/newsfirstlive-kannada/media/post_attachments/wp-content/uploads/2025/04/Bilawal-Bhutto.jpg)
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಉಗ್ರ ಪೋಷಕ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪರಿಣಾಮ ಪಾಕಿಸ್ತಾನ ತನ್ನ ಬುಡಕ್ಕೆ ಬೆಂಕಿ ಬಿದ್ದಂತೆ ವರ್ತಿಸಲು ಶುರುಮಾಡಿದೆ.
ಪಾಕಿಸ್ತಾನಿಯರನ್ನು ಭಾರತದಿಂದ ಹೊರಗಟ್ಟುವುದು, ಅಲ್ಲಿದ್ದ ಭಾರತೀಯರನ್ನು ವಾಪಸ್ ಕರೆಸಿಕೊಳ್ಳುವುದು, ವೀಸಾ ರದ್ದು, ಅಟ್ಟಾರಿ ಗಡಿ ಬಂದ್ ಮಾಡುವುದರ ಜೊತೆಗೆ ಪ್ರಮುಖವಾಗಿ ಸಿಂಧೂ ನದಿ ನೀರು ಒಪ್ಪಂದ ಅಮಾನತು ಮಾಡುವುದಾಗಿ ಭಾರತ ಘೋಷಣೆ ಮಾಡಿದೆ. ಅದನ್ನು ಕಾರ್ಯರೂಪಕ್ಕೆ ತರುವ ಕೆಲಸಗಳು ನಡೆಯುತ್ತಿವೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಬಸ್.. ಮಂಡ್ಯದಲ್ಲಿ 25 ಪ್ರಯಾಣಿಕರು ಜಸ್ಟ್ ಮಿಸ್!
ಇದರಿಂದ ಉರಿದು ಕೊಂಡಿರುವ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ, ಉದ್ಧಟತನದ ಹೇಳಿಕೆ ನೀಡಿದ್ದಾನೆ. ಸಾರ್ವಜನಿಕ ಮಾತನಾಡಿರುವ ಭುಟ್ಟೋ.. ‘ನಾನು ಸಿಂಧೂ ನದಿಯ ದಡದಲ್ಲಿ ನಿಂತು ಭಾರತಕ್ಕೆ ಸಿಂಧೂ ನಮ್ಮದು ಮತ್ತು ಅದು ನಮ್ಮದು ಆಗಿಯೇ ಉಳಿಯುತ್ತದೆ ಎಂದು ಹೇಳಲು ಬಯಸುತ್ತೇನೆ. ನಮ್ಮ ನೀರು ಈ ನದಿಯ ಮೂಲಕ ಹರಿಯುತ್ತದೆ. ಅದು ಹರಿಯದಿದ್ದರೆ ಅಲ್ಲಿ ಅವರ ರಕ್ತ ಹರಿಯುತ್ತೆ ಎಂದು ವಿಷ ಕಕ್ಕಿದ್ದಾನೆ.
ಪಾಕಿಸ್ತಾನಿ ನಾಯಕ ಭುಟ್ಟೋ ‘ಭಾರತ ಸಿಂಧೂ ನದಿಯ ಮೇಲೆ ದಾಳಿ ಮಾಡಿದೆ’ ಎಂದು ಹೇಳಿಕೊಂಡಿದ್ದಾನೆ. ಭಾರತದ ಜನಸಂಖ್ಯೆ ನಮಗಿಂತ ಹೆಚ್ಚಿರಬಹುದು. ಆದರೆ ಪಾಕಿಸ್ತಾನದ ಜನ ಧೈರ್ಯಶಾಲಿಗಳು. ನಾವು ಗಡಿಯಲ್ಲಿ ಹೋರಾಡುತ್ತೇವೆ. ಭಾರತಕ್ಕೆ ಉತ್ತರ ನೀಡುತ್ತೇವೆ ಎಂದಿದ್ದಾನೆ.
ಇದನ್ನೂ ಓದಿ: ಉಗ್ರರ ವಿರುದ್ಧ ಪ್ರತೀಕಾರಕ್ಕೆ ಮುಂದಾದ ಸೇನೆ.. ಭಾರತಕ್ಕೆ ಇರುವ ಆಯ್ಕೆಗಳು ಏನೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ