ಪುಕ್ಕಲು ಪಾಕಿಸ್ತಾನಕ್ಕೆ ನಡುಕ.. ಅಣ್ವಸ್ತ್ರ ಹಾಕ್ತೀನಿ ಅಂತಾ ಹೆದರಿಸಿ ಈಗ ಬಣ್ಣ ಬದಲಿಸಿದ ರಕ್ಷಣಾ ಸಚಿವ

author-image
Ganesh
Updated On
ಪುಕ್ಕಲು ಪಾಕಿಸ್ತಾನಕ್ಕೆ ನಡುಕ.. ಅಣ್ವಸ್ತ್ರ ಹಾಕ್ತೀನಿ ಅಂತಾ ಹೆದರಿಸಿ ಈಗ ಬಣ್ಣ ಬದಲಿಸಿದ ರಕ್ಷಣಾ ಸಚಿವ
Advertisment
  • ಕೆಟ್ಟ ಮೇಲೆ ಬಣ್ಣ ಬದಲಿಸಿದ ರಕ್ಷಣಾ ಸಚಿವ..!
  • ಆಪರೇಷನ್ ಸಿಂಧೂರ್ ದಾಳಿಗೆ ನಡುಗಿದ ಪಾಕ್
  • ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ ಮೂಲಕ ಸೇಡು ತೀರಿಸಿಕೊಂಡಿದೆ. ಭೂಸೇನೆ, ವಾಯುಪಡೆ ಮತ್ತು ನೌಕಾಪಡೆ ಜಂಟಿಯಾಗಿ ನಡೆಸಿದ ದಾಳಿಗೆ ಬೆಚ್ಚಿ ಬಿದ್ದಿರುವ ಪಾಕಿಸ್ತಾನಕ್ಕೆ ಈಗ ನಡುಕ ಶುರುವಾಗಿದೆ.

ಅದೇ ಕಾರಣ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜ್ ಅಸೀಫ್ ಹಿಂದೆ ಸರಿಯುವ ಮಾತನ್ನಾಡಿದ್ದಾನೆ. ಭಾರತ ದಾಳಿ ನಡೆಸುವುದರಿಂದ ಹಿಂದೆ ಸರಿದರೆ ನಾವೂ ಕೂಡ ಹಿಂದೆ ಸರಿಯುತ್ತೇವೆ ಎಂದಿದ್ದಾನೆ. ಆಪರೇಷನ್ ಸಿಂಧೂರ ಬೆನ್ನಲ್ಲೇ ಪಾಕ್ ಸಚಿವ ಹೆದರಿ ಈ ಮಾತನ್ನು ಆಡಿದ್ದಾನೆ. ಈ ಮೊದಲು ನಮ್ಮಲ್ಲಿ ಅಣ್ವಸ್ತ್ರ ಇದೆ. ಭಾರತದ ಮೇಲೆ ಪ್ರಯೋಗ ಮಾಡ್ತೇವೆ ಎಂದು ಬೆದರಿಕೆ ಹಾಕಿದ್ದ.

ಇದನ್ನೂ ಓದಿ: ಇಷ್ಟಾದರೂ ಬುದ್ಧಿ ಕಲಿಯಲಿಲ್ಲ.. ಭೀಕರ ದಾಳಿ ಬೆನ್ನಲ್ಲೇ ಪಾಕ್ ಸೇನಾಧಿಕಾರಿ ಏನು ಮಾಡಿದ ನೋಡಿ..! VIDEO

ಇತ್ತ, ಹಿಂದೆ ಸರಿಯುವ ಮಾತನಾಡಿದರೂ, ಪೂಂಚ್ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಭಾರತದ 10 ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಇನ್ನು, ಭಾರತ ನಡೆಸಿದ ಆಪರೇಷನ್ ಸಿಂಧೂರ್​​ಗೆ ಪಾಕಿಸ್ತಾನದ 80ಕ್ಕೂ ಹೆಚ್ಚು ಉಗ್ರರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ 21 ಉಗ್ರರ ಕ್ಯಾಂಪ್​ಗಳು ನೆಲಸಮಗೊಂಡಿವೆ. ಹೀಗಾಗಿ ಪಾಕ್​ಗೆ ಭಯ ಶುರುವಾಗಿದೆ.

ಇದನ್ನೂ ಓದಿ: ಇದು ಗಾಂಧಿ, ಬಸವಣ್ಣನ ಕಾಲ ಅಲ್ಲ – ಸಿಂಧೂರ ಇಟ್ಕೊಂಡು ಭಾರತದ ಬಗ್ಗೆ ಸಿಎಂ ಏನಂದ್ರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment