Pahalgam attack: ಶ್ರೀನಗರಕ್ಕೆ ಅಮಿತ್ ಶಾ ದಿಢೀರ್ ಭೇಟಿ.. ಮುಂದೇನು..?

author-image
Ganesh
Updated On
ರಾಜ್ಯಕ್ಕೆ ಆಗಮಿಸ್ತಿರೋ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ.. ಡಾ.ಮಂಜುನಾಥ್ ಪರ ಪ್ರಚಾರದ ಪ್ಲಾನ್ ಏನು?
Advertisment
  • ಕಣಿವೆ ನಾಡಿನಲ್ಲಿ ಅಟ್ಟಹಾಸ ಮೆರೆದ ಭಯೋತ್ಪಾದಕರು!
  • ಇಬ್ಬರು ವಿದೇಶಿ ಸೇರಿ 30ಕ್ಕೂ ಹೆಚ್ಚು ಪ್ರವಾಸಿಗರ ಮೇಲೆ ದಾಳಿ
  • ಶ್ರೀನಗರಕ್ಕೆ ದೌಡಾಯಿಸಿದ ಗೃಹ ಸಚಿವ ಅಮಿತ್​ ಶಾ

ಕಣಿವೆ ನಾಡಿನ ಪಹಲ್ಗಾಮ್​​ನಲ್ಲಿ ಭಯಾನಕ ರೀತಿಯಲ್ಲಿ ಉಗ್ರರ ದಾಳಿಯಾಗಿದೆ. ಸಹಜ ಜೀವನ, ಶಾಂತಿ ಸ್ಥಿತಿಗೆ ಮರಳ್ತಿದ್ದ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಪರಿಸ್ಥಿತಿಯನ್ನ ಬಿಗಡಾಯಿಸಿದೆ. ಕಣಿವೆ ನಾಡಿನಲ್ಲಿ ನಡೆದ ಇತ್ತೀಚಿನ ಅತಿದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ. ಬೇಸಿಗೆ ರಜೆ ಕಳೆಯಲು ಕಾಶ್ಮೀರಕ್ಕೆ ಆಗಮಿಸಿದ್ದ ಪ್ರವಾಸಿಗರನ್ನೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಅನಂತನಾಗ್​​ ಜಿಲ್ಲೆಯ ಪಹಲ್ಗಾಮ್​​​ನಲ್ಲಿ ಇಬ್ಬರು ವಿದೇಶಿಗರು ಸೇರಿ 27ಕ್ಕೂ ಹೆಚ್ಚು ಪ್ರವಾಸಿಗರು ಜೀವ ಬಿಟ್ಟಿದ್ದಾರೆ.

ರಾಕ್ಷಸೀ ಕೃತ್ಯ ಎಸಗಿದ ಈ ಗ್ಯಾಂಗ್​ಗೆ ಪಾಕಿಸ್ತಾನದ ಲಷ್ಕರ್​​ ಎ ತೊಯ್ಬಾ ಉಗ್ರಪೋಷಣೆ ಮಾಡಿದೆ. ಕೃತ್ಯದ ಹೊಣೆಯನ್ನ ಎಲ್​​ಇಟಿಯ The Resistance Front ಹೊತ್ತುಕೊಂಡಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೈಸರನ್ ಕಣಿವೆಯಿಂದ ಇಳಿದು ಬಂದ ಉಗ್ರರು, ಪ್ರವಾಸಿಗರ ಸೋಗಿನಲ್ಲಿ ಮಾತನಾಡಿಸುವ ನೆಪದಲ್ಲಿ ದಾಳಿ ಆರಂಭಿಸಿದ್ದಾರೆ. ಇಬ್ಬರು ಸ್ಥಳೀಯರು ಸೇರಿ ಒಟ್ಟು 8 ಉಗ್ರರು ಓಪನ್​ ಫೈರ್​​ ಮಾಡಿದ್ದಾರೆ. ಕೃತ್ಯಕ್ಕೆ ಎಕೆ-47 ಗನ್​ ಬಳಕೆ ಆಗಿದ್ದು, ಸ್ಪೆಷಲಿ ಮುಸ್ಲಿಮೇತರರನ್ನು ಗುರಿಯಾಗಿಸಿ ಹೇಡಿತನ ಮೆರೆದಿದ್ದಾರೆ. ನೀವು ಹಿಂದೂಗಳಾ ಎಂದು ಕೇಳಿ ಕೇಳಿ ಟಾರ್ಗೆಟ್​​​ ಮಾಡಿದ್ದಾರೆ.

ಇದನ್ನೂ ಓದಿ: ಉಗ್ರರ ಗುಂಡಿನ ದಾಳಿ.. ಪ್ರಾಣ ಬಿಟ್ಟ ಮಗನ ಬರುವಿಕೆಗಾಗಿ ಕಾದು ಕುಳಿತ ತಾಯಿ

publive-image

ಶ್ರೀನಗರಕ್ಕೆ ದೌಡಾಯಿಸಿದ ಗೃಹ ಸಚಿವ ಅಮಿತ್​ ಶಾ

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಸೌದಿ ಅರೇಬಿಯಾ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಈ ಬೆನ್ನಲ್ಲೆ ಅಮಿತ್​​ ಶಾ ದಿಢೀರ್​​ ಸಂಜೆ ವಿಶೇಷ ವಿಮಾನದ ಮೂಲಕ ಶ್ರೀನಗರಕ್ಕೆ ಆಗಮಿಸಿದ್ರು. ಉನ್ನತ ಮಟ್ಟದ ಭದ್ರತಾ ಪರಿಶೀಲನೆ ನಡೆಸಿದ ಅಮಿತ್ ಶಾ, ಇವತ್ತು ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಈ ಹೇಯ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾದವ್ರನ್ನ ಬಿಡುವುದಿಲ್ಲ ಶಪಥಗೈದಿದ್ದಾರೆ.
ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಖಂಡಿಸಿದ್ದಾರೆ.. ಎಕ್ಸ್​ನಲ್ಲಿ ಫೋಸ್ಟ್ ಮಾಡಿದ ಮೋದಿ, ಈ ಹೇಯ ಕೃತ್ಯದ ಹಿಂದಿರುವವರನ್ನ ಬಿಡಲ್ಲ ಅಂತ ಪ್ರತಿಜ್ಞೆ ಮಾಡಿದ್ದಾರೆ.

ಉಗ್ರರನ್ನ ಸುಮ್ಮನೆ ಬಿಡಲ್ಲ!
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ. ಈ ಹೇಯ ಕೃತ್ಯದ ಹಿಂದಿರುವ ಉಗ್ರರನ್ನು ಸುಮ್ಮನೆ ಬಿಡಲ್ಲ. ಅವರ ದುಷ್ಟ ಅಜೆಂಡಾ ಎಂದಿಗೂ ಯಶಸ್ವಿಯಾಗುವುದಿಲ್ಲ- ನರೇಂದ್ರ ಮೋದಿ, ಪ್ರಧಾನಮಂತ್ರಿ

2019ರ ಪುಲ್ವಾಮ ದಾಳಿ ನಂತ್ರ ಕಣಿವೆನಾಡಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದು. ಈ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಭದ್ರತೆ ಹೆಚ್ಚಳವಾಗಿದೆ. ಹೆದ್ದಾರಿಗಳಲ್ಲಿ ಗಸ್ತು ಹಾಕಲಾಗಿದ್ದು, ಎಲ್ಲಾ ವಾಹನಗಳ ತಪಾಸಣೆ ತೀವ್ರಗೊಂಡಿದೆ.. ಘಟನೆ ಬಳಿಕ ಉಗ್ರರ ರಣಬೇಟೆಗೆ ಕೂಂಬಿಂಗ್​​ ಕಾರ್ಯ ಚುರುಕಾಗಿದೆ.

ಇದನ್ನೂ ಓದಿ:ಪತ್ನಿ ಕಣ್ಮುಂದೆಯೇ ಪತಿಯ ಕೊಂದರು.. ಪ್ಯಾಂಟ್​​ ಬಿಚ್ಚಿಸಿ ಧರ್ಮ ಚೆಕ್.. ಒಂದೊಂದು ಕ್ಷಣವೂ ಭಯಾನಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment