ಪಹಲ್ಗಾಮ್ ಘೋರ ದುರಂತ ಮರುಸೃಷ್ಟಿಸಿದ ಭರ್ಜರಿ ಬ್ಯಾಚ್ಯುಲರ್ಸ್ ವೇದಿಕೆ; ಎಲ್ಲರೂ ಭಾವುಕ!

author-image
Veena Gangani
Updated On
ಪಹಲ್ಗಾಮ್ ಘೋರ ದುರಂತ ಮರುಸೃಷ್ಟಿಸಿದ ಭರ್ಜರಿ ಬ್ಯಾಚ್ಯುಲರ್ಸ್ ವೇದಿಕೆ; ಎಲ್ಲರೂ ಭಾವುಕ!
Advertisment
  • ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ ಭರ್ಜರಿ ಬ್ಯಾಚುಲರ್ಸ್
  • ಏಪ್ರಿಲ್ 22ರಂದು ಪಹಲ್ಗಾಮ್​ನಲ್ಲಿ ನಡೆದಿದ್ದ ಘೋರ ದುರಂತ
  • ದರ್ಶನ್, ಅಪೇಕ್ಷಾ ಜೋಡಿ ಪರ್ಫಾರ್ಮೆನ್ಸ್ ನೋಡಿ ಎಲ್ಲರೂ ಭಾವುಕ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಇದೇ ಶೋನಲ್ಲಿ 10 ಮಂದಿ ಬ್ಯಾಚುಲರ್ಸ್​ಗಳಿಗೆ 10 ಸುಂದರಿಯರು ಮೆಂಟರ್ಸ್ ಆಗಿದ್ದಾರೆ. ವಾರದಿಂದ ವಾರಕ್ಕೆ ಬ್ಯಾಚುಲರ್ಸ್​ಗಳು ಚೇಂಚ್​ ಆಗ್ತಿದ್ದಾರೆ.

ಇದನ್ನೂ ಓದಿ: ಇವತ್ತೇ SSLC ಫಲಿತಾಂಶ ಪ್ರಕಟ; ಮಕ್ಕಳೇ ನಿಮ್ಮ ರಿಸಲ್ಟ್ ನೋಡೋದು ಹೇಗೆ..?

publive-image

ಕಳೆದ ವಾರ ಭರ್ಜರಿ ಬ್ಯಾಚುಲರ್ಸ್ 2 ಶೋನಲ್ಲಿ ಫ್ಯಾಮಿಲಿ ರೌಂಡ್‌ ನಡೆದಿತ್ತು. ಆದ್ರೆ ಈ ವಾರ
ಮನರಂಜನಾ ಸುತ್ತು (Entertainment Round) ನಡೆಯಲಿದೆ. ಹೀಗಾಗಿ ಜೀ ಭರ್ಜರಿ ಬ್ಯಾಚುಲರ್ಸ್‌ ಪ್ರೋಮೋಗಳನ್ನು ಒಂದೊಂದಾಗಿ ಬಿಡುಗಡೆ ಮಾಡುತ್ತಿದೆ. ಇದೀಗ ಭರ್ಜರಿ ಬ್ಯಾಚುಲರ್ಸ್‌ ವೇದಿಕೆ ಮೇಲೆ ದರ್ಶನ್ ಹಾಗೂ ಅಪೇಕ್ಷಾ ಜೋಡಿ ಮಾಡಿದ ಆ ಒಂದು ಪರ್ಫಾರ್ಮೆನ್ಸ್ ನೋಡಿ ಎಲ್ಲರೂ ಭಾವುಕರಾಗಿದ್ದಾರೆ.

ಹೌದು, ಏಪ್ರಿಲ್ 22ರಂದು ನಡೆದ ಘೋರ ದುರಂತವನ್ನು ಭರ್ಜರಿ ಬ್ಯಾಚುಲರ್ಸ್‌ ಮರು ಸೃಷ್ಟಿ ಮಾಡಿದೆ. ಹನಿಮೂನ್​ಗೆಂದು ಪಹಲ್ಗಾಮ್​ಗೆ ಬಂದಿದ್ದ ನವ ಜೋಡಿಯನ್ನು ಭಯೋತ್ಪಾದಕರು ಕೊಂದು ಹಾಕಿದ್ದರು. ಮದುವೆಯಾಗಿ ಕೇವಲ 6 ದಿನಕ್ಕೆ ಪತಿಯನ್ನು ಕಳೆದುಕೊಂಡಿದ್ದ ಆ ಮಹಿಳೆಯ ಸ್ಥಿತಿ ಹೇಗಿತ್ತು ಎಂದು ಭರ್ಜರಿ ಬ್ಯಾಚುಲರ್ಸ್‌ ಜೋಡಿ ಪರ್ಫಾರ್ಮೆನ್ಸ್ ಮೂಲಕ ಮಾಡಿ ತೋರಿಸಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರೂ 1 ನಿಮಿಷ ಮೇಣದ ಬತ್ತಿ ಹಿಡಿದುಕೊಂಡು ಮೌನಾಚರಣೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment