ಮಗನಿಗೆ ತಿಂಡಿ ತರೋಕೆ ಹೋದ ಪತಿ ಬರಲೇ ಇಲ್ಲ!​.. ಗಂಡನ ಸಾವು ಕಣ್ಣಾರೆ ಕಂಡ ಹೆಂಡತಿ ನರಕಯಾತನೆ

author-image
Bheemappa
ಉಗ್ರರ ಗುಂಡಿನ ದಾಳಿ.. ಪ್ರಾಣ ಬಿಟ್ಟ ಮಗನ ಬರುವಿಕೆಗಾಗಿ ಕಾದು ಕುಳಿತ ತಾಯಿ
Advertisment
  • ಹಿಂದೂಗಳನ್ನ ಹುಡುಕಿ ಹುಡುಕಿ ಗುಂಡು ಹಾರಿಸಿರುವ ಉಗ್ರರು
  • ಮಗ ದ್ವಿತೀಯ ಪಿಯುಸಿಯಲ್ಲಿ ಪಾಸ್​ ಆಗಿದ್ದಕ್ಕೆ ಕಾಶ್ಮೀರ ಟ್ರಿಪ್
  • ಮೃತ ಮಂಜುನಾಥ್ ಮನೆಯಲ್ಲಿ ಅಕ್ಷರಶಃ ಶೋಕ ಮಡುಗುಟ್ಟಿದೆ

ಶಿವಮೊಗ್ಗ: ಜಮ್ಮುಕಾಶ್ಮೀರದ ಅನಂತ​ನಾಗ್ ಜಿಲ್ಲೆಯ ಪಹಲ್ಗಾಮ್‌​ ನಗರದ ಬಳಿ​ ಪ್ರವಾಸಿಗರ ಮೇಲೆ ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಇದರಲ್ಲಿ ಶಿವಮೊಗ್ಗದ ಮಂಜುನಾಥ್ ಅವರು ಪ್ರಾಣ ಕಳೆದುಕೊಂಡಿದ್ದರು. ಉಗ್ರರು, ಮಂಜುನಾಥ್​​ನ ಜೀವ ತೆಗೆಯಬೇಕಾದ್ರೆ ಪತ್ನಿ ಕಣ್ಣಾರೆ ಕಂಡು ನರಕಯಾತನೆ ಅನುಭವಿಸಿದ್ದಾರೆ.

ಪಹಲ್ಗಾಮ್‌​ನಲ್ಲಿ ನಡೆದ ಘಟನೆಯಲ್ಲಿ ಉಗ್ರರ ಬಂದೂಕಿನಿಂದ ಸಿಡಿದ ಬುಲೆಟ್‌ ಎದೆ ನಡುಗಿಸುತ್ತೆ. ಜೋರಾಗಿ ಕೇಳಿಸಿದ ಆಕ್ರಂದನ, ಎದೆ ನಡುಗಿಸುವ ವಿಡಿಯೋ. ಟಾರ್ಪಲ್​ ಒಳಗಡೆ ಹೆಣಗಳ ರಾಶಿ. ಕಾಶ್ಮೀರದಲ್ಲಿ ನಡೆದ ಪ್ರವಾಸಿಗರ ಹತ್ಯಾಕಾಂಡ ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಮಾರಣ ಹೋಮದಲ್ಲಿ ಹಿಂದೂಗಳನ್ನೆ ಹುಡುಕಿ ಹುಡುಕಿ ಗುಂಡು ಹಾರಿಸಿದ ರಕ್ಕಸರು ಶಿವಮೊಗ್ಗದ ಮಂಜುನಾಥ್​​ ಮೇಲೆಯೂ ಪೈಶಾಚಿಕ ಕೃತ್ಯ ಎಸಗಿದ್ದಾರೆ.

ಇದನ್ನೂ ಓದಿ:ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ.. ಪಾಕ್​​ ಎದೆಯಲ್ಲಿ ಢವಢವ.. ಸೆಕೆಂಡ್ ಸರ್ಜಿಕಲ್ ಸ್ಟ್ರೈಕ್..?

publive-image

ಮಂಜುನಾಥ್ ಪುತ್ರ ದ್ವಿತೀಯ ಪಿಯುಸಿಯಲ್ಲಿ 97% ಅಂಕ ಪಡೆದಿದ್ದ ಹಿನ್ನೆಲೆ ಸಂಭ್ರಮಾಚರಣೆಗೆಂದು ಮಂಜುನಾಥ್ ತಮ್ಮ ಪತ್ನಿ, ಮಗನ ಜೊತೆ ಕನಸಿನ ಊರು ಕಾಶ್ಮೀರಕ್ಕೆ ತೆರಳಿದ್ದರು. ಆದರೆ ಏಪ್ರಿಲ್ 22 ರಂದು ಮಗನಿಗೆ ತಿಂಡಿ ತರೋಕೆ ಅಂತ ಮಂಜುನಾಥ ಆಚೆ ಹೋದಾಗ ಉಗ್ರರು ಗನ್ ಸಮೇತ ದಾಂಗುಡಿಯಿಟ್ಟಿದ್ದರು. ಮಂಜುನಾಥ್​ ದೇಹಕ್ಕೆ ಗುಂಡಿನ ಸುರಿಮಳೈಗೈದಿದ್ದ ಪಾಪಿಗಳು ಕ್ಷಣಾರ್ಧದಲ್ಲೇ ಉಸಿರು ನಿಲ್ಲಿಸಿಬಿಟ್ಟಿದ್ದರು.

ಈ ಪೈಶಾಚಿಕ ಕೃತ್ಯವನ್ನ ಸಾಕ್ಷಿಯಾಗಿದ್ದ ಮಂಜುನಾಥ್ ಪತ್ನಿ ಪಲ್ಲವಿ ಅವರು ತನ್ನ ಗಂಡನ ಸಾವನ್ನ ಕಣ್ಣಾರೆ ಕಂಡಿದ್ದರು. ಆ ಕ್ಷಣ ಅಕ್ಷರಶಃ ನರಕಯಾತನೆಯನ್ನೇ ಅನುಭವಿಸಿದ್ದ ಪಲ್ಲವಿ ಭಯಾನಕ ಕ್ಷಣವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಈಗ ಮೃತ ಮಂಜುನಾಥ್ ಮನೆಯಲ್ಲಿ ಅಕ್ಷರಶಃ ಶೋಕ ಮಡುಗುಟ್ಟಿದೆ. ಮಗನ ಬರುವಿಕೆಗಾಗಿ ಕಾದು ಕುಳಿತಿದ್ದ ಮುಂಜನಾಥ ತಾಯಿ ಎದೆ ಒಡೆದು ಹೋಗಿದೆ. ಪುತ್ರನ ಸಾವಿನ ಸುದ್ಧಿ ಕೇಳಿ ಹೆತ್ತ ಕರುಳು ಇನ್ನಿಲ್ಲದ ಸಂಕಟ ಪಡುತ್ತಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment