ಉಗ್ರರ ಗುಂಡಿನ ದಾಳಿಯಲ್ಲಿ ಜೀವ ಬಿಟ್ಟ ಮೂವರ ಕುಟುಂಬಸ್ಥರಿಗೆ ಸಿಎಂ ಪರಿಹಾರ ಘೋಷಣೆ

author-image
Bheemappa
Updated On
ಉಗ್ರರ ಗುಂಡಿನ ದಾಳಿಯಲ್ಲಿ ಜೀವ ಬಿಟ್ಟ ಮೂವರ ಕುಟುಂಬಸ್ಥರಿಗೆ ಸಿಎಂ ಪರಿಹಾರ ಘೋಷಣೆ
Advertisment
  • ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದ ಸಿದ್ದರಾಮಯ್ಯ
  • ಪ್ರವಾಸಕ್ಕೆ ಹೋಗಿದ್ದವರ ಮೇಲೆ ಗುಂಡು ಹಾರಿಸಿದ್ದ ಉಗ್ರರು
  • ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಿದ ಸಿಎಂ

ಬೆಂಗಳೂರು: ಜಮ್ಮುಕಾಶ್ಮೀರದ ಪಹಲ್ಗಾಮ್​ನಲ್ಲಿ ಭಯೋತ್ಪಾದಕರ ದಾಳಿಯಿಂದ ಜೀವ ಕಳೆದುಕೊಂಡವರ ಕುಟುಂಬಸ್ಥರಿಗೆ ಸಿಎಂ ಸಿದ್ದರಾಮಯ್ಯ ಪರಿಹಾರ ಘೋಷಣೆ ಮಾಡಿದ್ದಾರೆ. ಕರ್ನಾಟಕದ ಒಟ್ಟು ಮೂವರು ಪ್ರಾಣ ಬಿಟ್ಟಿದ್ದು ಮೃತರಾದವರ ಕುಟುಂಬಳಿಗೆ ತಲಾ 10 ಲಕ್ಷ ರೂಪಾಯಿಗಳ ಪರಿಹಾರ ಘೋಷಣೆ ಮಾಡಲಾಗಿದೆ.

publive-image

ಜಮ್ಮುಕಾಶ್ಮೀರದ ಅನಂತಪುರ ಜಿಲ್ಲೆಯ ಪಹಲ್ಗಾಮ್​​ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಒಟ್ಟು 26 ಪ್ರವಾಸಿಗರು ಉಸಿರು ಚೆಲ್ಲಿದ್ದರು. ಇದರಲ್ಲಿ ಕರ್ನಾಟಕದವರಾದ ಮಂಜುನಾಥ್ ರಾವ್, ಭರತ್ ಭೂಷಣ್ ಹಾಗೂ ಮಧುಸೂದನ್ ರಾವ್ ಜೀವ ಬಿಟ್ಟಿದ್ದಾರೆ. ನಿನ್ನೆಯೇ ಈ ದಾಳಿಯನ್ನು ಸಿಎಂ ಸಿದ್ದರಾಮಯ್ಯ ಅವರು ತೀವ್ರವಾಗಿ ಖಂಡಿಸಿದ್ದರು. ಇದರ ಬೆನ್ನಲ್ಲೇ ಮೃತರಾದವರ ಕುಟುಂಬಸ್ಥರಿಗೆ ಇಂದು ಪರಿಹಾರ ಘೋಷಣೆ ಮಾಡಿದ್ದಾರೆ.

ಶಿವಮೊಗ್ಗದ ಮಂಜುನಾಥ್ ಗುಂಡಿನ ದಾಳಿಯಿಂದ ಪ್ರಾಣ ಬಿಟ್ಟಿದ್ದಾರೆ. ಇವರು ಪ್ರವಾಸಕ್ಕೆಂದು ತಮ್ಮ ಕುಟುಂಬದ ಜೊತೆ ಜಮ್ಮುಕಾಶ್ಮೀರಕ್ಕೆ ಹೋಗಿದ್ದರು. ಪ್ರವಾಸದ ಖುಷಿಯಲ್ಲಿದ್ದ ಮಂಜುನಾಥ್ ಸೇರಿ ಕೆಲವರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ದಾಳಿ ಹಿನ್ನೆಲೆಯಲ್ಲಿ ಮಂಜುನಾಥ್ ಉಸಿರು ಚೆಲ್ಲಿದ್ದರು.

ಭರತ್ ಭೂಷಣ್ ಅವರು ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಇನ್ನಿಲ್ಲವಾಗಿದ್ದಾರೆ. ಇವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು ಆಗಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದರು. ಮೂರು ದಿನಗಳ ಹಿಂದಷ್ಟೇ ಜಮ್ಮು ಕಾಶ್ಮೀರದ ಪ್ರವಾಸಕ್ಕೆ ಹೋಗಿದ್ದರು. ಆದರೆ ಏಪ್ರಿಲ್ 22 ರಂದು ಉಗ್ರರು ನಡೆಸಿದ ಹೇಯ ಕೃತ್ಯದಿಂದ ಭರತ್ ಭೂಷಣ್ ಬಾರದ ಲೋಕಕ್ಕೆ ತೆರಳಿದ್ದಾರೆ.

ಇದನ್ನೂ ಓದಿ:ಉಗ್ರರ ದಾಳಿಯಿಂದ ಕರ್ನಾಟಕದ ಹಿರಿಯ ವಕೀಲರು, ಕುಟುಂಸ್ಥರು ಜಸ್ಟ್​ ಮಿಸ್.. ತಪ್ಪಿಸಿಕೊಂಡಿದ್ದು ಹೇಗೆ?

publive-image

ಮೂಲತಃ ಆಂಧ್ರದವರಾಗಿದ್ದ ಮಧುಸೂದನ್ ರಾವ್ ಬೆಂಗಳೂರಿನ ರಿಚಸ್ ಗಾರ್ಡನ್​ನಲ್ಲಿ ವಾಸಿಸುತ್ತಿದ್ದರು. ಕಳೆದ ಮೂರು ದಿನಗಳ ಹಿಂದೆಷ್ಟೇ ಕುಟುಂಬದ ಜೊತೆ ಪ್ರವಾಸಕ್ಕೆ ಕಾಶ್ಮೀರಕ್ಕೆ ತೆರಳಿದ್ದರು. ಆದರೆ ಭಯೋತ್ಪಾದಕರ ಏಕಾಏಕಿ ದಾಳಿಯಿಂದ ಮಧುಸೂದನ್ ರಾವ್ ಜೀವ ಕಳೆದುಕೊಂಡಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment