/newsfirstlive-kannada/media/post_attachments/wp-content/uploads/2024/06/Darshan-fan-2.jpg)
ರಾಯಚೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್​ ಆಗಿರುವ ನಟ ದರ್ಶನ್ ಬಿಡುಗಡೆಯಾಗಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ನಟನ ಫೋಟೋ ಹಿಡಿದು ಪಾದಯಾತ್ರೆ ಮಾಡಿ ದೇವರಿಗೆ ದರ್ಶನ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ.
ಅಮರೇಶ್ವರ ಮೊರೆ
ಯರಡೋಣಿ ಗ್ರಾಮದ ಡಿ. ಬಾಸ್ ಸಂಘದ ಅಭಿಮಾನಿಗಳು ಲಿಂಗಸುಗೂರು ತಾಲ್ಲೂಕಿನ ಪ್ರಸಿದ್ಧ ಅಮರೇಶ್ವರ ದೇವರ ಮೊರೆ ಹೋಗಿದ್ದಾರೆ. ಪಾದಯಾತ್ರೆ ಮಾಡುವ ಮೂಲಕ ದೇವರಲ್ಲಿ ದರ್ಶನ್​ ಬಿಡುಗಡೆಯಾಗಲಿ ಎಂದು ಬೇಡಿಕೊಂಡಿದ್ದಾರೆ.
ಇದನ್ನೂ ಓದಿ: ಆಂಟಿ ಜೊತೆಗೆ ಬಾಲಕನ ಲವ್​! 16 ವರ್ಷದ ಅಪ್ರಾಪ್ತನೊಂದಿಗೆ 28 ವರ್ಷದ ವಿವಾಹಿತ ಮಹಿಳೆ ಎಸ್ಕೇಪ್!
ಒಂದಲ್ಲಾ.. ಎರಡಲ್ಲಾ.. ಎಷ್ಟು ಕಿಲೋ ಮೀಟರ್​?
ಸುಮಾರು 8 ಕಿ.ಮೀ. ಪಾದಯಾತ್ರೆ ಮಾಡುವ ಮೂಲಕ ಅಭಿಮಾನಿಗಳು ದೇಗುಲ ತಲುಪಿದ್ದಾರೆ. ಪಾದಯಾತ್ರೆ ಮೂಲಕ ದೇಗುಲ ತಲುಪಿ ದರ್ಶನ್ ಭಾವಚಿತ್ರಕ್ಕೆ ಮಾಲೆ ಹಾಕಿ ಪೂಜೆ ಸಲ್ಲಿಸಿದ್ದಾರೆ.
ಬಾಸ್​ ತಪ್ಪು ಮಾಡಿದ್ರೆ ಕಾನೂನಿದೆ
ದರ್ಶನ್​ ಆ್ಯಂಡ್​ ಗ್ಯಾಂಗ್​ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ. ಈ ಭಾಗದ ಪರಮಾತ್ಮ ಎಂದು ಶ್ರೀ ಅಮರೇಶ್ವರನನ್ನು ನಾವು ಆರಾಧಿಸುತ್ತೇವೆ. ಆ ದೇವರಲ್ಲಿ ಇಂದು ನಾವು ನಮ್ಮ ನೆಚ್ಚಿನ ನಟ ಆದಷ್ಟು ಬೇಗ ಪ್ರಕರಣದಿಂದ ಮುಕ್ತರಾಗಿ ಹೊರಗೆ ಬರಲಿ. ನಮ್ಮ ಬಾಸ್ ದರ್ಶನ್ ತಪ್ಪು ಮಾಡಿದ್ರೆ ಅದಕ್ಕೆ ಕಾನೂನು ಇದೆ, ಸರ್ಕಾರ ಇದೆ. ತಪ್ಪು ಮಾಡಿದ್ದರೆ ಅದರ ಪ್ರಕಾರ ಕ್ರಮ ಆಗಲಿ. ತಪ್ಪಿತಸ್ಥರೆಂದು ತೀರ್ಮಾನವಾಗದೆ ಅಭಿಮಾನಿಗಳಿಗೆ, ಅವರಿಗೆ ನೋವು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ’ನನ್ನ ಹೆಂಡತಿ ಗರ್ಭಿಣಿ ಬಿಟ್ಬಿಡಿ ಅಕ್ಕ‘ ಎಳೆ ಎಳೆಯಾಗಿ ಬೇಡಿಕೊಂಡಿದ್ದ ರೇಣುಕಾಸ್ವಾಮಿ.. ಆದರೂ ಬಿಡಲೇ ಇಲ್ಲ..
ಬಾಸನ್ನ ಬಿಟ್ಟು ಕೊಡೋದಿಲ್ಲ
ಜೊತೆಗೆ ದಯವಿಟ್ಟು ಮನುಷ್ಯತ್ವಕ್ಕೆ ಬೆಲೆ ಕೊಡಿ. ದರ್ಶನ್ ಬಾಸ್ ಯಾರಿಗೂ ನೋವು ಮಾಡುವವರಲ್ಲ. ಪ್ರಾಣಿಗಳನ್ನೇ ಅಷ್ಟೊಂದು ಪ್ರೀತಿಸುವ ಅವರು ಅವರಿಂದ ಎಷ್ಟೋ ಒಳ್ಳೆಯ ಕೆಲಸಗಳಾಗಿವೆ. ಅವರಿಂದ ನಾವೂ ಪ್ರೇರಿತರಾಗಿ ಒಳ್ಳೆಯ ಕೆಲಸ ಮಾಡಬೇಕು ಅನ್ನಿಸಿದೆ. ನಾವು ಯಾವ ಕಾರಣಕ್ಕೂ ಡಿ.ಬಾಸ್ ಅವ್ರನ್ನ ಬಿಟ್ಟುಕೊಡೋದಿಲ್ಲ. ಸಾಯೋವರೆಗೂ ನಾವು ಡಿ.ಬಾಸ್ ಅಭಿಮಾನಿಗಳಾಗಿಯೇ ಇರುತ್ತೇವೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us