ಹಣೆಯ ಬೊಟ್ಟು, ಕೈ ಬಳೆ ನೋಡಿ ಗುಂಡಿಟ್ರು.. ಶಿವಮೊಗ್ಗದಲ್ಲಿ ಕರಾಳತೆ ಬಿಚ್ಚಿಟ್ಟ ಮಂಜುನಾಥ್ ಮಗ ಅಭಿ ಜೈ!

author-image
Bheemappa
Updated On
ಹಣೆಯ ಬೊಟ್ಟು, ಕೈ ಬಳೆ ನೋಡಿ ಗುಂಡಿಟ್ರು.. ಶಿವಮೊಗ್ಗದಲ್ಲಿ ಕರಾಳತೆ ಬಿಚ್ಚಿಟ್ಟ ಮಂಜುನಾಥ್ ಮಗ ಅಭಿ ಜೈ!
Advertisment
  • ಪಹಲ್ಗಾಮ್​ಗೆ ಹೋದ ಕೇವಲ 10 ನಿಮಿಷಗಳಲ್ಲೇ ಗುಂಡಿನ ದಾಳಿ
  • ನಾವು ಹಿಂದೂ ಎನ್ನುವುದು ಉಗ್ರರಿಗೆ ನೇರವಾಗಿ ಅರ್ಥವಾಯಿತು
  • ನಮ್ಮ ದೇಶದ ಪ್ರಧಾನಿ ಹಾಗೂ ಸೇನೆಯ ಮೇಲೆ ನಮಗೆ ನಂಬಿಕೆ ಇದೆ

ಶಿವಮೊಗ್ಗ: ಜಮ್ಮುಕಾಶ್ಮೀರದ ಪಹಲ್ಗಾಮ್​ನಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ ಮಂಜುನಾಥ್ ಉಸಿರು ಚೆಲ್ಲಿದ್ದಾರೆ. ಸದ್ಯ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಬ್ರಾಹ್ಮಣ ಸಮುದಾಯದಂತೆ ಇಂದು ಶಿವಮೊಗ್ಗದಲ್ಲಿ ನೆರವೇರಿಸಲಾಗುತ್ತಿದೆ. ಇದೇ ವೇಳೆ ಅವರ ಪುತ್ರ ಅಭಿಜೈ ಅವರು ನೋವಿನಲ್ಲೇ ಅಲ್ಲಿ ನಡೆದಂತ ಕರಾಳತೆಯನ್ನು ಕಣ್ಣಿಗೆ ಕಟ್ಟಿದಂತೆ ಹೇಳಿದ್ದಾರೆ.

ನಾವೆಲ್ಲಾ ಪಹಲ್ಗಾಮ್​ಗೆ ಹೋದ ಕೇವಲ 10 ನಿಮಿಷಗಳಲ್ಲೇ ಭಯೋತ್ಪಾದಕರು ಗುಂಡಿನ ದಾಳಿ ಆರಂಭಿಸಿದರು. ಸ್ಥಳದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವಷ್ಟರಲ್ಲಿ ಎಲ್ಲವೂ ಮುಗಿದು ಹೋಗಿತ್ತು. ಉಗ್ರರು ಅಲ್ಲಿ ಚೆನ್ನಾಗಿಯೇ ಓಡಾಡಿಕೊಂಡು ಇದ್ದರು. ಆದರೆ ಸ್ಥಳದಲ್ಲಿ ನೀವು ಹಿಂದೂಗಳ.. ಹಿಂದೂಗಳ ಎಂದು ಕೇಳಿ.. ಕೇಳಿ ಗುಂಡು ಹಾರಿಸಿ ಪ್ರಾಣ ತೆಗೆದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಾರು ಸೀರಿಯಲ್ ನಟ ಶ್ರೀಧರ್ ದಿಢೀರ್‌ ಅಸ್ವಸ್ಥ.. ಬೆಂಗಳೂರಿನ ಆಸ್ಪತ್ರೆಗೆ ದಾಖಲು; ಏನಾಯ್ತು?

publive-image

ಪಹಲ್ಗಾಮ್​ನಲ್ಲಿ ಮಿನಿ ಸ್ವಿಡ್ಜರ್​ಲ್ಯಾಂಡ್​ ಎನ್ನುವ ಪ್ರದೇಶ ಇದೆ. 7 ಪ್ರದೇಶಗಳಿವೆ. ಮಿನಿ ಸ್ವಿಡ್ಜರ್​ಲ್ಯಾಂಡ್​ ಎನ್ನುವುದು 3ನೇ ಪ್ರದೇಶವಾಗಿದೆ. ಆ ದಿನ ನಾನು ಏನು ತಿಂದಿರಲಿಲ್ಲ. ಹಾಗಾಗಿ ಅಪ್ಪ, ಅಮ್ಮ ತಿಂಡಿ ತರೋಕೆ ಹೋಗಿದ್ದರು. ಬಳಿಕ ನನ್ನನ್ನು ಕರೆದುಕೊಂಡು ಬರಲು ಅಮ್ಮನ ವಾಪಸ್ ಕಳಿಸಿದ್ದರು. ಆಗ ಗುಂಡಿನ ಸದ್ದು ಕೇಳಿತು. ನಾವೆಲ್ಲ ಭಾರತೀಯ ಸೇನೆಯ ಅಭ್ಯಾಸ ನಡೆಯುತ್ತಿದೆ ಎಂದು ಅಂದುಕೊಂಡಿದ್ದೇವು.

ಆದರೆ ಏಕಾಏಕಿ ಎಲ್ಲರೂ ಓಡಲು ಆರಂಭಿಸಿದ್ದರಿಂದ ಉಗ್ರರ ದಾಳಿ ಎಂದು ಗೊತ್ತಾಯಿತು. ನಾನು, ಅಮ್ಮ ಇಬ್ಬರು ಕೈ ಹಿಡಿದುಕೊಂಡು ಓಡುವಾಗ ಅಪ್ಪ ಎಲ್ಲಿ ಅಂತ ನೋಡಿದಾಗ ಆವಾಗಲೇ ಶೂಟ್ ಮಾಡಿದ್ದರು. ಸ್ಥಳೀಯರು ನಮಗೆ ಹೆಚ್ಚು ಸಹಾಯ ಮಾಡಿದರು. ಕಾಶ್ಮೀರದಲ್ಲಿ ಪೊಲೀಸ್, ಏರ್​​ಪೋರ್ಟ್​ಗಳಲ್ಲಿ ಸಿಬ್ಬಂದಿ, ಅಧಿಕಾರಿಗಳು ತುಂಬಾ ಸಹಾಯ ಮಾಡಿದರು. ಇವರೆಲ್ಲಾರ ಸಹಾಯದಿಂದ ಇಲ್ಲಿಗೆ ಬಂದು ಮಾತನಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಕೆಲವರ ಹಣೆಯ ಬೊಟ್ಟು ಹಾಗೂ ಕೈ ಬಳೆಗಳನ್ನು ನೊಡಿ ಗುಂಡು ಹಾರಿಸಿದರು. ಇದೇ ವೇಳೆ ನಾವು ಹಿಂದೂಗಳು ಎನ್ನವುದು ಅವರಿಗೆ ನೇರವಾಗಿ ಗೊತ್ತಾಯಿತು. ಇದರಿಂದ ನನ್ನ ತಂದೆಗೆ ಗುಂಡಿಟ್ಟು ಜೀವ ತೆಗೆದರು. ದೇಶದ ಪ್ರಧಾನಿ ಮೋದಿ ಹಾಗೂ ಭಾರತೀಯ ಸೇನೆಯ ಮೇಲೆ ನಮಗೆ ನಂಬಿಕೆ ಇದೆ. ಅವರು ಸರಿಯಾದ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment