BIG BREAKING: ಭಾರತದ ಮೇಲೆ ಮತ್ತೆ ಪಾಕ್ ಡ್ರೋನ್, ಕ್ಷಿಪಣಿ ದಾಳಿಗೆ ಯತ್ನ.. ವಾಯು ದಾಳಿ ಸೈರನ್‌!

author-image
admin
Updated On
BIG BREAKING: ಭಾರತದ ಮೇಲೆ ಮತ್ತೆ ಪಾಕ್ ಡ್ರೋನ್, ಕ್ಷಿಪಣಿ ದಾಳಿಗೆ ಯತ್ನ.. ವಾಯು ದಾಳಿ ಸೈರನ್‌!
Advertisment
  • ಆಪರೇಷನ್ ಸಿಂಧೂರ ಸಮರದ ಮಧ್ಯೆ ಗಡಿಯಲ್ಲಿ ಪಾಕ್ ದಾಳಿ?
  • ಭಾರತದ 3 ಕಡೆಯಲ್ಲಿ ಪಾಕಿಸ್ತಾನ ಡ್ರೋನ್‌ ದಾಳಿಗೆ ವಿಫಲ ಯತ್ನ
  • ಭಾರತೀಯ ಸೇನಾ ನೆಲೆಯನ್ನೇ ಟಾರ್ಗೆಟ್ ಮಾಡಿರುವ ಪಾಕಿಸ್ತಾನ!

ಆಪರೇಷನ್ ಸಿಂಧೂರ ಸಮರದ ಮಧ್ಯೆ ಪಾಕಿಸ್ತಾನ ಗಡಿಯಲ್ಲಿ ಭಾರತದ ಮೇಲೆ ದಾಳಿ ಮಾಡುವ ದುಸ್ಸಾಹಸದಲ್ಲಿದೆ. ಜಮ್ಮು ವಿಮಾನ ನಿಲ್ದಾಣದ ಬಳಿ ಪಾಕ್‌ ಡ್ರೋನ್‌ಗಳ ಮೂಲಕ ದಾಳಿ ಮಾಡಲು ಯತ್ನಿಸಿದೆ. ಪಾಕಿಸ್ತಾನದ 8 ಮಿಸೈಲ್‌ಗಳನ್ನ ಭಾರತ ಹೊಡೆದುರುಳಿಸಿದೆ ಅನ್ನೋ ವರದಿಯಾಗಿದೆ.

publive-image

ಪ್ರತೀಕಾರವಾಗಿ ಪಾಕಿಸ್ತಾನ, ಭಾರತೀಯ ಸೇನಾ ನೆಲೆಯನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಲು ಮುಂದಾಗಿದೆ. ಆದರೆ ಭಾರತ, ಪಾಕ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್‌ನಿಂದ ಗುಂಡಿನ ದಾಳಿ ಕೂಡ ಮುಂದುವರಿದಿದೆ.

ಇದನ್ನೂ ಓದಿ: ಸೋಫಿಯಾ, ರಾಣಿ ಚೆನ್ನಮ್ಮನ ಮಡಿಲ ಹೆಮ್ಮೆಯ ಸೊಸೆ.. ಈ ಸಿಂಧೂರ ಸಿಂಹಿಣಿ ಖುರೇಷಿ ಲೈಫ್​ ಜರ್ನಿ ಹೇಗಿದೆ? 

publive-image

ಪ್ರಮುಖವಾಗಿ ಚನಿ ಹಿಮತ್‌, ಆರ್‌ಎಸ್‌ ಪುರ, ಜಮ್ಮುವಿನ 3 ಕಡೆಯಲ್ಲಿ ಪಾಕಿಸ್ತಾನ ಡ್ರೋನ್‌ ದಾಳಿಗೆ ಯತ್ನ ಮಾಡಿದೆ. ಈ ಬಿಗುವಿನ ವಾತಾವರಣದಲ್ಲಿ ಜಮ್ಮುವಿನಾದ್ಯಂತ ವಾಯು ದಾಳಿ ಸೈರನ್‌ ಮೊಳಗಿದೆ. ಭಾರತದ ಗಡಿಯಿಂದ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment