newsfirstkannada.com

‘ಭಾರತದ ವಿಚಾರದಲ್ಲಿ ನಮ್ಮಿಂದ ತಪ್ಪಾಗಿದೆ..’ 25 ವರ್ಷಗಳ ಬಳಿಕ ತಪ್ಪು ಒಪ್ಪಿಕೊಂಡ ಪಾಕಿಸ್ತಾನ

Share :

Published May 29, 2024 at 9:26am

  ಮಾಜಿ ಪ್ರಧಾನಿ ನವಾಜ್ ಷರೀಫ್ ಅವರೇ ತಪ್ಪು ಒಪ್ಪಿಕೊಂಡಿದ್ದಾರೆ

  ಭಾರತದ ಜೊತೆಗೆ ಲಾಹೋರ್​​ನಲ್ಲಿ ಒಪ್ಪಂದ ಮಾಡಿಕೊಂಡಿದ್ದ ಪಾಕ್

  ಏನಿದು ಲಾಹೋರ್ ಒಪ್ಪಂದ..? ಅಷ್ಟಕ್ಕೂ ಅವತ್ತು ಏನಾಗಿತ್ತು?

ಇಷ್ಟು ದಿನ ತಾನು ಮಾಡಿದ ತಪ್ಪುಗಳನ್ನೇ ಬೇರೆಯವರತ್ತ ಬೊಟ್ಟು ಮಾಡಿ ತೋರಿಸುತ್ತಿದ್ದ ಪಾಕಿಸ್ತಾನ, ಕೊನೆಗೂ ಸತ್ಯವನ್ನು ಅರ್ಥ ಮಾಡಿಕೊಂಡು ಜಗತ್ತಿನ ಮುಂದೆ ತೆರೆದಿಟ್ಟಿದೆ. ಕಾರ್ಗಿಲ್‌ ಯುದ್ಧ ನಡೆಯಲು ಸಹ ಇದೇ ತಪ್ಪು ಕಾರಣ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಶರೀಫ್‌ ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಭಾರತದೊಂದಿಗೆ ಸಹಿ ಮಾಡಿದ್ದ 1999ರ ಲಾಹೋರ್ ಒಪ್ಪಂದವನ್ನು ಪಾಕ್ ಉಲ್ಲಂಘಿಸಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮಂಗಳವಾರ ಒಪ್ಪಿಕೊಂಡಿದ್ದಾರೆ. ಮೇ 28, 1998ರಂದು ಪಾಕಿಸ್ತಾನವು ಐದು ಪರಮಾಣು ಪರೀಕ್ಷೆಗಳನ್ನು ನಡೆಸಿತ್ತು. ನಂತರ ವಾಜಪೇಯಿ ಅವರು ಇಲ್ಲಿಗೆ ಬಂದು ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡರು. ಆ ಒಪ್ಪಂದವನ್ನು ನಾವು ಉಲ್ಲಂಘಿಸಿದ್ದೇವೆ ಎಂದು ಷರೀಫ್ ಹೇಳಿದ್ದಾರೆ.

ಇದನ್ನೂ ಓದಿ:ಅಂತೆ-ಕಂತೆ ವದಂತಿಗಳ ಮಧ್ಯೆ ಟ್ವೀಟ್ ಮಾಡಿ ನಾಲ್ಕು ಫೋಟೋ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯ

ಏನಿದು ಲಾಹೋರ್ ಒಪ್ಪಂದ..?
ಪರಸ್ಪರ ಕಾದಾಡುತ್ತಿರುವ ಎರಡು ದೇಶಗಳ ನಡುವೆ ಶಾಂತಿ ಒಪ್ಪಂದವಾಗಿದೆ. ಶಾಂತಿ, ಭದ್ರತೆ ನೀಡುವುದರ ಜೊತೆಗೆ ಎರಡು ದೇಶಗಳ ನಡುವೆ ಜನ ಸಂಪರ್ಕವನ್ನು ಉತ್ತೇಜಿಸಲು ಒಪ್ಪಂದ ಕೇಂದ್ರಿಕರಿಸಿತ್ತು. ಇದನ್ನು ಪಾಕಿಸ್ತಾನ ಉಲ್ಲಂಘಿಸಿದೆ. ಕಾರ್ಗಿಲ್​​ಗೆ ಒಳನುಗ್ಗುವ ಮೂಲಕ ಪಾಕಿಸ್ತಾನ ಉಲ್ಲಂಘಿಸಿದೆ. ಈ ಒಳ ನುಸುಳುವಿಕೆಯ ಪರಿಣಾಮವೇ ಕಾರ್ಗಿಲ್ ಯುದ್ಧಕ್ಕೆ ನಾಂದಿ ಹಾಡಿತ್ತು.

ಇದನ್ನೂ ಓದಿ:ಈ 5 ಆಟಗಾರರ ಮೇಲೆ ಭಾರೀ ನಿರೀಕ್ಷೆ.. ಪುಟಿದೆದ್ರೆ ಭಾರತಕ್ಕೆ ವಿಶ್ವಕಪ್ ಗ್ಯಾರಂಟಿ..!

ಅಂದಿನ ಪಾಕಿಸ್ತಾನ ಸೇನೆಯ ಮುಖ್ಯಸ್ಥನಾಗಿದ್ದ ಪರ್ವೇಜ್ ಮುಷರಫ್, 1999ರಲ್ಲಿ ಜಮ್ಮು ಮತ್ತು ಕಾಶ್ಮಿರದ ಕಾರ್ಗಿಲ್ ಜಿಲ್ಲೆಯೊಳಗೆ ನುಸುಳಲು ತಮ್ಮ ಸೇನೆಗೆ ರಹಸ್ಯ ಆದೇಶ ನೀಡಿದ್ದರು. ಪಾಕಿಸ್ತಾನದ ಸೈನಿಕರು ಭಾರತಕ್ಕೆ ನುಸುಳಿದ ವಿಚಾರ ಗೊತ್ತಾಗ್ತಿದ್ದಂತೆಯೇ, ದೊಡ್ಡ ಪ್ರಮಾಣದಲ್ಲಿ ಯುದ್ಧ ಆರಂಭವಾಗಿತ್ತು. ನವಾಜ್ ಷರೀಫ್ ಪ್ರಧಾನಿ ಆಗಿದ್ದಾಗ ಭಾರತ ಯುದ್ಧ ಗೆದ್ದಿತ್ತು.

ಇದನ್ನೂ ಓದಿ:ಡಿವೋರ್ಸ್ ಸುದ್ದಿ ಬೆನ್ನಲ್ಲೇ ಮತ್ತೊಂದು ರಹಸ್ಯ ಫೋಟೋ ಶೇರ್ ಮಾಡಿದ ಪಾಂಡ್ಯ ಪತ್ನಿ.. ಟಾಂಟ್ ಕೊಟ್ರಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಭಾರತದ ವಿಚಾರದಲ್ಲಿ ನಮ್ಮಿಂದ ತಪ್ಪಾಗಿದೆ..’ 25 ವರ್ಷಗಳ ಬಳಿಕ ತಪ್ಪು ಒಪ್ಪಿಕೊಂಡ ಪಾಕಿಸ್ತಾನ

https://newsfirstlive.com/wp-content/uploads/2024/05/NAWAZ-SHARIF.jpg

Load More