/newsfirstlive-kannada/media/post_attachments/wp-content/uploads/2025/04/Pahalgama-terror-attack-scene-1.jpg)
ಪಹಲ್ಗಾಮ್ ನರಮೇಧ ಕನಸಿನಲ್ಲೂ ಬೆಚ್ಚಿ ಬೀಳೋ ಭಯಾನಕ ಕೃತ್ಯ. ದಾಳಿಕೋರರ ಹಿಂದೆ ಬಿದ್ದಿರೋ ಭಾರತೀಯ ಸೇನೆ ರೋಚಕ ಅಂಶಗಳನ್ನು ಕಲೆ ಹಾಕುತ್ತಿದೆ. ಉಗ್ರರು ಅಡಗಿದ್ದ ಮನೆಗಳನ್ನು ಧ್ವಂಸ ಮಾಡಿರುವ ಯೋಧರು, ಪ್ರವಾಸಿಗರ ಮೇಲೆ ಉಗ್ರರು ದಾಳಿ ಮಾಡಿದ್ದು ಹೇಗೆ ಅನ್ನೋ ಇಂಚಿಂಚೂ ರಹಸ್ಯವನ್ನು ಬೇಧಿಸುತ್ತಿದ್ದಾರೆ.
ಏಪ್ರಿಲ್ 22ರಂದು ನಾಲ್ವರು ಉಗ್ರರು ಪಹಲ್ಗಾಮ್‌ಗೆ ನಡೆದುಕೊಂಡೇ ಬಂದಿದ್ದರು. ಬೈಸರನ್, ಕೊಕೆರ್‌ನಾಗ್ ಕಣಿವೆಯ ದಟ್ಟಾರಣ್ಯದಲ್ಲಿ 35 ನಿಮಿಷಗಳ ಕಾಲ ನಡೆದುಕೊಂಡು ಬಂದಿದ್ದಾರೆ.
ಒಟ್ಟು 4 ಉಗ್ರರು ಈ ನರಮೇಧದಲ್ಲಿ ಭಾಗಿಯಾಗಿದ್ದರು. ಇಬ್ಬರು ಉಗ್ರರು ಬಲಭಾಗದಿಂದ ಬಂದರೆ, ಇಬ್ಬರು ಉಗ್ರರು ಎಡಭಾಗದಿಂದ ಎಂಟ್ರಿ ಕೊಟ್ಟಿದ್ದಾರೆ. 4 ಉಗ್ರರ ಪೈಕಿ ಮೂವರು ಪಾಕಿಸ್ತಾನಿಯರಾದ್ರೆ ಓರ್ವ ಕಾಶ್ಮೀರಿ ಅನ್ನೋ ಮಾಹಿತಿ ಲಭ್ಯವಾಗಿದೆ.
‘ಉಗ್ರ’ ಕಾಶ್ಮೀರಿ ಯಾರು?
ಅನಂತ್ನಾಗ್ನ ಗುರ್ರೆ ಗ್ರಾಮದ ಆದಿಲ್ ಅಹ್ಮದ್ ತೋಕರ್, 2018ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ. ಆದಿಲ್, ಪಾಕ್ ಉಗ್ರರ ಸಂಪರ್ಕ ಮಾಡಿ ತರಬೇತಿ ಪಡೆದಿದ್ದ. 6 ವರ್ಷಗಳ ನಂತರ LOC ಮೂಲಕ ಭಾರತಕ್ಕೆ ಅಕ್ರಮವಾಗಿ ಎಂಟ್ರಿ ಕೊಟ್ಟಿದ್ದ. ಯಾರೂ ಹೋಗಲಾಗದ ದುರ್ಗಮ ಪ್ರದೇಶದಲ್ಲಿ ಆದಿಲ್ ವಾಸ ಮಾಡುತ್ತಿದ್ದ. ಮೂವರು ಪಾಕ್ ಉಗ್ರರ ಜೊತೆ ಸೇರಿ ಪಹಲ್ಗಾಮ್ನಲ್ಲಿ ನರಮೇಧ ನಡೆಸಿದ್ದಾನೆ.
ಇದನ್ನೂ ಓದಿ: ಪಾಕ್ ವಿರುದ್ಧ ಯುದ್ಧ ನಡೆದರೆ.. ಧೋನಿ, ತೆಂಡುಲ್ಕರ್ ಗನ್ ಹಿಡಿದು ಸಂಗ್ರಾಮಕ್ಕೆ ಬರ್ತಾರೆ..!
2 ಮೊಬೈಲ್ ಕದ್ದಿದ್ದ ಉಗ್ರರು!
ಪಹಲ್ಗಾಮ್‌ಗೆ ಬಂದ ಉಗ್ರರು ಚೀನಾದ ಅತ್ಯಾಧುನಿಕ ಫೋನ್ಗಳನ್ನು ಬಳಸಿರೋ ಸಾಧ್ಯತೆ ಇದೆ. ತನಿಖಾಧಿಕಾರಿಗಳಿಗೆ ಚೀನಾ ಫೋನ್ ಬಳಕೆಯ ಮಾಹಿತಿ ಲಭ್ಯವಾಗಿದ್ದು, ಚೀನಾದ ಹುವಾಯ್ ಸಂಸ್ಥೆಯ ಸ್ಯಾಟಲೈಟ್ ಫೋನ್ ಬಳಸಿರೋ ಸಾಧ್ಯತೆ ಇದೆ. ಇದರ ಜೊತೆಗೆ ಉಗ್ರರು ಸ್ಥಳೀಯನಿಂದ ಒಂದು, ಪ್ರವಾಸಿಗನಿಂದ ಒಂದು ಮೊಬೈಲ್ ಕದ್ದಿದ್ದಾರೆ.
ಸ್ಯಾಟಲೈಟ್ ಸಿಗ್ನಲ್ ಬಳಸುವ ಅತ್ಯಾಧುನಿಕ ಸ್ಮಾರ್ಟ್ ಫೋನ್‌ನಲ್ಲಿ ಇಂಟರ್ನಲ್ ಸ್ಯಾಟಲೈಟ್ ಌಂಟೆನಾಗಳಿರುತ್ತೆ. ಜೊತೆಗೆ ಸ್ಪೆಷಲೈಸ್ಡ್ ಚಿಪ್ಗಳೂ ಫೋನ್‌ನಲ್ಲಿ ಅಳವಡಿಸಲಾಗಿರುತ್ತೆ. ಇಂತಹ ಅತ್ಯಾಧುನಿಕ ಫೋನ್ಗಳ ಬಳಕೆಯಿಂದ ಇತರೆ ಸಂಪರ್ಕ ಸಾಧನಗಳ ಜೊತೆ ಸಂಪರ್ಕ ಸಾಧ್ಯವಾಗುತ್ತದೆ.
ಯಾವ ಗನ್ ಬಳಕೆ?
ಪೆಹಲ್ಗಾಮ್ ನರಮೇಧಕ್ಕೆ ಉಗ್ರರು AK 47 ರೈಫಲ್ ಹಾಗೂ M-4 ಅಸಾಲ್ಟ್ ರೈಫಲ್‌ಗಳನ್ನು ಬಳಸಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ