ಪತ್ನಿ ಕಣ್ಮುಂದೆಯೇ ಪತಿಯ ಕೊಂದರು.. ಪ್ಯಾಂಟ್​​ ಬಿಚ್ಚಿಸಿ ಧರ್ಮ ಚೆಕ್.. ಒಂದೊಂದು ಕ್ಷಣವೂ ಭಯಾನಕ..!

author-image
Ganesh
Updated On
ಪತ್ನಿ ಕಣ್ಮುಂದೆಯೇ ಪತಿಯ ಕೊಂದರು.. ಪ್ಯಾಂಟ್​​ ಬಿಚ್ಚಿಸಿ ಧರ್ಮ ಚೆಕ್.. ಒಂದೊಂದು ಕ್ಷಣವೂ ಭಯಾನಕ..!
Advertisment
  • ಕೊಲ್ಲುವ ಮುನ್ನ ಕಲ್ಮಾ ಪಠಿಸಲು ಹೇಳಿದ ಉಗ್ರರು
  • ಎದೆ ನಡುಗಿಸುತ್ತೆ ಉಗ್ರರು ಸಿಡಿಸಿದ ಬುಲೆಟ್‌ ಸದ್ದು
  • ನಮ್ಮನ್ನು ಸಾಯ್ಸಿ ಅಂದಿದ್ದಕ್ಕೆ ಮೋದಿಗೆ ಹೇಳು ಅಂದ ಉಗ್ರ

ಕೆಲ ವರ್ಷಗಳಿಂದ ಶಾಂತವಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಕರಿನೆರಳು ನೆಟ್ಟಿದೆ. ಪಹಲ್ಗಾಮ್‌ನಲ್ಲಿ ಕಂಡುಕೇಳಿರದ ಭೀಕರ ಅಟ್ಯಾಕ್​ ನಡೆದಿದೆ. ಉಗ್ರರ ಅಟ್ಟಹಾಸದ ಒಂದೊಂದು ದೃಶ್ಯಗಳು ಘಟನೆಯ ಭೀಕರತೆಯನ್ನ ಬಿಚ್ಚಿಟ್ಟಿದೆ.

ಪತ್ನಿಯ ಕಣ್ಣಮುಂದೆಯೇ ಜೀವಬಿಟ್ಟ ಪತಿ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ನವ ವಿವಾಹಿತ ಶುಭಮ್ ದ್ವಿವೇದಿ ಬಲಿಯಾಗಿದ್ದಾನೆ. ಫೆಬ್ರವರಿಯಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ಶುಭಮ್‌, ಪತ್ನಿಯ ಜೊತೆ ಹನಿಮೂನ್‌ ಬಂದಿದ್ದ. ಆದ್ರೆ ಪತ್ನಿ ಕೈಯಲ್ಲಿದ್ದ ಮಹೆಂದಿ ಅಳಸುವ ಮುನ್ನವೇ ಶುಭಮ್ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾನೆ. ಪತಿ ಶವದ ಮುಂದೆ ಕುಳಿತು ನವ ವಧು ಕಣ್ಣೀರಿಟ್ಟಿರೋ ಫೋಟೋ ಹೃದಯ ಹಿಂಡುವಂತಿದೆ.

publive-image

ಎದೆ ನಡುಗಿಸುತ್ತೆ ಉಗ್ರರು ಸಿಡಿಸಿದ ಬುಲೆಟ್‌ ಸದ್ದು

ಪಹಲ್ಗಾಮ್‌ನಲ್ಲಿ ಪ್ರವಾಸಿಗನೊಬ್ಬ ವಾಕಿಂಗ್‌ ಮಾಡ್ತಿದ್ದ.. ಈ ವೇಳೆ ಉಗ್ರರು ಅಟ್ಟಹಾಸ ಮೆರೆದ ದೃಶ್ಯ, ಕ್ಯಾಮೆರಾದಲ್ಲಿ ಸೆರೆಯಾಗಿದೆ.. ಗುಂಡೇಟಿನ ಶಬ್ದ ಕೇಳಿಸ್ತಿದ್ದಂತೆ ಮಹಿಳೆಯರ ಆಕ್ರಂದನ ಎದೆ ನಡುಗಿಸ್ತಿದೆ.

publive-image

ಉಗ್ರರ ದಾಳಿ ನಡೀತಿದ್ದಾಗ್ಲೇ ಪ್ರವಾಸಿಗನೊಬ್ಬನ ವಿಡಿಯೋ

ಮತ್ತೊಂದೆಡೆ, ಉಗ್ರರ ದಾಳಿ ನಡೀತಿದ್ದಾಗ್ಲೇ ಪ್ರವಾಸಿಗನೊಬ್ಬ ವಿಡಿಯೋ ಮಾಡಿದ್ದಾನೆ. ಉಗ್ರರ ದಾಳಿ ನಡೆದಿದೆ.. ನಾವು ಸ್ವಲ್ಪದ್ರಲ್ಲಿಯೇ ಬಚಾವ್ ಆದ್ವಿ, ಭಗವಂತ ರಕ್ಷಣೆ ಮಾಡ್ತಾನೆ, ಭಗವಂತನ ಕೃಪೆ, ಬಚಾವ್ ಆಗ್ತೀವಿ ಅಂತ ಹೇಳ್ತಿರೋ ದೃಶ್ಯ ಉಗ್ರರ ಅಟ್ಟಹಾಸದ ಭೀಕರತೆಯನ್ನ ಬಿಚ್ಚಿಟ್ಟಿದೆ.

ಸಹಾಯಕ್ಕಾಗಿ ಸ್ಥಳೀಯರ ಬಳಿ ಅಂಗಲಾಚಿದ ಮಹಿಳೆ

ಉಗ್ರರ ದಾಳಿ ಬಳಿಕ ಸ್ಥಳಕ್ಕೆ ವ್ಯಕ್ತಿ ಬಳಿ ಬಂದ ಮಹಿಳೆಯೊಬ್ಬಳು ಸಹಾಯಕ್ಕಾಗಿ ಅಂಗಲಾಚಿರುವ ದೃಶ್ಯ ಕರುಳು ಹಿಂಡುವಂತಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹಗಳನ್ನು ಕಂಡು ಮರುಕು ವ್ಯಕ್ತಪಡಿಸಿದ ವ್ಯಕ್ತಿ, ಮಹಿಳೆಗೆ ನೀವು ಟೆನ್ಷನ್​​​​​ ತೆಗದುಕೊಳ್ಳಬೇಡಿ.. ಮೇಡಂ ನಾವಿದ್ದೇವೆ ಅಂತ ಧೈರ್ಯ ತುಂಬುವ ಕೆಲಸ ಮಾಡಿದ್ದಾನೆ.

ಪ್ಯಾಂಟ್​​ ಬಿಚ್ಚಿಸಿ ಧರ್ಮ ಚೆಕ್​​ ಮಾಡಿದ ನೀಚರು

ಹಿಂದೂ ಪ್ರವಾಸಿಗರನ್ನೇ ಗುರಿಯಾಗಿಸಿ ದಾಳಿ ನಡೆಸಿದ ನೀಚರು, ದಾಳಿ ಮಾಡುವ ಮುನ್ನ ಪ್ರತಿಯೊಬ್ಬ ವ್ಯಕ್ತಿಯ ಪ್ಯಾಂಟ್​​ ಬಿಚ್ಚಿಸಿ ಧರ್ಮ ಚೆಕ್​​ ಮಾಡಿ ಬಳಿಕ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಗುಂಡು ಹಾರಿಸುವ ಮುನ್ನ ಇಸ್ಲಾಂನಲ್ಲಿ ನಂಬಿಕೆಯ ಔಪಚಾರಿಕ ಘೋಷಣೆಯನ್ನ ಸೂಚಿಸುವ ಕಲ್ಮಾವನ್ನು ಪಠಿಸಲು ಹೇಳಿದ್ದಾರೆ ಎಂಬ ವಿಷಯ ಬೆಚ್ಚಿ ಬೀಳಿಸುತ್ತಿದೆ.

ನಮ್ಮನ್ನು ಸಾಯ್ಸಿ ಅಂದಿದ್ದಕ್ಕೆ ಮೋದಿಗೆ ಹೇಳು ಅಂದ ಉಗ್ರ

ಉಗ್ರರ ದಾಳಿಯಲ್ಲಿ ಶಿವಮೊಗ್ಗದ ಉದ್ಯಮಿ ಮಂಜುನಾಥ್ ಬಲಿ ಆಗಿದ್ದಾರೆ.. ಸ್ಥಳದಲ್ಲೇ ಇದ್ದ ಮಂಜುನಾಥ್​​​ ಪತ್ನಿ, ನನ್ನ ಗಂಡನನ್ನ ಕೊಂದ್ರಿ, ನನ್ನೂ ಸಾಯಿಸಿ ಅಂತ ಕೇಳಿದ್ದಾರೆ. ನೀವು ಹೋಗಿ ಮೋದಿಗೆ ಹೇಳಿ ಅಂತ ಪರಾರಿ ಆಗಿದ್ದಾನೆ.
ಕಾಶ್ಮೀರದ ಸುಂದರ ಸೌಂದರ್ಯ ಸವಿಯಲು ಹೋದ ಪ್ರವಾಸಿಗರು ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಮನುಷ್ಯತ್ವ ಇಲ್ಲದೇ ಧರ್ಮಾಧಾರಿತವಾಗಿ ಹಿಂದೂಗಳನ್ನ ಹುಡುಕಿ ಹುಡುಕಿ ಕೊಂದಿರುವುದು ನಿಜಕ್ಕೂ ಖಂಡನೀಯ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕನಾಮಿಕ್​ ಕಾರಿಡಾರ್​​ನಿಂದ ಲಾಭವೋ ಲಾಭ.. ಈ ಏರಿಯಾದಲ್ಲಿ ಇನ್ವೆಸ್ಟ್​ ಮಾಡಬಹುದಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment