/newsfirstlive-kannada/media/post_attachments/wp-content/uploads/2025/07/pahalgam-attack.jpg)
ಜಮ್ಮು ಕಾಶ್ಮೀರದ ಪೆಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆದ 97 ದಿನದ ಬಳಿಕ ಉಗ್ರರನ್ನು ಮಟ್ಟ ಹಾಕುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಇಂದು ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದ ಹೊರವಲಯದ ಲಿಡವಾಸ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೂವರು ವಿದೇಶಿ ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯಸೇನೆ ಯಶಸ್ವಿಯಾಗಿದೆ.
ಸೇನೆ-ಉಗ್ರರ ಎನ್ಕೌಂಟರ್ನಲ್ಲಿ ಹಸೀಮ್ ಮುಸಾ ಅಲಿಯಾಸ್ ಸುಲೇಮಾನ್ ಶಾ ಸಾವನ್ನಪ್ಪಿದ್ದಾನೆ. ಪೆಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಈ ಹಸೀಮ್ ಮುಸಾ ಅಲಿಯಾಸ್ ಸುಲೇಮಾನ್ ಶಾ. ಈತ ಕಳೆದ ವರ್ಷ ಶ್ರೀನಗರ-ಸೋನಮಾರ್ಗ್ ಹೆದ್ದಾರಿಯಲ್ಲಿ ನಡೆದಿದ್ದ 7 ಜನರ ಹತ್ಯೆ ಕೇಸ್ ನಲ್ಲೂ ಭಾಗಿಯಾಗಿದ್ದ. ಬಳಿಕ ಪೆಹಲ್ಗಾಮ್ ದಾಳಿಯ ಪ್ರಮುಖ ದಾಳಿಕೋರನಾಗಿದ್ದ. ಈಗ ಈತನ ಹೊಡೆದುರುಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಸಾವನ್ನಪ್ಪಿದ ಉಗ್ರರ ಬಳಿ ಇದ್ದ 17 ಗ್ರೇನೇಡ್, 2 ಎಕೆ-47 ರೈಫಲ್, ಒಂದು ಎಂ-4 ಕಾರ್ಬೈನ್ ಅನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಸಂಜಯ್ ದತ್ ಮೇಲಿನ ಅಭಿಮಾನ.. ಸಾವಿಗೂ ಮುನ್ನ ನೆಚ್ಚಿನ ನಟನಿಗೆ 72 ಕೋಟಿ ಆಸ್ತಿ ದಾನ; ಮುಂದೇನಾಯ್ತು..?
ಈ ಅಪರೇಷನ್ಗೆ ಆಪರೇಷನ್ ಮಹಾದೇವ ಎಂಬ ಹೆಸರು ಇಡಲಾಗಿದೆ. ಲಿಡವಾಸ್ ಮತ್ತು ಮೌಂಟ್ ಮಹಾದೇವ ಬೆಟ್ಟಗಳ ಮಧ್ಯೆ ಈ ಎನ್ ಕೌಂಟರ್ ನಡೆದಿದ್ದರಿಂದ ಈ ಅಪರೇಷನ್ಗೆ ಆಪರೇಷನ್ ಮಹಾದೇವ ಎಂದು ಹೆಸರಿಡಲಾಗಿದೆ.
ಇಂಟಲಿಜೆನ್ಸ್ ಮಾಹಿತಿ ಆಧಾರದ ಮೇಲೆ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಯೋಧರು ಉಗ್ರರ ಜೊತೆ ಎನ್ಕೌಂಟರ್ ನಡೆಸಿದ್ದರು . ಡ್ರೋನ್ ಕ್ಯಾಮರಾದಲ್ಲಿ ಮೂವರು ಉಗ್ರರು ಸಾವನ್ನಪ್ಪಿ ಬಿದ್ದಿರೋದು ಸೆರೆಯಾಗಿದೆ. ಶ್ರೀನಗರದ ಹೊರವಲಯದ ಡಚಿಗಮ್ ಅರಣ್ಯ ಪ್ರದೇಶದಲ್ಲಿ ಎನ್ಕೌಂಟರ್ ನಡೆದಿದೆ. ಮೂವರು ಲಷ್ಕರ್-ಇ-ತೋಯ್ಬಾ ಉಗ್ರಗಾಮಿ ಸಂಘಟನೆಯ ಉಗ್ರರು. ಹಸೀಮ್ ಮುಸಾ ಗ್ಯಾಂಗ್ ಪೆಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿತ್ತು.
ಇದನ್ನೂ ಓದಿ: ಪಹಲ್ಗಾಮ್ ದಾಳಿ ದೇಶದಲ್ಲೇ ಬೆಳೆದ ಉಗ್ರರಿಂದ ಆಗಿರಬಹುದು ಎಂದ ಚಿದಂಬರಂ -ಸಂಸತ್ನಲ್ಲಿ ಇಂದು ಅಪರೇಷನ್ ಸಿಂಧೂರ್’ ಚರ್ಚೆ
ಪೆಹಲ್ಗಾಮ್ ದಾಳಿಕೋರ ಈ ಹಸೀಮ್ ಮುಸಾನೇ ಅನ್ನೋದನ್ನು ಭಾರತೀಯ ಸೇನೆ, ಜಮ್ಮು ಕಾಶ್ಮೀರ ಪೊಲೀಸರು, ಸಿಆರ್‌ಪಿಎಫ್ ಯೋಧರು ಪರಿಶೀಲನೆ ನಡೆಸಿ ದೃಢಪಡಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ಲಿಡವಾಸ್ ಪ್ರದೇಶದಲ್ಲಿ ಉಗ್ರರ ಚಲನವಲನ ಪತ್ತೆಯಾಗಿತ್ತು. ಬಳಿಕ ಹೆಚ್ಚಿನ ಸಂಖ್ಯೆಯ ಯೋಧರನ್ನು ಸ್ಥಳಕ್ಕೆ ಕರೆಸಿಕೊಂಡು ಉಗ್ರರ ಜೊತೆ ಎನ್ ಕೌಂಟರ್ ನಡೆಸಲಾಗಿತ್ತು. ಜಮ್ಮು ಕಾಶ್ಮೀರದಲ್ಲಿ ಸದ್ಯ 150 ಉಗ್ರಗಾಮಿಗಳು ಪಾಕ್ ಕಡೆಯಿಂದ ಒಳ ನುಸುಳಿದ್ದಾರೆ ಎಂಬ ಮಾಹಿತಿ ಭಾರತದ ಇಂಟಲಿಜೆನ್ಸ್ಗೆ ಸಿಕ್ಕಿದೆ.
ಇದನ್ನೂ ಓದಿ: ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ಖಡಕ್ ಮಾತು.. ನ್ಯೂಸ್ಫಸ್ಟ್ ಜೊತೆ ಎಕ್ಸ್ಕ್ಲೂಸಿವ್ ಟಾಕು..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ