ಆ ಸಿನಿಮಾ ನೋಡಿ ಹೋಗ್ಬೇಡ ಎಂದಿತ್ತು ಹೆತ್ತ ಕರುಳು.. ಅಯ್ಯೋ ಮಗನೇ, ಅಮ್ಮನ ಮಾತು ಕೇಳಿದ್ದರೆ..

author-image
Ganesh
Updated On
ಆ ಸಿನಿಮಾ ನೋಡಿ ಹೋಗ್ಬೇಡ ಎಂದಿತ್ತು ಹೆತ್ತ ಕರುಳು.. ಅಯ್ಯೋ ಮಗನೇ, ಅಮ್ಮನ ಮಾತು ಕೇಳಿದ್ದರೆ..
Advertisment
  • ಮಂಜುನಾಥ್ ತಾಯಿಗೆ ಸಿಕ್ಕಿತ್ತಾ ಅನಾಹುತದ ಸುಳಿವು?
  • ‘ಆಮೇಲೆ ನಿಮಗೆ ಸಿಗಲ್ಲ’ ಎಂದವ ವಾಪಸ್ ಬರಲಿಲ್ಲ
  • ಕರುಣಾಜನಕ ಕತೆ ಹೇಳ್ತಿದೆ ತಾಯಿ-ಮಗನ ಸಂಭಾಷಣೆ

ಭೂಲೋಕದ ಸ್ವರ್ಗ ಅಂತಲೇ ಕರೆಸಿಕೊಳ್ಳುವ ಕಾಶ್ಮೀರದಲ್ಲಿ ಮಾರಣಹೋಮ ನಡೆದು ಹೋಗಿದೆ. ಮತ್ತೆ ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಬರೋಬ್ಬರಿ 26 ಜನರ ಜೀವ ಕಳೆದುಕೊಂಡಿದ್ದಾರೆ. ಅವರಲ್ಲಿ ಮೂವರು ಕನ್ನಡಿಗರೂ ಇದ್ದಾರೆ. ಉಗ್ರರ ನರಮೇಧದಲ್ಲಿ ಜೀವ ಕಳೆದುಕೊಂಡವರ ಕರುಣಾಜನಕ ಕತೆಗಳು ಕರಳು ಹಿಂಡುವತಿವೆ.

ಪಹಲ್ಗಾಮ್ ದಾಳಿಯಲ್ಲಿ ಜೀವ ಕಳೆದುಕೊಂಡವರಲ್ಲಿ ಶಿವಮೊಗ್ಗದ ಮಂಜುನಾಥ್ ಕೂಡ ಒಬ್ಬರು. ಇವರ ಕರುಳು ಹಿಂಡುವ ಕತೆ ಏನೆಂದರೆ, ಅಮ್ಮ ಮತ್ತು ಮಗನ ನಡುವಿನ ಮಾತುಗಳು. ಪಹಲ್ಗಾಮ್​ ಅನ್ನೋ ಹುಲುಗಾವಲಿನ ಪ್ರದೇಶ ನೋಡಿ ಖುಷಿ ಖುಷಿಯಿಂದ ತಾಯಿಗೆ ಫೋನ್ ಮಾಡಿ ಮಾತಾಡಿದ್ದ ಮಂಜುನಾಥ್​, ಅಮ್ಮ ಪಹಲ್ಗಾಮ್​ ಬೆಂಗಳೂರು ತರಹ ಇದೆ ಅಮ್ಮ ಅಂದಿದ್ರು. ಎರಡು ದಿನದಲ್ಲಿ ರಿಮೋಟ್ ಏರಿಯಾಗೆ ಹೋಗ್ತೀವಿ, ಆಮೇಲೆ ನಿಮಗೆ ಸಿಗಲ್ಲ ಅಂತೇಳಿದ್ರಂತೆ. ಆದ್ರೆ ಆ ಮಾತುಗಳೇ ಅವರ ಕೊನೆ ಮಾತುಗಳಾಗುತ್ತೆ ಅನ್ನೋದನ್ನ ಈ ಜೀವ ಕನಸಲ್ಲೂ ಊಹಿಸಿರಲಿಲ್ಲ.

ಇದನ್ನೂ ಓದಿ: ಪತ್ನಿ, ಅಪ್ಪ-ಅಮ್ಮನ ಜೊತೆ ಪಹಲ್ಗಾಮ್​ಗೆ ಹೋಗಿದ್ದ ಗಣೇಶ್ ಕಾರಂತ್.. ವಿಡಿಯೋದಲ್ಲಿ ಹೇಳಿದ್ದೇನು?

publive-image

ಕಾಶ್ಮೀರಕ್ಕೆ ಹೋಗ್ಬೇಡ ಎಂದಿತ್ತು ಹೆತ್ತ ಕರುಳು!

ಮಗನಿಗೆ ಎದುರಾಗುವ ಅನಾಹುತದ ಸುಳಿವು ಹೆತ್ತ ಕರುಳಿಗೆ ಮೊದಲೇ ಸಿಕ್ಕಿತ್ತೋ ಏನೋ ಗೊತ್ತಿಲ್ಲ.. ಮಂಜುನಾಥ್​ ಕಾಶ್ಮೀರಕ್ಕೆ ಹೋಗ್ತಿನಿ ಅಂತ ಅಂದಾಗ ತಾಯಿ ಸುಮತಿ ಬೇಡ ಮಗನೇ ಅಂದಿದ್ರಂತೆ. ಅದ್ಕೆ ಕಾರಣ ರೋಜಾ ಸಿನಿಮಾ.. ಈ ರೋಜಾ ಸಿನಿಮಾದಲ್ಲಿ ಕಾಶ್ಮೀರದಲ್ಲಿನ ಉಗ್ರರ ಕ್ರೌರ್ಯ ಕಂಡು ಸುಮತಿ ದಿಗಿಲುಬಿದ್ದಿದ್ರು. ಇದೇ ಕಾರಣಕ್ಕೆ ಮಂಜುನಾಥ್​ರನ್ನ ಕಾಶ್ಮೀರಕ್ಕೆ ಹೋಗೋದು ಬೇಡ ಅಂತ ಈ ಹೆತ್ತ ಕರುಳು ಹೇಳಿತ್ತಂತೆ.. ಆದ್ರೆ ವಿಧಿ ಬೇರೆಯದ್ದೆ ಆಟ ಆಡಿ ಮಂಜುನಾಥ ಜೀವ ಬಲಿ ಪಡೆದು ಬಿಟ್ಟಿದೆ.

ರೋಜಾ ಸಿನಿಮಾ ನೋಡಿ ಅಕ್ಷರಶಃ ಭಯಗೊಂಡಿದ್ದ ಮಂಜುನಾಥ್ ತಾಯಿ ಸುಮತಿ ಹೋಗೋದು ಬೇಡ ಅಂತಲೇ ಹೇಳಿದ್ರು.. ಆದ್ರೆ ಮೊದಲಿನ ತರಹದ ಪರಿಸ್ಥಿತಿ ಈಗ ಇಲ್ಲ.. ಎಲ್ಲ ಬದಲಾಗಿದೆ ಅಂತೇಳಿ ಮಂಜುನಾಥ್​ ಪತ್ನಿ ಮಗನ ಸಮೇತ ಕಾಶ್ಮೀರಕ್ಕೆ ತೆರಳಿದ್ರು. ಆದ್ರೆ ಉಗ್ರರ ಪೈಶಾಚಿಕ ಕೃತ್ಯಕ್ಕೆ ಮಗನ ಕಳ್ಕೊಂಡ ಈ ಜೀವ ಅಕ್ಷರಶಹ: ಸಂಕಟ ಪಡ್ತಿದೆ.

ಇದನ್ನೂ ಓದಿ: ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ.. ಪಾಕ್​​ ಎದೆಯಲ್ಲಿ ಢವಢವ.. ಸೆಕೆಂಡ್ ಸರ್ಜಿಕಲ್ ಸ್ಟ್ರೈಕ್..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment