ಪಹಲ್ಗಾಮ್ ಉಗ್ರರ ದಾಳಿ.. ದೆಹಲಿ ಪಾಕಿಸ್ತಾನ ಹೈ ಕಮಿಷನ್ ಕಚೇರಿಗೆ ಕೇಕ್‌; ವಿಡಿಯೋ ಇಲ್ಲಿದೆ!

author-image
admin
Updated On
ಪಹಲ್ಗಾಮ್ ಉಗ್ರರ ದಾಳಿ.. ದೆಹಲಿ ಪಾಕಿಸ್ತಾನ ಹೈ ಕಮಿಷನ್ ಕಚೇರಿಗೆ ಕೇಕ್‌; ವಿಡಿಯೋ ಇಲ್ಲಿದೆ!
Advertisment
  • ಪಾಕಿಸ್ತಾನ ರಾಯಭಾರಿಗಳಿಗೆ ದೇಶ ಬಿಟ್ಟು ತೊಲಗಲು ಡೆಡ್‌ಲೈನ್
  • ಪಹಲ್ಗಾಮ್‌ ದಾಳಿಯ 2 ದಿನದ ಬಳಿಕ ಕೇಕ್‌ ತರಿಸಿದ್ದು ಯಾಕೆ?
  • ದೆಹಲಿಯಲ್ಲಿರುವ ಕಚೇರಿಗೆ ಕೇಕ್ ತರಿಸಿಕೊಂಡ ಪಾಕಿಸ್ತಾನ ಹೈ-ಕಮಿಷನ್!

ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದಿರುವ ಭಯಾನಕ ದಾಳಿ, ಉಗ್ರರ ನರಮೇಧ ಇಡೀ ಭಾರತವೇ ಕುದಿಯುವಂತೆ ಮಾಡಿದೆ. ಆಕ್ರೋಶ, ಪ್ರತೀಕಾರದ ಕಿಚ್ಚು ಪ್ರಜ್ವಲಿಸುತ್ತಿರುವಾಗಲೇ ದೆಹಲಿಯಲ್ಲಿರುವ ಪಾಕಿಸ್ತಾನ ಹೈ ಕಮಿಷನ್ ಕಚೇರಿಗೆ ಕೇಕ್ ತರಿಸಿಕೊಂಡಿರುವುದು ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಉಗ್ರರ ದಾಳಿ ಬಳಿಕ ಭಾರತ ಸರ್ಕಾರ ಪಾಕಿಸ್ತಾನ ರಾಯಭಾರಿಗಳಿಗೆ ದೇಶ ಬಿಟ್ಟು ತೊಲಗಲು ಡೆಡ್‌ಲೈನ್ ಕೊಟ್ಟಿದೆ. ಇಸ್ಲಾಮಾಬಾದ್‌ ಭಾರತೀಯ ಹೈಕಮಿಷನ್‌ನಲ್ಲಿರೋ ಅಧಿಕಾರಿಗಳಿಗೂ ಭಾರತಕ್ಕೆ ವಾಪಸ್‌ ಬರುವ ಸೂಚನೆ ನೀಡಿದೆ.

ಇದನ್ನೂ ಓದಿ: ಪಾಕ್​ಗೆ ಹೋದವರು ಮೇ 1ರೊಳಗೆ ಬರ್ಬೇಕು; ಭಾರತದಲ್ಲಿರೋ ಪಾಕಿಸ್ತಾನಿಯರಿಗೆ ತೊಲಗಲು ಡೆಡ್​ಲೈನ್​..! 

ಭಾರತದ ಈ ಡೆಡ್‌ಲೈನ್‌ ಮಧ್ಯೆ ದೆಹಲಿಯ ಪಾಕಿಸ್ತಾನದ ಹೈ ಕಮಿಷನ್ ಕಚೇರಿ ಬಳಿ ಈ ಘಟನೆ ನಡೆದಿದೆ. ಪಹಲ್ಗಾಮ್‌ ದಾಳಿಯ 2 ದಿನದ ಬಳಿಕ ವ್ಯಕ್ತಿಯೊಬ್ಬ ಪಾಕ್ ಹೈ ಕಮಿಷನ್ ಕಚೇರಿಗೆ ಕೇಕ್‌ ತೆಗೆದುಕೊಂಡು ಬಂದಿದ್ದಾನೆ.


">April 24, 2025

ಪಾಕಿಸ್ತಾನ ಹೈ-ಕಮಿಷನ್ ಕಚೇರಿ ಈ ಕೇಕ್‌ ಬುಕ್‌ ಮಾಡಿರುವ ಸಾಧ್ಯತೆ ಇದೆ. ಪಾರ್ಸಲ್‌ನಲ್ಲಿ ಕೇಕ್‌ ತೆಗೆದುಕೊಂಡು ಬಂದಿರುವ ವ್ಯಕ್ತಿ ಪ್ರಶ್ನೆಗೆ ಉತ್ತರಿಸಲು ಹಿಂದೇಟು ಹಾಕಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಎಷ್ಟೇ ಪ್ರಶ್ನಿಸಿದರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಕ್‌ ಜೊತೆಗೆ ಒಂದು ಮಾತನಾಡದೇ ಈ ವ್ಯಕ್ತಿ ತೆರಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment