುಡ್ಲಾನೂರು ಅವರು, ತಮ್ಮ ಸ್ವಂತಾನುಭವಗಳಿಂದ ಪ್ರೇರಿತಗೊಂಡು, 2018ರಲ್ಲಿ, ಕೊಪ್ಪಳದಲ್ಲಿ ಸಂಗಿನಿ ಪಿಂಕ್ ಪ್ಯಾಡ್ ಉತ್ಪಾದನಾ ಘಟಕ ಶುರು ಮಾಡ್ತಾರೆ. ಗ್ರಾಮೀಣಭಾಗದಲ್ಲಿ ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯ ಬಗ್ಗೆ ಅರಿವು ಇಲ್ಲದೇ ಇರೋದರಿಂದ, ಇವರಿಗೆ ಆರಂಭಿಕವಾಗಿಯೇ ಹಿನ್ನಡೆಯಾಗುತ್ತೆ. ಆದರೆ ಛಲಬಿಡದ ಭಾರತಿ ಗುಡ್ಲಾನೂರು, ಸಂಗಿನಿ ಪಿಂಕ್ ಪ್ಯಾಡ್ಗಳಿಗೆ ಮಾರುಕಟ್ಟೆಯನ್ನು ಕಂಡುಕೊಳ್ಳುವ ದೃಢ ನಿರ್ಧಾರದೊಂದಿಗೆ, ಶಿಕ್ಷಣ ಸಂಸ್ಥೆಗಳು, ಕೊಳೆಗೇರಿಗಳು ಮತ್ತು ಹಳ್ಳಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಾರೆ.
ಇದನ್ನೂ ಓದಿ:ಬಿರು ಬಿಸಿಲಿನ ಬೇಗೆಯಲ್ಲಿ ನಿಮ್ಮ ಕೂದಲು ಆರೈಕೆ ಮಾಡೋದು ಹೇಗೆ? ಇಲ್ಲಿದೆ 5 ಸುಲಭ ಟಿಪ್ಸ್!
ಹೀಗಾಗಿ, ಸಂಗಿನಿ ಪಿಂಕ್ ಪ್ಯಾಡ್‌ಗಳು, ನಿಧಾನವಾಗಿ ಜನಪ್ರಿಯತೆ ಗಳಿಸಿದವು. ಕೋವಿಡ್ ಸಂದರ್ಭದಲ್ಲಿ ಈ ಪ್ರಾಡಕ್ಟ್ ಹೆಚ್ಚು ಜನಪ್ರಿಯತೆಗಳಿಸಿತು. ಪ್ಯಾಡ್‌ಮ್ಯಾನ್ ಸಿನಿಮಾದಿಂದ ಪ್ರೇರಣೆಗೊಂಡು ಈ ಸಾಮಾಜಿಕ ಕೈಂಕರ್ಯ ಶುರು ಮಾಡಿ, ಯಶ ಕಂಡ ಭಾರತಿ ಅವರ ಕೆಲ್ಸವನ್ನು ಸ್ವತಃ ನಟ ಅಕ್ಷಯ್ ಕುಮಾರ್ ಕೂಡ ಶ್ಲಾಘಿಸಿದ್ದಾರೆ.
ಭಾರತಿ ಅವರು, ಕೊಪ್ಪಳ ಸುತ್ತಲಿನ ಜಿಲ್ಲೆಗಳ, 10 ಸ್ಥಳಗಳಲ್ಲಿ ಪ್ಯಾಡ್ ವೆಂಡಿಂಗ್ ಮೆಷಿನ್ಗಳನ್ನು ಸ್ಥಾಪಿಸಿದ್ದಾರೆ. ‘ಕೊಪ್ಪಳ ಜಿಲ್ಲೆಯನ್ನು 100% ಪ್ಯಾಡ್ ಬಳಸುವ ಜಿಲ್ಲೆಯನ್ನಾಗಿ ಮಾಡುವುದೇ ಇವರ ಕನಸಾಗಿದೆ. ಸ್ಯಾನಿಟರಿ ಪ್ಯಾಡ್‌ಗಳ ಉತ್ಪಾದನೆಯನ್ನ ಕೇವಲ ಉದ್ಯಮವಾಗಿ ಸ್ವೀಕರಿಸಿದೆ. ನ್ಯೂಸ್ಫಸ್ಟ್ನ ಮಹಿಳಾ ಮಾಣಿಕ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂದು ಸಂಜೆ 5 ಗಂಟೆಗೆ ಪ್ರಸಾರ ಆಗಲಿದೆ.
ಇದನ್ನೂ ಓದಿ: ಮಹಿಳೆಯರೇ ಬಿ ಅಲರ್ಟ್; ಕೈ ತುಂಬಾ ಗೋರಂಟಿ ಹಾಕೋ ಮುನ್ನ ಇರಲಿ ಎಚ್ಚರ.. ಏಕೆ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ