BREAKING; ಪಾಕ್​​ಗೆ ಸಿಂಧೂ ನದಿ ನೀರು ಹಂಚಿಕೆ ರದ್ದು.. PM ಮೋದಿ ನೇತೃತ್ವದ ಸಭೆಯಲ್ಲಿ ಮಹತ್ವದ 5 ನಿರ್ಧಾರ

author-image
Bheemappa
Updated On
BREAKING; ಪಾಕ್​​ಗೆ ಸಿಂಧೂ ನದಿ ನೀರು ಹಂಚಿಕೆ ರದ್ದು.. PM ಮೋದಿ ನೇತೃತ್ವದ ಸಭೆಯಲ್ಲಿ ಮಹತ್ವದ 5 ನಿರ್ಧಾರ
Advertisment
  • ಮೋದಿ ಅಧ್ಯಕ್ಷತೆಯಲ್ಲಿ ತೆಗೆದುಕೊಂಡು 5 ಮಹತ್ವದ ನಿರ್ಧಾರ
  • ಏಪ್ರಿಲ್​ 22 ರಂದು ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ದಾಳಿ
  • ಭಯೋತ್ಪಾದಕರ ದಾಳಿಯಲ್ಲಿ ಜೀವಕಳೆದುಕೊಂಡಿದ್ದ ಕನ್ನಡಿಗರು

ನವದೆಹಲಿ: ಪಹಲ್ಗಾಮ್​ನಲ್ಲಿ ಭಯೋತ್ಪಾದಕರ ಪೈಶಾಚಿಕ ಕೃತ್ಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ದೆಹಲಿಯಲ್ಲಿ ಮಹತ್ವದ ಸಭೆಯನ್ನು ಕೈಗೊಳ್ಳಲಾಗಿತ್ತು. ಸಭೆಯಲ್ಲಿ 5 ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಮೋದಿ ನೇತೃತ್ವದ ಸಭೆಯಲ್ಲಿ 5 ಮಹತ್ವದ ನಿರ್ಧಾರ

  • ಪಾಕ್ ಜೊತೆಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಸ್ಥಗಿತಕ್ಕೆ ನಿರ್ಧಾರ
  • ಪಾಕಿಸ್ತಾನದ ರಾಯಭಾರಿ ಕಚೇರಿ ಬಂದ್​ಗೆ ಸೂಚನೆ
  • ಭಾರತ- ಪಾಕ್ ನಡುವಿನ ಅಟಾರಿ ಗಡಿ ಬಂದ್​
  • 48 ಗಂಟೆಯಲ್ಲಿ ಪಾಕ್ ಪ್ರಜೆಗಳು ಭಾರತ ತೊರೆಯಬೇಕು
  • ಪಾಕ್​​ನವರಿಗೆ ಭಾರತದ ವೀಸಾ ರದ್ದು- ವಿದೇಶಾಂಗ ಸಚಿವಾಲಯ

ಇದನ್ನೂ ಓದಿ: 4 ತಿಂಗಳ ಹಿಂದೆ ಮದುವೆಯಾಗಿದ್ದ IAF ಅಧಿಕಾರಿ.. ಪತ್ನಿ ಜತೆ ಪ್ರವಾಸದಲ್ಲಿದ್ದಾಗ ಉಗ್ರರ ಗುಂಡಿಗೆ ಬಲಿ

publive-image

ಏಪ್ರಿಲ್​ 22 ರಂದು ಭಯೋತ್ಪಾಕದರು ಜಮ್ಮುಕಾಶ್ಮೀರದ ಪಹಲ್ಗಾಮ್​ನಲ್ಲಿ ಅಟ್ಟಹಾಸ ಮೆರೆದಿದ್ದರು. ಒಬ್ಬರಲ್ಲ, ಇಬ್ಬರಲ್ಲ. ಬರೋಬ್ಬರಿ 26 ಪ್ರಾಣಗಳನ್ನು ಬಲಿ ಪಡೆದಿದ್ದರು. ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದ ಪ್ರಧಾನಿ ಮೋದಿಯವರು ದಾಳಿಗೆ ಮೊದಲ ಪ್ರತ್ಯುತ್ತರವಾಗಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದಾರೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ದೀರ್ಘಕಾಲದ ನೀರು ಹಂಚಿಕೆ ಒಪ್ಪಂದವಾದ ಸಿಂಧೂ ಜಲ ಒಪ್ಪಂದವನ್ನು ರದ್ದು ಮಾಡಲಾಗಿದೆ. ಇದು ಮುಂದಿನ ಸೂಚನೆ ಬರುವವರೆಗೆ ಸ್ಥಗಿತವಾಗಿರುತ್ತದೆ. ಎರಡೂ ದೇಶಗಳ ನಡುವಿನ ನಾಗರಿಕ ಸಂಚಾರಕ್ಕೆ ಇರುವ ಏಕೈಕ ರಸ್ತೆ ಮಾರ್ಗ ಅಟ್ಟಾರಿ ಚೆಕ್‌ಪೋಸ್ಟ್ ಅನ್ನು ಸದ್ಯಕ್ಕೆ ಪಾಕ್​​ ನಾಗರಿಕರಿಗೆ ಮುಚ್ಚಲಾಗಿದೆ. ಇದರಿಂದ ಪಾಕಿಸ್ತಾನಿಗಳು ಈ ಮಾರ್ಗದ ಮೂಲಕ ಭಾರತಕ್ಕೆ ಪ್ರವೇಶಿಸಲು ಇನ್ಮುಂದೆ ಆಗಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ. ಪಾಕಿಸ್ತಾನದ ರಾಯಭಾರಿಗಳು ಒಂದು ವಾರದ ಒಳಗೆ ಭಾರತವನ್ನು ಬಿಟ್ಟು ಹೋಗಲು ತಿಳಿಸಲಾಗಿದೆ. ಇನ್ನು ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು 48 ಗಂಟೆಗಳ ಒಳಗೆ ಅಂದರೆ 2 ದಿನದ ಒಳಗೆ ತಮ್ಮ ದೇಶಕ್ಕೆ ಹೋಗಬೇಕು. ಇದರ ಜೊತೆ ನೆರೆಯ ರಾಷ್ಟ್ರದವರಿಗೆ ಭಾರತದ ವೀಸಾವನ್ನು ರದ್ದು ಮಾಡಲಾಗಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಕ್ಯಾಬಿನೆಟ್​ ಕಮಿಟಿ ಆನ್ ಸೆಕ್ಯೂರಿಟಿ (ಸಿಸಿಎಸ್) ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment