/newsfirstlive-kannada/media/post_attachments/wp-content/uploads/2025/04/Ranjan_Pahalgam.jpg)
ನವದೆಹಲಿ: ಜಮ್ಮುಕಾಶ್ಮೀರದ ಪಹಲ್ಗಾಮ್ ನಗರದ ಬಳಿಯ ಬೈಸರನ್ ಕಣಿವೆ ಮಿನಿ ಸ್ವಿಟ್ಜರ್ಲೆಂಡ್ ಎಂದು ಖ್ಯಾತಿ ಪಡೆದಿದೆ. ಇಲ್ಲಿಗೆ ಪ್ರವಾಸಕ್ಕೆಂದು ಹೋಗಿದ್ದವರು ಭಯೋತ್ಪಾದನಕರ ಗುಂಡಿನ ದಾಳಿಗೆ ಪ್ರಾಣ ಬಿಟ್ಟಿದ್ದಾರೆ. ಇದರಲ್ಲಿ ಬಿಹಾರ ಮೂಲದ ಐಬಿ (Intelligence Bureau) ಅಧಿಕಾರಿ ಮನೀಶ್ ರಂಜನ್, ತನ್ನ ಕುಟುಂಬದೊಂದಿಗೆ ರಜೆ ಕಳೆಯಲು ಬೈಸರನ್ಗೆ ಹೋಗಿ, ಅಲ್ಲಿ ಪತ್ನಿ ಮತ್ತು ಹಾಗೂ ಮಕ್ಕಳ ಮುಂದೆಯೇ ಉಸಿರು ಚೆಲ್ಲಿದ್ದಾರೆ.
ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಬೈಸರನ್ ಕಣಿವೆಗೆ ಬರುವ ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಉಗ್ರವಾದಿಗಳು ಏಕಾಏಕಿ ಬಂದೂಕಿನಿಂದ ದಾಳಿ ನಡೆಸಿ ಅನೇಕ ಕುಟುಂಬಗಳನ್ನು ಅನಾಥ ಮಾಡಿಬಿಟ್ಟಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಹೈದರಾಬಾದ್‌ನ ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿ ಮನೀಶ್ ರಂಜನ್ ಕೂಡ ಜೀವ ಬಿಟ್ಟಿದ್ದಾರೆ.
ಪತ್ನಿ, ಮಗನ ಜೊತೆ ಪ್ರವಾಸದಲ್ಲಿ ಕಳೆದು, ಕೊಂಚ ರಿಲ್ಯಾಕ್ಸ್ ಆಗುವ ನಿರೀಕ್ಷೆಯಲ್ಲಿದ್ದ ಮನೀಶ್ ರಂಜನ್, ಪತ್ನಿ ಮಗನ ಮುಂದೆ ಜೀವ ಬಿಟ್ಟಿರುವುದು ದುರಂತವೇ ಸರಿ. ಆ ಕ್ಷಣದ ಭೀಕರತೆಯನ್ನ ಆ ಕುಟುಂಬಕ್ಕೆ ಅರಗಿಸಿಕೊಳ್ಳಲು ನರಕಯಾತನೆ ಅನುಭವಿಸುತ್ತಿದೆ. ಬಂದೂಕುಗಳಿಂದ ನೆತ್ತರು ಹರಿಸುತಿದ್ದ ಉಗ್ರರನ್ನ ನೋಡಿ, ಭಯದಿಂದ ತತ್ತರಿಸಿ ಹೋಗಿದ್ದ ಕುಟಂಬ, ಕಣ್ಣು ಮುಂದೆ ಶವವಾಗಿದ್ದ ಮನೀಶ್ರನ್ನ ನೋಡಿ, ಅವರ ದುಃಖ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ:ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ.. ಪಾಕ್ ಎದೆಯಲ್ಲಿ ಢವಢವ.. ಸೆಕೆಂಡ್ ಸರ್ಜಿಕಲ್ ಸ್ಟ್ರೈಕ್..?
ಈ ಪೈಶಾಚಿಕ ಕೃತ್ಯದ ಘಟನೆಯ ಬಗ್ಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಆಘಾತಗೊಂಡು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನ ಒತ್ತಾಯಿಸಿದ್ದಾರೆ. ಜೊತೆಗೆ ಘಟನೆಯಲ್ಲಿ ಜೀವ ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಇನ್ನು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕೂಡ ಈ ದಾಳಿಯನ್ನು ತೀವ್ರವಾಗಿ ಖಂಡನೆ ಮಾಡಿದ್ದಾರೆ. ಹಾಗೆ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಈ ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ