newsfirstkannada.com

ಜೀವನಕ್ಕಾಗಿ ಕೂಲಿ ಕೆಲಸಕ್ಕಿಳಿದ ಪದ್ಮಶ್ರೀ ಪುರಸ್ಕೃತ.. ಅಸಲಿಗೆ ಆಗಿದ್ದೇನು?

Share :

Published May 4, 2024 at 9:00pm

    5 ತಿಂಗಳಿನಿಂದ ತೆಲಂಗಾಣ ಸರ್ಕಾರದಿಂದ ಮಾಸಿಕ ಪಿಂಚಣಿ ಬರುತ್ತಿಲ್ಲ ಎಂದ ಕಲಾವಿದ

    2022ರಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ದರ್ಶನಂ ಮೊಗಿಲಯ್ಯ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ದರ್ಶನಂ ಮೊಗಿಲಯ್ಯ ಅವರ ವಿಡಿಯೋ

ತೆಲಂಗಾಣ: ತೆಲಂಗಾಣದ ಖ್ಯಾತ ಜಾನಪದ ಕಲಾವಿದ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದರ್ಶನಂ ಮೊಗಿಲಯ್ಯ ಅವರು ಸಂಗೀತ ವಾದ್ಯವಾದ ಕಿನ್ನರಿಗೆ ಮರುಜೀವ ಕೊಟ್ಟವರು. ಕಿನ್ನರಿಗೆ ರಾಷ್ಟ್ರೀಯ ಸ್ಥಾನಮಾನ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿರು ದರ್ಶನಂ ಮೊಗಿಲಯ್ಯ. 2022ರಲ್ಲಿ ದರ್ಶನಂ ಮೊಗಿಲಯ್ಯ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಇದನ್ನೂ ಓದಿ: ದಯಮಾಡಿ ಕೈ ಜೋಡಿಸಿ ಮನವಿ ಮಾಡ್ತೀನಿ.. ದೇವೇಗೌಡರು, ಅಜ್ಜಿ ಬಹಳ ನೊಂದಿದ್ದಾರೆ; ನಿಖಿಲ್ ಕುಮಾರಸ್ವಾಮಿ

ಆದರೆ ಇದೀಗ ಪದ್ಮಶ್ರೀ ಪಡೆದುಕೊಂಡ 73 ವರ್ಷದ ದರ್ಶನಂ ಮೊಗಿಲಯ್ಯ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವೈರಲ್​ ಆಗಿರೋ ವಿಡಿಯೋದಲ್ಲಿ ಪದ್ಮಶ್ರೀ ಪುರಸ್ಕೃತರಾದ ದರ್ಶನಂ ಮೊಗಿಲಯ್ಯ ಅವರು ಕಟ್ಟಡ ನಿರ್ಮಾಣ ಸ್ಥಳದಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಬೇಸರ ಹೊರ ಹಾಕುತ್ತಿದ್ದಾರೆ.

ಪದ್ಮಶ್ರೀ ಪುರಸ್ಕೃತರಾದ ಕಿನ್ನೆರ ಮೊಗಿಲಯ್ಯ ಎಂದೇ ಖ್ಯಾತರಾದ ದರ್ಶನಂ ಮೊಗಿಲಯ್ಯ ಅವರಿಗೆ ಕಳೆದ 5 ತಿಂಗಳಿನಿಂದ ತೆಲಂಗಾಣ ಸರ್ಕಾರದಿಂದ ಮಾಸಿಕ ರೂಪಾಯಿ 10,000 ಪಿಂಚಣಿ ಬರುತ್ತಿಲ್ಲ ಎಂದು ಆರೋಪಿಸಿದ್ದರು. ಆದರೆ ದುಡ್ಡು ಇಲ್ಲದೇ ಜೀವನ ನಡೆಸಲು ಆಗುವುದಿಲ್ಲ ಎನ್ನುತ್ತಾ ತೀವ್ರ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರೋ ದರ್ಶನಂ ಮೊಗಿಲಯ್ಯ ಅವರು ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಮಾತಾಡಿದ ಅವರು, ನನಗೆ ಬಂದ 1 ಕೋಟಿ ರಾಜ್ಯ ಅನುದಾನ ಹಣವನ್ನು ನನ್ನ ಮಕ್ಕಳ ಮದುವೆಗೆ ಬಳಸಿದ್ದೇನೆ. ನಾನು ಹೈದರಾಬಾದ್‌ನ ಹೊರವಲಯದಲ್ಲಿರುವ ತುರ್ಕಯಂಜಲ್‌ನಲ್ಲಿ ಒಂದು ತುಂಡು ಭೂಮಿಯನ್ನು ಸಹ ಖರೀದಿಸಿದೆ. ಮನೆ ನಿರ್ಮಿಸಲು ಪ್ರಾರಂಭಿಸಿದೆ ಆದರೆ ನನ್ನ ಹಣದ ಕೊರತೆಯಿಂದಾಗಿ ಮಧ್ಯದಲ್ಲಿ ನಿಲ್ಲಿಸಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೀವನಕ್ಕಾಗಿ ಕೂಲಿ ಕೆಲಸಕ್ಕಿಳಿದ ಪದ್ಮಶ್ರೀ ಪುರಸ್ಕೃತ.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/Darshanam-Mogilaiah2.jpg

Load More