ನಮ್ಮನ್ನೂ ಮುಗಿಸಿ ಅಂದಾಗ ‘ಮೋದಿಗೆ ಹೋಗಿ ಹೇಳು’ ಎಂದ ಉಗ್ರ- ಭೀಕರ ಕ್ಷಣ ಬಿಚ್ಚಿಟ್ಟ ಮಂಜುನಾಥ್ ಪತ್ನಿ

author-image
Veena Gangani
Updated On
ಮಂಜುನಾಥ್ ಮೃತದೇಹ ರವಾನೆ.. ಬೆಳಗಿನ ಜಾವ ಬೆಂಗಳೂರು ತಲುಪಲಿರೋ ಪಾರ್ಥಿವ ಶರೀರ
Advertisment
  • ಕಳೆದ ನಾಲ್ಕೈದು ದಿನದ ಹಿಂದಷ್ಟೇ ಪ್ರವಾಸಕ್ಕೆ ತೆರಳಿದ್ದ ಕುಟುಂಬ
  • ಪತ್ನಿ ಪಲ್ಲವಿ ಜೊತೆಗೆ ಜಮ್ಮು-ಕಾಶ್ಮೀರಕ್ಕೆ ಹೋಗಿದ್ದ ಮಂಜುನಾಥ್
  • ಪುತ್ರ, ಪತ್ನಿ ಎದುರಲ್ಲೇ ಪ್ರಾಣಬಿಟ್ಟ ಮಂಜುನಾಥ್​

ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಿನ್ನೆ ಭಯೋತ್ಪಾದಕರು ಭೀಕರವಾಗಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಪುತ್ರ ಹಾಗೂ ಮಗನ ಎದುರಲ್ಲೇ ಮಂಜುನಾಥ್ ಪ್ರಾಣ ಬಿಟ್ಟಿದ್ದಾರೆ.  ಪೈಶಾಚಿಕ ಕೃತ್ಯದ ಭಯಾನಕ ಕ್ಷಣವನ್ನು ವಿವರಿಸುತ್ತ ಮಂಜುನಾಥ್ ಪತ್ನಿ ಪಲ್ಲವಿ ಕಣ್ಣೀರು ಇಟ್ಟಿದ್ದಾರೆ.

ಇದನ್ನೂ ಓದಿ:ಉಗ್ರರ ಗುಂಡಿನ ದಾಳಿ.. ಪ್ರಾಣ ಬಿಟ್ಟ ಮಗನ ಬರುವಿಕೆಗಾಗಿ ಕಾದು ಕುಳಿತ ತಾಯಿ

publive-image

ನೋವು ಹಂಚಿಕೊಂಡಿರುವ ಶಿವಮೊಗ್ಗದ ಮಂಜುನಾಥ್ ಪತ್ನಿ ಪಲ್ಲವಿ.. ನಾವು ತಿಂಡಿ ತಿನ್ನುತ್ತಿದ್ದಾಗ ದಾಳಿ ಆಗಿದೆ. ಹಿಂದೂಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ನೀನೂ ಹಿಂದೂನಾ ಎಂದು ಕೇಳಿ ಪರಿಶೀಲಿಸಿ ಬಳಿಕ ಒಂದೇ ಗುಂಡೇಟಿಗೆ ನನ್ನ ಗಂಡನನ್ನು ಸಾಯಿಸಿದ್ದಾರೆ. ಅಲ್ಲಿದ್ದ ಗಂಡಸರನ್ನೇ ಗುರಿಯಾಗಿಸಿ, ಅವರ ಧರ್ಮ ಕೇಳಿ ಗುಂಡು ಹಾರಿಸಿದ್ದಾರೆ. ಪತಿ ಮೇಲೆ ದಾಳಿ ಮಾಡುತ್ತಿದ್ದಂತೆಯೇ ನನ್ನ ಹಾಗೂ ಮಗನ ಮೇಲೂ ಗುಂಡು ಹಾರಿಸಿ ಎಂದೆ. ಅದಕ್ಕವರು ‘ಮೋದಿ ಕೋ ಬೋಲೋ’ (ಮೋದಿಗೆ ಹೋಗಿ ಹೇಳು) ಎಂದಿದ್ದಾರೆ ಅಂತ ಕಣ್ಣೀರು ಇಟ್ಟಿದ್ದಾರೆ.

ಮಂಜುನಾಥ್ ಅವರು ರಿಯಲ್ ಎಸ್ಟೇಟ್ ವೃತ್ತಿಯಲ್ಲಿ ತೊಡಗಿದ್ದರು. ಮೂಲತಃ ಚಿಕ್ಕಮಂಗಳೂರಿನ ಕೊಪ್ಪ ತಾಲೂಕಿನ ಹರಿಹರಪುರದವರು. ಆದರೆ ರಿಯಲ್ ಎಸ್ಟೇಟ್ ವೃತ್ತಿಯಿಂದ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಪತ್ನಿ, ತಾಯಿ ಮತ್ತು ಮಕ್ಕಳೊಂದಿಗೆ ವಾಸವಿದ್ದರು. ಕಳೆದ ನಾಲ್ಕೈದು ದಿನದ ಹಿಂದಷ್ಟೇ ಹೆಂಡತಿ ಪಲ್ಲವಿ ಜೊತೆಗೆ ಜಮ್ಮುಕಾಶ್ಮೀರಕ್ಕೆ ತೆರಳಿದ್ದರು. ಇದೇ ವೇಳೆ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment