/newsfirstlive-kannada/media/post_attachments/wp-content/uploads/2025/04/GARUDA.jpg)
ಪಹಲ್ಗಾಮ್ ದಾಳಿ ಬೆನ್ನಲ್ಲೇ ವಾಯುಪಡೆಯ ಗರುಡ ಕಮಾಂಡೋ (Garud Commando Force) ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ವಿಶೇಷ ಪಡೆ ಅತ್ಯಂತ ಅಪಾಯಕಾರಿ ಕಾರ್ಯಾಚರಣೆಗಳಿಗೆ ಹೆಸರುವಾಸಿ. ಅದು ಭಯೋತ್ಪಾದನೆಯಾಗಿರಲಿ, ನೈಸರ್ಗಿಕ ವಿಕೋಪವಾಗಿರಲಿ ಗರುಡ ಪಡೆ ಎಂಟ್ರಿಯಾದವು ಅಂದ್ರೆ ಕಾರ್ಯಾಚರಣೆಗಳು ಸಕ್ಸಸ್ ಅಂತಲೇ. ತುರ್ತು ಸಂದರ್ಭದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಎದೆಯೊಡ್ಡಿ ನಿಲ್ಲುತ್ತಾರೆ.
26 ಅಮಾಯಕ ಪ್ರವಾಸಿಗರ ಜೀವ ಬಲಿ ಪಡೆದ ಉಗ್ರರ ವಿರುದ್ಧ ಗರುಡ ಕಮಾಂಡೋ ಫೋರ್ಸ್ ಎಂಟ್ರಿ ಆಗಲಿದೆ ಎಂಬ ವರದಿಗಳಿವೆ. ಒಂದು ವೇಳೆ ಈ ವಿಶೇಷ ಘಟಕ ಕಾರ್ಯಾಚರಣೆಗೆ ಇಳಿದರೆ, ಸದ್ದಿಲ್ಲದೇ ಉಗ್ರರ ಹುಟ್ಟು ಅಡಗಲಿದೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿಗೂ ಮುನ್ನ ‘ಪ್ರೇಮ’ ಕಾಶ್ಮೀರ.. ಈಗ ಯಾವ ದುಸ್ಥಿತಿಗೆ ಬಂದಿದೆ ಗೊತ್ತಾ?
ಏನಿದು ಗರುಡ ಪಡೆ..?
ದೇಶದಲ್ಲಿ 2004, ಸೆಪ್ಟೆಂಬರ್ನಲ್ಲಿ ಗರುಡ ಕಮಾಂಡೋ ಪಡೆ ಸ್ಥಾಪನೆ ಆಯಿತು. ಆ ಸಂದರ್ಭದಲ್ಲಿ ಕಾಶ್ಮೀರ ಕಣಿವೆಯಲ್ಲಿ ವಾಯುಪಡೆಯ ನೆಲೆಗಳ ಮೇಲಿನ ದಾಳಿ ಹೆಚ್ಚಾಗಿತ್ತು. ವಾಯುಪಡೆಯ ಸ್ವತ್ತುಗಳನ್ನು ಉಳಿಸಿಕೊಳ್ಳೋದು ಸೇನೆಯ ಗುರಿ. ಇದೇ ಉದ್ದೇಶದಿಂದ ದೇಶದಲ್ಲಿ ಗುರುಡ ಪಡೆ ಹುಟ್ಟಿಕೊಂಡಿತು. ಇದು ಕೇವಲ ಹೋರಾಟಕ್ಕೆ ಮಾತ್ರವಲ್ಲದೆ ರಕ್ಷಣೆ, ಭದ್ರತೆ ಮತ್ತು ಗುಪ್ತಚರದಂತಹ ಅನೇಕ ಆಪರೇಷನ್ಗಳಲ್ಲಿ ಪ್ರವೀಣತೆ ಹೊಂದಿದೆ.
ಗರುಡ ಕಮಾಂಡೋ ಆಯ್ಕೆ ಪ್ರಕ್ರಿಯೆ
ವಾಯುಪಡೆಯ ಸಾಮಾನ್ಯ ನೇಮಕಾತಿ ಪ್ರಕ್ರಿಯೆ ಜೊತೆಗೆ ನಾನ್-ಕಮಿಷನ್ಡ್ ಪೋಸ್ಟ್ಗಳಿಗೆ (Airman) ಆಯ್ಕೆ ಪ್ರಾರಂಭವಾಗುತ್ತದೆ. ದೈಹಿಕ ಪರೀಕ್ಷೆ, ಸಂದರ್ಶನ ಮತ್ತು ಮಾನಸಿಕ ಪರೀಕ್ಷೆಗಳು ಇದರಲ್ಲಿ ಸೇರಿವೆ. ಒಂದು ಬಾರಿ ಪರೀಕ್ಷೆಯಲ್ಲಿ ಫೇಲ್ ಆದರೆ ಮತ್ತೆ ಅವಕಾಶ ಸಿಗಲ್ಲ. ನಿಯೋಜಿತ ಅಧಿಕಾರಿಯಾಗಲು ಅಭ್ಯರ್ಥಿಗಳು AFCAT ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು. ನಂತರ ಹೈದರಾಬಾದ್‌ನಲ್ಲಿರುವ ವಾಯುಪಡೆಯ ಅಕಾಡೆಮಿಯಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ. ಈ ಟ್ರೈನಿಂಗ್ ನಾಯಕತ್ವದ ಸಾಮರ್ಥ್ಯ ಮತ್ತು ಕಾರ್ಯತಂತ್ರದ ಕೌಶಲ್ಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಅಂತೂ ಗಂಟೂ, ಮೂಟೆ ಕಟ್ಟಿದ ಕೆಲವು ಪಾಕಿಸ್ತಾನೀಯರು.. ಬ್ಯಾಗು ಹಿಡಿ, ಸೀದಾ ನಡಿ..
ಗರುಡ ಕಮಾಂಡೋಗಳ ಟ್ರೈನಿಂಗ್..!
ಗರುಡ ಕಮಾಂಡೋ ಟ್ರೈನಿಂಗ್ ಅತ್ಯಂತ ಕಷ್ಟಕರವಾಗಿದೆ. ದೈಹಿಕ ಸಾಮರ್ಥ್ಯ, ಮಾನಸಿಕ ಶಕ್ತಿ, ಶಸ್ತ್ರಾಸ್ತ್ರ ನಿರ್ವಹಣೆ, ಸ್ಕೈ ಡೈವಿಂಗ್, ಜಂಗಲ್ ವಾರ್, ಸಿಟಿ ಆಪರೇಷನ್ಗಳಂತಹ ಕಾರ್ಯಾಚರಣೆಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಜೊತೆಗೆ ವಿವಿಧ ಮಾಡ್ಯೂಲ್‌ಗಳನ್ನು ಒಳಗೊಂಡಿದೆ. ಎಲ್ಲಾ ಸಂದರ್ಭಗಳಲ್ಲಿಯೂ ಮಾನಸಿಕ, ದೈಹಿಕವಾಗಿ ಸದೃಢರಾಗಿರೋರು ಮಾತ್ರ ಯಶಸ್ವಿ ಆಗ್ತಾರೆ.
ಸಂಬಳ ಎಷ್ಟು?
ಗರುಡ ಕಮಾಂಡೋಗಳಿಗೆ ಅವರ ಕೆಲಸ ಮತ್ತು ಅಪಾಯದ ಆಧಾರದ ಮೇಲೆ ಸಂಬಳ ನೀಡಲಾಗುತ್ತದೆ. ವರದಿಗಳ ಪ್ರಕಾರ, ಆರಂಭದ ಸಂಬಳ ಸುಮಾರು 70 ಸಾವಿರ ರೂಪಾಯಿ. ಗರಿಷ್ಠ ವೇತನ ತಿಂಗಳಿಗೆ 2,50,000 ರೂಪಾಯಿ ಆಗಿದೆ. ಶ್ರೇಣಿ ಮತ್ತು ಅನುಭವ ಆಧಾರದ ಮೇಲೆ ಸಂಬಳ ನೀಡಲಾಗುತ್ತದೆ. ಕರ್ತವ್ಯ ಭತ್ಯೆ, ಹೆಚ್ಚಿನ ಅಪಾಯದ ಭತ್ಯೆ ಮತ್ತು ವಿಶೇಷ ಕಾರ್ಯಾಚರಣೆ ಪ್ರೋತ್ಸಾಹ ಧನವನ್ನು ಪಡೆಯುತ್ತಾರೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರರಿಗೆ ತಕ್ಕ ಉತ್ತರ.. ಖಾರವಾಗಿ ಪ್ರತಿಕ್ರಿಯೆ ನೀಡಿದ ನಟ ಧ್ರುವ ಸರ್ಜಾ; ಏನಂದ್ರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ