/newsfirstlive-kannada/media/post_attachments/wp-content/uploads/2024/12/Devdutt-Padikkal-RCB-News.jpg)
ಸದ್ಯ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಮಹತ್ವದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 5 ಪಂದ್ಯಗಳನ್ನು ಆಡುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಟೀಮ್ ಇಂಡಿಯಾ ಇನ್ನೂ 3 ಪಂದ್ಯ ಗೆಲ್ಲಲೇಬೇಕಿದೆ. ಹೀಗಾಗಿ 3ನೇ ಟೆಸ್ಟ್ ಪಂದ್ಯ ಗೆಲ್ಲಲೇಬೇಕಿದೆ. ಇದರ ಮಧ್ಯೆ ಟೀಮ್ ಇಂಡಿಯಾ ಸ್ಟಾರ್ ಆಟಗಾರನಿಗೆ ದೇಶಿಯ ಕ್ರಿಕೆಟ್ನಲ್ಲಿ ಸ್ಥಾನ ಸಿಕ್ಕಿದೆ.
ಸದ್ಯ ದೇಶೀಯ ಟೂರ್ನಿಗಳು ನಡೆಯುತ್ತಿವೆ. ಇತ್ತೀಚೆಗೆ ನಡೆದ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲೂ ಕರ್ನಾಟಕ ರಣಜಿ ತಂಡ ಭಾಗವಹಿಸಿತ್ತು. ಈ ಬೆನ್ನಲ್ಲೇ ನಡೆಯಲಿರೋ ವಿಜಯ್ ಹಜಾರೆ ಏಕದಿನ ಸರಣಿಗೂ ಕರ್ನಾಟಕ ಸಿದ್ಧತೆ ನಡೆಸಿದೆ. ಇದರ ನಡುವೆ ವಿಜಯ್ ಹಜಾರೆ ಸಂಭಾವ್ಯ ತಂಡ ಪ್ರಕಟವಾಗಿದೆ. ಸಂಭಾವ್ಯ ತಂಡದಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ಕರ್ನಾಟಕದ ಆಟಗಾರ ದೇವದತ್ ಪಡಿಕ್ಕಲ್ಗೆ ಸ್ಥಾನ ಸಿಕ್ಕಿದೆ.
ಆರ್ಸಿಬಿ ಸ್ಟಾರ್ ಆಟಗಾರನಿಗೆ ಅವಕಾಶ
ಕರ್ನಾಟಕ 32 ಸದಸ್ಯರ ಸಂಭಾವ್ಯ ತಂಡ ಪ್ರಕಟಿಸಿದೆ. ಈ ತಂಡದಲ್ಲಿ ಆರ್ಸಿಬಿ ತಂಡದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ಗೆ ಅವಕಾಶ ಸಿಕ್ಕಿದೆ. ಇತ್ತೀಚೆಗೆ ನಡೆದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ದೇವದತ್ ಪಡಿಕ್ಕಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತ್ತು.
ವಿಜಯ್ ಹಜಾರೆ ಟ್ರೋಫಿಗೆ ತಂಡ ಹೀಗಿದೆ!
ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕ್ಕಲ್, ಎಲ್.ಆರ್.ಚೇತನ್, ಮೆಕ್ನೀಲ್ ನೊರೊನ್ಹಾ, ಶ್ರೇಯಸ್ ಗೋಪಾಲ್, ಕೆ.ಎಲ್.ಶ್ರೀಜಿತ್, ಅಭಿನವ್ ಮನೋಹರ್, ಮನೋಜ್ ಭಾಂಡಗೆ, ಹಾರ್ದಿಕ್ ರಾಜ್, ವಿ.ಕೌಶಿಕ್, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗ್ಡೆ, ಮೊಹ್ಲಾಷ್ ಶೆಟ್ಟಿ, ಆರ್. ಸ್ಮರಣ್, ಲವ್ನಿತ್ ಸಿಸೋಡಿಯಾ, ವಿ. ವೈಶಾಖ್, ಮನ್ವಂತ್ ಕುಮಾರ್, ಯಶೋವರ್ಧನ್ ಪರಂತಪ್, ಪ್ರವೀಣ್ ದುಬೆ, ಎಂ.ವೆಂಕಟೇಶ್, ನಿಕಿನ್. ಜೋಸ್, ಕೆ.ವಿ ಅನೀಶ್, ಕೆ. ಶಶಿಕುಮಾರ್, ಪಾರಸ್ ಗುರ್ಬಕ್ಸ್ ಆರ್ಯ, ಶಿಖರ್ ಶೆಟ್ಟಿ, ಕಿಶನ್ ಬೇಡರೆ, ಹರ್ಷಿಲ್ ಧರ್ಮನಿ, ವಿಧ್ವತ್ ಕಾವೇರಪ್ಪ, ಕೃತಿಕ್ ಕೃಷ್ಣ.
ಇದನ್ನೂ ಓದಿ: ಮಹತ್ವದ ಟೆಸ್ಟ್; ಮತ್ತದೇ ಎಡವಟ್ಟು; ಟೀಮ್ ಇಂಡಿಯಾಗೆ ಬಿಗ್ ಶಾಕ್; ವಿರಾಟ್ ಕೊಹ್ಲಿ ಔಟ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ