/newsfirstlive-kannada/media/post_attachments/wp-content/uploads/2025/04/pahalgam-terrorist.jpg)
ಪಹಲ್ಗಾಮ್ನಲ್ಲಿ 26 ಅಮಾಯಕರ ಜೀವ ತೆಗೆದ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಇದೀಗ ಸಿಕ್ಕ ಮಾಹಿತಿ ಪ್ರಕಾರ, 26 ಪ್ರವಾಸಿಗರ ಬಲಿ ಪಡೆದ ಓರ್ವ ಶಂಕಿತ ಮನೆ ಉಡೀಸ್ ಆಗಿದೆ.
ಇದನ್ನೂ ಓದಿ:2 ಗಂಟೆಗಳ ಕಾಲ ಸರ್ವಪಕ್ಷ ಸಭೆ; ಗಂಭೀರ ಚರ್ಚೆಯಲ್ಲಿ ರಾಹುಲ್ ಗಾಂಧಿ ಏನಂದ್ರು..?
ಯಾರು ಆತ..?
ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ನಲ್ಲಿರುವ ಉಗ್ರನ ಮನೆಯನ್ನು ಭಾರತೀಯ ಸೇನೆ ಬ್ಲಾಸ್ಟ್ ಮಾಡಿದೆ. ಅಂದ್ಹಾಗೆ ಬ್ಲಾಸ್ಟ್ ಆಗಿರುವ ಮನೆ ಉಗ್ರ ಆಸೀಫ್ ಶೇಖ್ಗೆ ಸೇರಿದೆ. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಆಸೀಫ್ ಶೇಖ್ ಹೆಸರು ಕೇಳಿಬಂದಿದೆ. ಆಸೀಫ್ Lashkar-e-Taiba ಸಂಘಟನೆಯ ಉಗ್ರನಾಗಿದ್ದಾನೆ. ಪಹಲ್ಗಾಮ್ ದಾಳಿ ಮಾಡಿದ ಉಗ್ರರ ಲಿಸ್ಟ್ನಲ್ಲಿ ಈತನೂ ಇದ್ದಾನೆ.
ಪೈಶಾಚಿಕ ದಾಳಿಗೆ 26 ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. ಅವರಲ್ಲಿ ಕರ್ನಾಟಕದ ಇಬ್ಬರು ಸೇರಿದ್ದಾರೆ. ಉಗ್ರರ ಅಮಾನುಷ ದಾಳಿಗೆ ಭಾರತ ಪ್ರತ್ಯುತ್ತರ ನೀಡಬೇಕು ಎಂಬ ಆಗ್ರಹ ಜೋರಾಗಿದೆ. ಅಂತೆಯೇ ಸೇನೆ ತನ್ನ ಕಾರ್ಯಾಚರಣೆಗೆ ಇಳಿದಿದೆ. ಮತ್ತೊಂದು ಕಡೆ ಭಾರತ ಸರ್ಕಾರ ಕೂಡ ಕಠಿಣ ನಿಲುವು ತೆಗೆದುಕೊಂಡಿದೆ. ಉಗ್ರ ಪೋಷಕ ಪಾಕಿಸ್ತಾನಕ್ಕೆ ಪೆಟ್ಟು ನೀಡಿ ಬುದ್ಧಿ ಕಲಿಸಲು ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ