/newsfirstlive-kannada/media/post_attachments/wp-content/uploads/2025/04/Shahbaz-sharif.jpg)
ಜಾಣನಿಗೆ ಮಾತಿನ ಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು ಎಂಬ ಗಾದೆ ಮಾತು ಗುಳ್ಳೆ ನರಿ ಪಾಕಿಸ್ತಾನಕ್ಕೆ ಸರಿಯಾಗಿ ಅನ್ವಯಿಸುತ್ತೆ.. ಯಾಕಂದ್ರೆ ಶುತ್ರುರಾಷ್ಟ್ರ ಪಾಕಿಸ್ತಾನ ಪದೇ ಪದೇ ಭಾರತವನ್ನು ಕೆಣಕುವ ದುಸ್ಸಾಹವನ್ನ ಮುಂದುವರಿಸಿದೆ. ಕಳೆದ ರಾತ್ರಿಯೂ ಗುಳ್ಳೆ ನರಿ ಪಾಕಿಸ್ತಾನ ಭಾರತದ 3 ರಾಜ್ಯಗಳನ್ನು ಟಾರ್ಗೆಟ್​ ಮಾಡಿದ್ದು, ಪಾಕ್​ ಡ್ರೋನ್​ಗಳಿಗೆ ಮಣ್ಣು ಮುಕ್ಕಿಸಿದ ಭಾರತ ಪಾಪಿಸ್ತಾನಕ್ಕೆ ಕಳೆದ ರಾತ್ರಿಯೇ ತಕ್ಕ ಶಾಸ್ತಿ ಮಾಡಿದೆ.
3 ರಾಜ್ಯ.. 26 ಸ್ಥಳಗಳಲ್ಲಿ ದಾಳಿಗೆ ಯತ್ನಿಸಿದ ‘ಪಾಪಿ’ಸ್ತಾನ
ಕಳೆದ ರಾತ್ರಿ ಭಾರತದ 3 ರಾಜ್ಯಗಳ 26 ನಗರಗಳ ಮೇಲೆ ಡ್ರೋಣ್​ ದಾಳಿಗೆ ಯತ್ನಿಸಿದೆ. ನಾಗರಿಕರು ಮತ್ತು ಸೇನಾ ನೆಲೆಗಳನ್ನ ಗುರಿಯಾಗಿಸಿ ಪಾಕ್​ ನಡೆಸಿದ ಡ್ರೋನ್​ ದಾಳಿಗೆ ಭಾರತದ ಎಡಿಎಸ್ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನ ಹಾರಿಸಿದ ನೂರಕ್ಕೂ ಹೆಚ್ಚು ಡ್ರೋಣ್​ಗಳನ್ನು ಏರ್​ ಡಿಫೆನ್ಸ್​ ಸಿಸ್ಟಮ್​ ಮೂಲಕ ಹೊಡೆದುರುಳಿಸಲಾಗಿದೆ. ರಾಜಸ್ಥಾನದಲ್ಲಿ 10 ಡ್ರೋಣ್​​, ಜೈಸಲ್ಮೇರ್​ನಲ್ಲಿ 9 ಡ್ರೋನ್ ಶ್ರೀನಗರದಲ್ಲಿ 15 ಡ್ರೋನ್​, ಗುಜರಾತ್​ನಲ್ಲೂ 10ಕ್ಕೂ ಹೆಚ್ಚು ಡ್ರೋಣ್​ಗಳನ್ನು ಧ್ವಂಸಗೊಳಿಸಲಾಗಿದೆ. ಶ್ರೀನಗರದ ಏರ್ಪೋಟ್​ ಬಳಿ ಸ್ಫೋಟಗೊಂಡ ಸುದ್ದಿ ಕೇಳಿದ ವರದಿಯಾಗಿದೆ.
ಇದನ್ನೂ ಓದಿ: IPL ಪಂದ್ಯಗಳು 1 ವಾರ ಮುಂದೂಡಿಕೆ.. ಪ್ಲೇ ಆಫ್ ​ರೇಸ್​ನಲ್ಲಿ ಯಾವ್ಯಾವ ಟೀಮ್ ಇವೆ?
ಮೂವರಿಗೆ ಗಾಯ
ಪಂಜಾಬ್‌ನ ಫಿರೋಜ್​​ಪುರದಲ್ಲಿ ಪಾಕಿಸ್ತಾನದ ಡ್ರೋಣ್​ ದಾಳಿಯಿಂದ ಮೂವರಿಗೆ ಗಾಯವಾಗಿದೆ. ಈ ಮೂಲಕ ಪಾಪಿಸ್ತಾನ ನಾಗರೀಕರ ಮೇಲೆ ದಾಳಿ ಮಾಡಿದ್ದು, ಭಾರತವನ್ನು ಕೆರಳಿಸಿದೆ. ಫಿರೋಜ್‌ಪುರದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಪಾಕ್​ ಡ್ರೋಣ್​ ದಾಳಿ ವೇಳೆಯೇ ಭಾರತ ಹೊಡೆದುರುಳಿಸಿದ ಡ್ರೋನ್​ ಒಂದು ಪಂಜಾಬ್‌ನ ಮನೆಯೊಂದರ ಮೇಲೆ ಬಿದ್ದು, ಹಾನಿಯುಂಟಾಗಿದೆ.
ನಾಗರಿಕ ವಿಮಾನಗಳನ್ನೇ ಗುರಾಣಿ ಮಾಡಿಕೊಂಡ ಪಾಕ್
ಭಾರತದ ದಾಳಿಯಿಂದ ಬೆದರಿ ಬೆಂಡಾಗಿರುವ ಪಾಪಿಗಳ ರಾಷ್ಟ್ರ.. ತಪ್ಪಿಸಿಕೊಳ್ಳಲು ನಾಗರಿಕ ವಿಮಾನಗಳನ್ನೇ ಗುರಾಣಿ ಬಳಿಸಿಕೊಳ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾರಾಟ ನಡೆಸಿ ಕರಾಚಿಯಿಂದ ಲಾಹೋರ್​ಗೆ ರಾತ್ರಿಯಿಂದ 8 ರಿಂದ 9 ಗಂಟೆಯವರೆಗೆ ನಾಗರಿಕ ವಿಮಾನಗಳು ಹಾರಾಡಿವೆ. ಈ ಮೂಲಕ ಪಾಕ್​ನ ವಾಯುಪ್ರದೇಶವನ್ನು ಮುಚ್ಚದೇ ಜನರ ಜೀವದ ಜೊತೆ ಚೆಲ್ಲಾಟವಾಡಿದೆ.
ಇದನ್ನೂ ಓದಿ: ಪಾಕ್​ ವಿಫಲ ಡ್ರೋಣ್ ದಾಳಿ.. ಗುರಿ ಮುಟ್ಟವ ಮೊದಲೇ ಫಿನಿಶ್ ಮಾಡಿದ ಭಾರತೀಯ ಸೇನೆ
ಹೈವೋಲ್ಟೇಜ್ ಸಭೆ
ಪಾಕಿಸ್ತಾನದ ದಾಳಿ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಸಭೆ ಮೇಲೆ ಸಭೆ ನಡೆಸಲಾಗ್ತಿದೆ. ಕಳೆದ ರಾತ್ರಿ 3 ಗಂಟೆಗಳ ಕಾಲ ಮೋದಿ ಹೈವೋಲ್ಟೇಜ್​ ಮೀಟಿಂಗ್ ನಡೆಸಿದ್ದಾರೆ. 3 ಸೇನಾ ಮುಖ್ಯಸ್ಥರು ಹಾಗೂ NSA ಅಜಿತ್ ಧೋವಲ್ ಜೊತೆ ಮೋದಿ ಮಹತ್ವದ ಚರ್ಚೆ ನಡೆಸಿದ್ದಾರೆ. ಇದಾದ ಬಳಿಕ ವಿದೇಶಾಂಗ ಸಚಿವ ಜೈಶಂಕರ್ ಜೊತೆಯೂ ಪ್ರತ್ಯೇಕವಾಗಿ ಮೋದಿ ಮಾತುಕತೆ ನಡೆಸಿದ್ದಾರೆ.
ಒಟ್ನಲ್ಲಿ ಸುಮ್ಮನಿಲಾರದೇ ಕಾಲು ಕೆರೆದುಕೊಂಡು ಭಾರತದ ಮೇಲೆ ದಾಳಿಗೆ ಹೊಂಚು ಹಾಕಿದ ಪಾಕಿಸ್ತಾನ ಬಾಲ ಸುಟ್ಟ ಬೆಕ್ಕಿನಂತಾಗಿದೆ. ಇನ್ನೂ ಮೊಂಡಾಟ ಮುಂದುವರೆಸಿದ್ರೆ ಪಾಕಿಸ್ತಾನ ರೆಕ್ಕೆ-ಪುಕ್ಕ ಕಟ್​ ಆಗೋದು ಖಚಿತವಾಗಿದೆ. ಪಾಕಿಸ್ತಾನವನ್ನ ಪಂಚರ್​ ಮಾಡೋಕೆ ಭಾರತ ಸೇನೆಯೂ ಸರ್ವ ಸನ್ನದ್ಧವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ