Advertisment

ಮಾಹೆಯ ಮೊದಲ ಉಪಕುಲಪತಿ, ಪದ್ಮ ವಿಭೂಷಣ ಡಾ. M S ವಲಿಯಥಾನ್ ನಿಧನ

author-image
AS Harshith
Updated On
ಮಾಹೆಯ ಮೊದಲ ಉಪಕುಲಪತಿ, ಪದ್ಮ ವಿಭೂಷಣ ಡಾ. M S ವಲಿಯಥಾನ್ ನಿಧನ
Advertisment
  • ಖ್ಯಾತ ಹೃದಯ ಶಸ್ತ್ರಚಿಕಿತ್ಸಕರಾಗಿದ್ದ ಡಾ. ವಲಿಯಾಥನ್
  • 90ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಖ್ಯಾತ ಪ್ರೊಫೆಸರ್
  • 20 ವರ್ಷಗಳ ಕಾಲ ಹೃದಯ ಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕರಾಗಿ ಕೆಲಸ

ಉಡುಪಿ: ಪದ್ಮ ವಿಭೂಷಣ ಪ್ರೊಫೆಸರ್ ಮಾರ್ತಾಂಡ ವರ್ಮ ಶಂಕರನ್ ವಲಿಯಥಾನ್ (M S ವಲಿಯಥಾನ್) ನಿಧನರಾಗಿದ್ದಾರೆ. ತಮ್ಮ 90ನೇ ವಯಸ್ಸಿನಲ್ಲಿ ಮಣಿಪಾಲದಲ್ಲಿಂದು ಕೊನೆಯುಸಿರೆಳೆದಿದ್ದಾರೆ.

Advertisment

ಡಾ.ವಲಿಯತ್ತನ್ ಮಣಿಪಾಲದ MAHE ಯುನಿವರ್ಸಿಟಿಯ ವಿಶ್ರಾಂತ ಉಪಕುಲಪತಿಯಾಗಿದ್ದರು. ಖ್ಯಾತ ಹೃದಯ ಶಸ್ತ್ರಚಿಕಿತ್ಸಕರಾಗಿದ್ದ ಇವರು ಬುಧವಾರ ರಾತ್ರಿ 9:14ಕ್ಕೆ ನಿಧನರಾದರು. ಇವರ ಸಾವಿಗೆ ಅನೇಕ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಗಣ್ಯರು ಕಂಬನಿ ಸುರಿಸಿದ್ದಾರೆ.

ವೈದ್ಯ ಲೋಕಕ್ಕೆ ಗಮನಾರ್ಹ ಕೊಡುಗೆ

ಡಾ. ವಲಿಯಾಥನ್​ರವರು ಹೃದಯ ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ತಂತ್ರಜ್ಞಾನಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಇವರು ತಿರುವನಂತಪುರದ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಯು ಹೌದು. ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಎಡಿನ್‌ಬರ್ಗ್, ಇಂಗ್ಲೆಂಡ್ ಮತ್ತು ಕೆನಡಾದಿಂದ ಫೆಲೋಶಿಪ್ ಕೂಡ ಪಡೆದಿದ್ದರು.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ: 7ನೇ ಮೃತದೇಹ ಪತ್ತೆ, ನದಿ ನೀರಿನಲ್ಲಿ ಸಿಕ್ತು ಟ್ಯಾಂಕರ್​​ ಚಾಲಕನ ಶವ 

Advertisment

ಶ್ರೀಚಿತ್ರ ತಿರುನಾಳ್ ಸಂಸ್ಥೆ

ಡಾ. ವಲಿಯಾಥನ್​ರವರು ತಿರುವನಂತಪುರದಲ್ಲಿ ಶ್ರೀಚಿತ್ರ ತಿರುನಾಳ್ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇಪ್ಪತ್ತು ವರ್ಷಗಳ ಕಾಲ ಹೃದಯ ಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕರಾಗಿ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬೇಲಿ ಮೇಲೆ ಬೆಳೆದಿದ್ದ ವಿಷದ ಕಾಯಿ ತಿಂದು 6 ಮಕ್ಕಳು ಅಸ್ವಸ್ಥ.. ಸದ್ಯದ ಪರಿಸ್ಥಿತಿ ಹೇಗಿದೆ?

ಇವರ ಸಾಧನೆಗೆ ಸಾಲು ಸಾಲು ಪ್ರಶಸ್ತಿಗಳು

1993 ರಿಂದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ )ಯ ಮೊದಲ ಉಪಕುಲಪತಿಯಾಗಿ ಸೇವೆಸಲ್ಲಿಸಿದ್ದಾರೆ. ಇವರ ಸಾಧನೆಗೆ ಪದ್ಮವಿಭೂಷಣ (2005), ಪದ್ಮಶ್ರೀ (2002), ಡಾ. ಬಿ. ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ, ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ಹಂಟೇರಿಯನ್ ಪ್ರೊಫೆಸರ್‌ಶಿಪ್, ಫ್ರೆಂಚ್ ಸರ್ಕಾರದಿಂದ ಚೆವಲಿಯರ್ ಆಫ್ ದಿ ಆರ್ಡರ್ ಆಫ್ ಪಾಮ್ಸ್ ಅಕಾಡೆಮಿಕ್ಸ್, ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ವೈದ್ಯಕೀಯ ಶಿಕ್ಷಣಕ್ಕಾಗಿ ಡಾ. ಸ್ಯಾಮ್ಯುಯೆಲ್ ಪಿ. ಆಸ್ಪರ್ ಪ್ರಶಸ್ತಿ ಲಭಿಸಿದೆ. ಮಾತ್ರವಲ್ಲದೆ, ಭಾರತೀಯ ವೈದ್ಯಕೀಯ ಸಂಘದಿಂದ ಜೀವಮಾನ ಸಾಧನೆ ಪ್ರಶಸ್ತಿ ಕೂಡ ಪಡೆದಿದ್ದರು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment