/newsfirstlive-kannada/media/post_attachments/wp-content/uploads/2025/04/Pakistan-military-Chief.jpg)
ಪಹಲ್ಗಾಮ್ ದಾಳಿಯ ನಂತರ ನಡೆಯುತ್ತಿರುವ ಬೆಳವಣಿಗೆಗಳು ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಸಾಧ್ಯತೆಯನ್ನು ಹೆಚ್ಚಿಸಿದೆ. ಭಾರತದ ಕ್ರಮಗಳಿಗೆ ಪಾಕ್ ತಕ್ಕ ಉತ್ತರ ಕೊಡುತ್ತೆ. ಅಣು ಅಸ್ತ್ರ ಪ್ರಯೋಗ ಮಾಡ್ತೀವಿ. ನಾವು ದಾಳಿ ಮಾಡಿಯೇ ಸಿದ್ಧ ಎಂದು ಗೊಡ್ಡು ಮಾತು ಹೇಳುತ್ತಿರುವ ಪಾಕಿಸ್ತಾನದ ಮತ್ತೊಂದು ಅಸಲಿ ವಿಚಾರ ಬಹಿರಂಗ ಆಗಿದೆ. ಒಂದು ವೇಳೆ ಭಾರತದ ಮೇಲೆ ಪಾಕ್ ಯುದ್ಧ ಸಾರಿದರೆ, ಯುದ್ಧ ನಡೆಯೋದು ಕೇವಲ 4 ದಿನ ಮಾತ್ರ. ಅಂದರೆ 96 ಗಂಟೆಗಳು ಮಾತ್ರ!
ಯಾಕೆ ಅಂತೀರಾ..
ಕಾರಣ ಇಷ್ಟೇ, ಬಡಾಯಿ ಕೊಚ್ಚಿಕೊಳ್ಳುವ ಪಾಕಿಸ್ತಾನದ ಬಳಿ ಅಗತ್ಯ ಯುದ್ಧ ಸಾಮಗ್ರಿಗಳೇ ಇಲ್ಲ. ಪಾಕ್ ಮದ್ದುಗುಂಡುಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಒಂದು ವೇಳೆ ಯುದ್ಧ ನಡೆದರೆ, ಕೇವಲ 4 ದಿನಗಳಿಗೆ ಆಗುವಷ್ಟು ಮದ್ದುಗುಂಡುಗಳನ್ನು ಮಾತ್ರ ಹೊಂದಿದೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ: ಉಗ್ರರಿಗೆ ನೆರವು ನೀಡಿದ್ದ ಓವರ್ ಗ್ರೌಂಡ್ ವರ್ಕರ್ ಆತ್ಮಹತ್ಯೆ, ಭದ್ರತಾಪಡೆ ಕಣ್ಮುಂದೆಯೇ ನದಿಗೆ ಹಾರಿದ
ಪಾಕಿಸ್ತಾನಕ್ಕೆ ಮದ್ದುಗುಂಡುಗಳ ಕೊರತೆಗೆ ಪ್ರಮುಖ ಕಾರಣ, ಇಸ್ರೇಲ್ ಹಾಗೂ ಉಕ್ರೇನ್ನಲ್ಲಿ ನಡೆಯುತ್ತಿರುವ ಪ್ರತ್ಯೇಕ ಯುದ್ಧಗಳು. ಪಾಕಿಸ್ತಾನವು ಇತ್ತೀಚೆಗೆ ಶಸ್ತ್ರಾಸ್ತ್ರ ಸಂಬಂಧ ಇತ್ತೀಚೆಗೆ ಉಕ್ರೇನ್ ಮತ್ತು ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಆದರೆ, ಅಲ್ಲಿ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೀಸಲು ಮದ್ದುಗುಂಡುಗಳು ಅಲ್ಲಿ ಖಾಲಿ ಆಗಿವೆ ಎಂದು ಹೇಳಲಾಗಿದೆ.
96 ಗಂಟೆಗಳ ಕಾಲ ಮದ್ದು ಗುಂಡು
ಪ್ರಾದೇಶಿಕ ಬಿಕ್ಕಟ್ಟನ್ನೂ ಎದುರಿಸುತ್ತಿರುವ ಪಾಕ್ಗೆ ಯುದ್ಧ ಕಾಲಕ್ಕೆ ಬೇಕಾದ ಅಗತ್ಯ ಶಸ್ತ್ರಾಸ್ತ್ರಗಳನ್ನು ಹೊಂದಿಸಲು ಹೆಣಗಾಡುತ್ತಿದೆ ಎಂದು ಹೇಳಲಾಗಿದೆ. ಹೀಗಿದ್ದೂ ಪಾಕಿಸ್ತಾನಿ ನಾಯಕರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಪಾಕ್ ಬಳಿ ಕೇವಲ 96 ಗಂಟೆಯಷ್ಟು ಮಾತ್ರ ಯುದ್ಧ ಮಾಡಲು ಮದ್ದುಗುಂಡುಗಳ ಸಂಗ್ರಹ ಇದೆ.
ಏನೆಲ್ಲ ಕೊರತೆ ಇದೆ..?
ಪ್ರಮುಖವಾಗಿ ಮದ್ದುಗುಂಡುಗಳು ಪಾಕ್ ಬಳಿಯಿಲ್ಲ. ಭಾರತದ ಮಿಲಿಟರಿ ಕಾರ್ಯಾಚರಣೆಯನ್ನು ತಡೆಯಲು ಪಾಕ್ ಸೇನೆಯ ಬಳಿ M109 ಹೋವಿಟ್ಜರ್ಗಳಿಗೆ 155 ಎಂಎಂ ಶೆಲ್ಗಳಿಲ್ಲ. BM-21 ವ್ಯವಸ್ಥೆಗಳಿಗೆ 122 ಎಂಎಂ ರಾಕೆಟ್ಗಳಿಲ್ಲ. ಏಪ್ರಿಲ್ನಲ್ಲಿ ಪಾಕ್ ಟ್ವೀಟ್ ಮಾಡಿತ್ತು. ಅದರ ಪ್ರಕಾರ, 155 ಎಂಎಂ ಫಿರಂಗಿ ಶೆಲ್ಗಳನ್ನು ಉಕ್ರೇನ್ಗೆ ರವಾನಿಸಲಾಗಿದೆ ಎಂದು ಹೇಳಿಕೊಂಡಿದೆ. ಇದರಿಂದ ಯುದ್ಧ ಸಾಮಾಗ್ರಿಗಳ ಕೊರತೆಯನ್ನು ಪಾಕ್ ಎದುರಿಸುತ್ತಿದೆ. ಪಾಕಿಸ್ತಾನದ ರಕ್ಷಣಾ ಸಚಿವಾಲಯವು ಯುದ್ಧ ಸಾಮಗ್ರಿಗಳ ಕೊರತೆ ಬಗ್ಗೆ ಚಿಂತೆಯಲ್ಲಿ ಬಿದ್ದಿದೆ. ಮೇ 2 ರಂದು ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಗಾಂಜಾ ಕೇಸ್ನಲ್ಲಿ ಕುದುರೆ ಅರೆಸ್ಟ್.. ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ