ಹೆಸರು ಹೇಳ್ತಿದ್ದಂತೆಯೇ ಪತಿಯ ಹಣೆಗೆ ಗುಂಡಿಟ್ಟರು.. 2 ತಿಂಗಳ ಹಿಂದೆ ಮದ್ವೆಯಾಗಿದ್ದ ನವವಧು ಕಣ್ಣೀರು

author-image
Veena Gangani
Updated On
ಹೆಸರು ಹೇಳ್ತಿದ್ದಂತೆಯೇ ಪತಿಯ ಹಣೆಗೆ ಗುಂಡಿಟ್ಟರು.. 2 ತಿಂಗಳ ಹಿಂದೆ ಮದ್ವೆಯಾಗಿದ್ದ ನವವಧು ಕಣ್ಣೀರು
Advertisment
  • 2 ತಿಂಗಳ ಹಿಂದಯಷ್ಟೇ ಮದುವೆಯಾಗಿದ್ದ ವ್ಯಕ್ತಿ ಕೂಡ ದುರಂತ ಅಂತ್ಯ
  • ಭಯೋತ್ಪಾದಕ ದಾಳಿಯಲ್ಲಿ ಮೃತರ ಸಂಖ್ಯೆ 26
  • ಉತ್ತರ ಪ್ರದೇಶದ ಕಾನ್ಪುರ ಮೂಲದ ಶುಭಂ ದ್ವಿವೇದಿ ಇನ್ನಿಲ್ಲ

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 26 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರೆಲ್ಲ ಪುರುಷರು. ಫ್ಯಾಮಿಲಿ ಟ್ರಿಪ್ ಹಾಗೂ ಹನಿಮೂನ್​​ಗೆ ಬಂದವರನ್ನೇ ಟಾರ್ಗೆಟ್ ಮಾಡಿ ಭಯೋತ್ಪಾದಕರು ಹೊಡೆದಿದ್ದಾರೆ. ಜೀವ ಕಳೆದುಕೊಂಡವರ 26 ಮಂದಿಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಕತೆ ಇದೆ. 7 ದಿನದ ಹಿಂದೆ ಮದುವೆ ಆಗಿ ಹನಿಮೂನ್​ಗೆ ಬಂದ ನೌಕಾಧಿಕಾರಿಯ ದುರಂತ ಅಂತ್ಯ ತಿಳಿದು ಅದೆಷ್ಟೋ ಮಂದಿ ಕಣ್ಣೀರಾದರು. ಇದೀಗ ಅದೇ ರೀತಿಯ ಮತ್ತೊಂದು ನೋವಿನ ಸಂಗತಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಉಗ್ರರ ಗುಂಡಿನ ದಾಳಿ.. ಪ್ರಾಣ ಬಿಟ್ಟ ಮಗನ ಬರುವಿಕೆಗಾಗಿ ಕಾದು ಕುಳಿತ ತಾಯಿ

2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿಯೊಬ್ಬರು ಭಯೋತ್ಪಾದಕರ ದಾಳಿಗೆ ಜೀವಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ ಮೂಲದ ಶುಭಂ ದ್ವಿವೇದಿ (31) ಕಳೆದ ಫೆಬ್ರವರಿ ಫೆಬ್ರವರಿ 12ರಂದು ಮದುವೆಯಾಗಿದ್ದರು. ಹೀಗಾಗಿ ಏಪ್ರಿಲ್‌ನಲ್ಲಿ ಪತ್ನಿ ಜೊತೆ ಕಾಶ್ಮೀರಕ್ಕೆ ಪ್ರವಾಸ ಕೈಗೊಂಡಿದ್ದರು.

ಭಯೋತ್ಪಾದಕರು ಒಬ್ಬೊಬ್ಬರನ್ನೆ ಮುಗಿಸಿ ಬರುತ್ತಿದ್ದರು. ನಮ್ಮ ಬಳಿ ಬಂದು ಪತಿಯ ಹೆಸರು ಕೇಳಿದರು. ಹೆಸರು ಹೇಳುತ್ತಿದ್ದಂತೆಯೇ ಗುಂಡಿಟ್ಟಿದ್ದಾರೆ ಎಂದು ಶುಭಂ ದ್ವಿವೇದಿ ಪತ್ನಿ ಕಣ್ಣೀರು ಇಟ್ಟಿದ್ದಾರೆ. ಇನ್ನು ಪತಿ ಮೇಲಿನ ದಾಳಿ ವಿಚಾರವನ್ನು ಪತ್ನಿ ತನ್ನ ಚಿಕ್ಕಪ್ಪನಿಗೆ ಕರೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment