/newsfirstlive-kannada/media/post_attachments/wp-content/uploads/2025/04/pahalgam-manjunath-rao.jpg)
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಭೀಕರ ದಾಳಿಯಲ್ಲಿ ಭಾರತದ ಹಲವು ರಾಜ್ಯದ ಪ್ರವಾಸಿಗರು ಬಲಿಯಾಗಿದ್ದಾರೆ. ಉಗ್ರರ ನರಮೇಧದಲ್ಲಿ ಒಟ್ಟು 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಕರ್ನಾಟಕದ ಮಂಜುನಾಥ್ ರಾವ್ ಹಾಗೂ ಭರತ್ ಭೂಷಣ್ ಕೂಡ ಉಸಿರು ನಿಲ್ಲಿಸಿದ್ದಾರೆ.
ಇದನ್ನೂ ಓದಿ:ಹಣೆಯ ಬೊಟ್ಟು, ಕೈ ಬಳೆ ನೋಡಿ ಗುಂಡಿಟ್ರು.. ಶಿವಮೊಗ್ಗದಲ್ಲಿ ಕರಾಳತೆ ಬಿಚ್ಚಿಟ್ಟ ಮಂಜುನಾಥ್ ಮಗ ಅಭಿ ಜೈ!
ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ್ದ ದಾಳಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಪೈಶಾಚಿಕ ಕೃತ್ಯ ನಡೆಸಿರುವ ಭಯೋತ್ಪಾದಕರ ವಿರುದ್ಧ ಪ್ರತೀಕಾರ ಆಗಲೇಬೇಕು ಎಂಬ ಕೂಗು ಜೋರಾಗಿದೆ. ಇದರ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ದಾಳಿಗೂ ಮೊದಲು ಮಂಜುನಾಥ್ ರಾವ್ ಕುಟುಂಬ ಪಹಲ್ಗಾಮ್ ಎಷ್ಟು ಎಂಜಾಯ್ ಮಾಡ್ತಾ ಇದ್ರು ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ.
ಮಗ ದ್ವಿತೀಯ ಪಿಯುಸಿಯಲ್ಲಿ ಚೆನ್ನಾಗಿ ಅಂಕ ಕಳಿಸಿದ್ದ ಅಂತ ಕಾಶ್ಮೀರಕ್ಕೆ ಹೋಗೋಣ ಅಂತ ಪ್ಲಾನ್ ಮಾಡಿಕೊಂಡಿದ್ದರು. ಅದರಂತೆ ಶಿವಮೊಗ್ಗದ ಮಂಜುನಾಥ್ ರಾವ್, ಪತ್ನಿ ಪಲ್ಲವಿ ಹಾಗೂ ಮಗ ಅಭಿಜೈ ಒಟ್ಟಾಗಿ ಖುಷಿ ಖುಷಿಯಾಗಿ ಕಾಶ್ಮೀರ ಪ್ರವಾಸದಲ್ಲಿತ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ ದಾಳಿಯಾಗೋ ಮೊದಲು ಈ ಕಟುಂಬ ಫೋಟೋಶೂಟ್ ಮಾಡಿಸಿಕೊಂಡಿದೆ.
View this post on Instagram
ಮಗ ಅಭಿಜೈ, ಮಂಜುನಾಥ್ ರಾವ್, ಪತ್ನಿ ಪಲ್ಲವಿ ದಂಪತಿ ಒಟ್ಟಾಗಿ ಒಂದೇ ಫ್ರೇಮ್ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ನೋಡಿದ್ರೆ ಕರಳು ಚುರುಕ್ ಅನ್ನುವಂತಿದೆ. ಅಷ್ಟು ಮುದ್ದಾಗಿದೆ ಈ ಕುಟುಂಬ. ಆದ್ರೆ ರಾಕ್ಷಕರು ಏಕಾಏಕಿ ಬಂದು ತುಂಬಾ ಖುಷಿಯಾಗಿ ಕಾಶ್ಮೀರದ ಸೌಂದರ್ಯವನ್ನು ಅನುಭವಿಸುತ್ತಿದ್ದ ಕುಟುಂಬದ ಮೇಲೆ ಗುಂಡಿನ ಮಳೆಗೈದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ