2 ದಿನ ಮುಂಚೆಯೇ ಸ್ಕೆಚ್‌.. ಮೊದಲೇ ಬಂದು ಸುಮ್ಮನೆ ಕುಳಿತಿದ್ದ ಉಗ್ರರು; ಪಹಲ್ಗಾಮ್‌ ಶಾಕಿಂಗ್ ಸತ್ಯ ಬಯಲು

author-image
Veena Gangani
Updated On
ಕಣ್ಮುಂದೆಯೇ ನಡೀತು ಭೀಕರ ದಾಳಿ.. ಜಿಪ್‌ಲೈನ್‌ನಲ್ಲಿ ಕೂತಿದ್ದ ಪ್ರತ್ಯಕ್ಷದರ್ಶಿ ರಿಷಿ ಭಟ್‌ ಏನಂದ್ರು?
Advertisment
  • ಸುಮಾರು 20-30 ನಿಮಿಷಗಳವರೆಗೆ ಗುಂಡಿನ ದಾಳಿ ನಡೆಸಿದ್ದ ಉಗ್ರರು
  • ಹವಾಮಾನ ಬದಲಾವಣೆಯ ಕಾರಣದಿಂದ ದಾಳಿ ವಿಳಂಬದ ಶಂಕೆ
  • ಜೀಪ್ ಲೈನ್ ಅಪರೇಟರ್​ನನ್ನು ತನಿಖೆಗೆ ಕರೆದ ಎನ್‌ಐಎ ಅಧಿಕಾರಿಗಳು

ಕಳೆದ ಏಪ್ರಿಲ್ 22ರಂದು ಪಹಲ್ಗಾಮ್​​ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಅಮಾಯಕ ಪ್ರವಾಸಿಗರು ಬಲಿಯಾಗಿದ್ದಾರೆ. ದಾಳಿ ನಡೆಸೋ ಮೊದಲು ಭಯೋತ್ಪಾದಕರು ಏನೆಲ್ಲಾ ಪ್ಲಾನ್​ ಮಾಡಿದ್ರು ಎಂಬುವುದರ ಬಗ್ಗೆ ಎನ್‌ಐಎ ತನಿಖೆ ಮೂಲಕ ಸತ್ಯ ಬಯಲಾಗಿದೆ.

ಇದನ್ನೂ ಓದಿ:NIAಗೆ ಸಖತ್ ಕ್ಲೂ ಕೊಟ್ಟ ಅದೊಂದು ವಿಡಿಯೋ, ಪಹಲ್ಗಾಮ್ ದಾಳಿ ತನಿಖೆಗೆ ಬಿಗ್​ ಟ್ವಿಸ್ಟ್..!

publive-image

ಹೌದು, ಪ್ರಾರಂಭದಲ್ಲಿ ಉಗ್ರರು ಬೆಟ್ಟದ ಭಾಗದಿಂದ ಬಂದು ತಕ್ಷಣ ಗುಂಡು ಹಾರಿಸಿದ್ರು ಅಂತ ಭದ್ರತಾ ಪಡೆಗಳು ಎಂದುಕೊಂಡಿದ್ದರು. ಆದ್ರೆ, ಮೊದಲೇ ಬಂದು ಸುಮ್ಮನೆ ಕುಳಿತುಕೊಂಡು ಎಲ್ಲವನ್ನು ವೀಕ್ಷಿಸಿ ಬಳಿಕ ತಕ್ಷಣವೇ ಗುಂಡು ಹಾರಿಸಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರೋದು ಬೆಳಕಿಗೆ ಬಂದಿದೆ. ಶಾಕಿಂಗ್ ವಿಚಾರ ಏನೆಂದರೆ ಉಗ್ರರು ಏಪ್ರಿಲ್ ಮೊದಲ ವಾರದಲ್ಲಿ ದಾಳಿಗೆ ಸ್ಕೆಚ್ ರೂಪಿಸಿರುವುದು ಎನ್‌ಐಎ ತನಿಖೆಯಲ್ಲಿ ಗೊತ್ತಾಗಿದೆ. ಹೆಚ್ಚಿನ ಜನರು ಇರುವ ದಿನವೇ ದಾಳಿ ಮಾಡಬೇಕು ಅಂತ ಉಗ್ರರು ಸಂಚು ರೂಪಿಸಿದ್ದರು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಅಲ್ಲದೇ ಹವಾಮಾನ ಬದಲಾವಣೆಯ ಕಾರಣದಿಂದ ದಾಳಿ ವಿಳಂಬವಾಗಿದೆ.

2 ದಿನದ ಮುಂಚೆಯೇ ಸ್ಕೆಚ್‌!
ಉಗ್ರರು ಪಹಲ್ಗಾಮ್‌ನಲ್ಲಿ 2 ದಿನದ ಮುಂಚೆಯೇ ದಾಳಿಗೆ ಸಂಚು ಮಾಡಿದ್ದಾರೆ. ಅಂದ್ರೆ ಏಪ್ರಿಲ್ 22 ರ ಬದಲು ಏಪ್ರಿಲ್ 20 ಅಥವಾ 21ಕ್ಕೆ ದಾಳಿ ಮಾಡುವ ಸ್ಕೆಚ್ ಹಾಕಲಾಗಿತ್ತು. ಮಳೆ ಮತ್ತು ಮಂಜುಕವಿದ ವಾತಾವರಣ, ಕಡಿಮೆ ಪ್ರವಾಸಿಗರು ಬಂದಿದ್ದ ಕಾರಣದಿಂದಾಗಿ ಮುಂದೂಡಿಕೆ ಆಗಿದೆ.

publive-image

ಏಪ್ರಿಲ್ 22ರಂದು ಇಬ್ಬರು ಉಗ್ರರು ಪಹಲ್ಗಾಮ್​ನ ಭೈಸರನ್ ವ್ಯಾಲಿಯಲ್ಲಿ ಫುಡ್ ಸ್ಟಾಲ್ ಬಳಿ ಸುಮ್ಮನೆ ಕುಳಿತಿದ್ದರಂತೆ. ಮಧ್ಯಾಹ್ನ 2.30 ಆಗುತ್ತಿದ್ದಂತೆ ಎದ್ದು ಸ್ನ್ಯಾಕ್ಸ್ ಸೇವಿಸುತ್ತಿದ್ದ ಜನರ ಬಳಿ ಹೋಗಿ ನಿಮ್ಮ ಧರ್ಮ ಯಾವುದು ಎಂದು ಕೇಳಿದ್ದರಂತೆ. ಬಳಿಕ ಹಿಂದೂಗಳು ಎಂದು ಗೊತ್ತಾಗುತ್ತಿದ್ದಂತೆ, ಕೆಲವೇ ನಿಮಿಷದಲ್ಲಿ ನಾಲ್ವರ ಮೇಲೆ ಗುಂಡು ಹಾರಿಸಿ ಉಗ್ರರು ಕೊಂದಿದ್ದಾರೆ. ಸುಮಾರು 20 ರಿಂದ 30 ನಿಮಿಷಗಳವರೆಗೆ ಗುಂಡಿನ ದಾಳಿ ನಡೆಸಿದ್ದ 26 ಮಂದಿಯನ್ನು ಕೊಂದಿದ್ದಾರೆ. ಇನ್ನಿಬ್ಬರು ಉಗ್ರರು ಜೀಪ್ ಲೈನ್ ಭಾಗದಿಂದ ಬಂದು ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ.

publive-image

ಇನ್ನು, ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸುವ ಸಂದರ್ಭದಲ್ಲೇ ಜಿಪ್‌ಲೈನ್‌ ಆಪರೇಟರ್‌ವೊಬ್ಬ ಅಲ್ಲಾಹು ಅಕ್ಬರ್’ ಎಂದು ಮೂರು ಬಾರಿ ಕೂಗಿರುವುದು ಕಂಡುಬಂದಿದೆ. ಈ ದೃಶ್ಯ ಪ್ರವಾಸಿಗರೊಬ್ಬರ ಸೆಲ್ಫಿ ವೀಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೇ ಬೇರೆ ಪ್ರವಾಸಿಗರನ್ನು ತಳ್ಳಿದಾಗ ಜೀಪ್ ಲೈನ್ ಅಪರೇಟರ್ ಮೌನವಾಗಿದ್ದ. ಹೀಗಾಗಿ ಜಿಪ್‌ಲೈನ್ ಆಪರೇಟರ್‌ನನ್ನು ಈಗ ಮತ್ತೆ ಕರೆಸಲಾಗಿದ್ದು, ಏಜೆನ್ಸಿಗಳು ಆತನ ವಿಚಾರಣೆ ನಡೆಸಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment