/newsfirstlive-kannada/media/post_attachments/wp-content/uploads/2025/04/manjunath-son1.jpg)
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿ ವಿಡಿಯೋಗಳನ್ನು ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ನೀನು ಹಿಂದೂನಾ? ಅಲ್ಲ ಮುಸ್ಲಿಂನಾ ಅಂತ ಕೇಳಿ ತಲೆಗೆ ಗುಂಡು ಹಾರಿಸಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಈ ದಾಳಿಯಲ್ಲಿ ಕರ್ನಾಟಕದ ಇಬ್ಬರು ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಪಾಕ್ಗೆ ಹೋದವರು ಮೇ 1ರೊಳಗೆ ಬರ್ಬೇಕು; ಭಾರತದಲ್ಲಿರೋ ಪಾಕಿಸ್ತಾನಿಯರಿಗೆ ತೊಲಗಲು ಡೆಡ್ಲೈನ್..!
ಹೆಂಡತಿ ಹಾಗೂ ಮಗನ ಜೊತೆಗೆ ಜಾಲಿ ಟ್ರಿಪ್ ಅಂತ ಕಾಶ್ಮೀರಕ್ಕೆ ಹೋಗಿದ್ದ ಮಂಜುನಾಥ್ ಅವರು ದುರಂತ ಅಂತ್ಯ ಕಂಡಿದ್ದಾರೆ. ಭಯೋತ್ಪಾದಕರ ಗುಂಡಿನ ದಾಳಿ ವೇಳೆ ಶಿವಮೊಗ್ಗದ ಮೃತ ಮಂಜುನಾಥ್ ಅವರ ಪುತ್ರ ಅಭಿಜಯ್ನ್ನು ಸ್ಥಳೀಯ ಕಾಶ್ಮೀರಿಗರು ರಕ್ಷಿಸಿದ್ದೇ ರೋಚಕವಾಗಿದೆ.
ಉಗ್ರರ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಬಂದಿದ್ದ ಅಭಿಜಯ್ನನ್ನ ಸ್ಥಳೀಯ ವ್ಯಕ್ತಿಯೊಬ್ಬ ತನ್ನ ಬೆನ್ನ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
A local Kashmiri put his life on the line to save tourists from terrorists and still, some people shamelessly spew hate against his entire community.#PahalgamTerroristAttackpic.twitter.com/hCS4ity11W
— هارون خان (@iamharunkhan) April 23, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ