/newsfirstlive-kannada/media/post_attachments/wp-content/uploads/2025/05/PAK-AND-US.jpg)
ಭಾರತದ ದಾಳಿಯಿಂದ ನಮ್ಮನ್ನು ಬಚಾವ್ ಮಾಡಿ ಎಂದು ಅಮೆರಿಕಗೆ ಪಾಕಿಸ್ತಾನ ಮನವಿ ಮಾಡಿದೆ. ಪಾಕಿಸ್ತಾನದ ಮೇಲೆ ಕೋಪಗೊಂಡಿರುವ ಭಾರತವನ್ನು ಶಾಂತಗೊಳಿಸಿ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಗೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಬೇಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಸಂಸದ, ಭಾರತದಲ್ಲಿ ಕುಲ್ಫಿ ಐಸ್ ಕ್ರೀಮ್ ಮಾರಾಟ ಮಾಡ್ತಾರೆ.. ಈಗ ಎಲ್ಲಿದ್ದಾರೆ?
ಮತ್ತೊಂದೆಡೆ ಟೆನ್ಷನ್ ವಾತಾವರಣವನ್ನು ತಗ್ಗಿಸಲು ಭಾರತದೊಂದಿಗೆ ಕೆಲಸ ಮಾಡಿ, ಹಾಗೂ ದಕ್ಷಿಣ ಏಷ್ಯಾದಲ್ಲಿ ಶಾಂತಿ, ಭದ್ರತೆಯನ್ನು ಕಾಪಾಡಿಕೊಳ್ಳಿ ಎಂದು ಪಾಕಿಸ್ತಾನ ಅಮೆರಿಕಗೆ ಮನವಿ ಇಟ್ಟಿದೆ. ಇದರ ನಡುವೆ ಗಡಿಯಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದೆ. ಇಂದು ಬೆಳಗ್ಗೆ ಭಾರತೀಯ ಸೇನೆ ಗಡಿಯಲ್ಲಿ ಬ್ಯಾಟಲ್ ಟ್ಯಾಂಕ್ಗಳು ಮತ್ತು ಫಿರಂಗಿಗಳನ್ನು ನಿಯೋಜನೆ ಮಾಡಿದೆ.
ಪಾಕ್ ಸೇನೆಗೆ ಮಾಸ್ಟರ್ ಸ್ಟ್ರೋಕ್..!
ಅಷ್ಟೇ ಅಲ್ಲದೇ ಭಾರತದಿಂದ ಪಶ್ಚಿಮ ಗಡಿಯಲ್ಲಿ ಜಾಮರ್ ಅಳವಡಿಕೆ ಮಾಡಲಾಗಿದೆ. ಪಾಕಿಸ್ತಾನದ ಯುದ್ಧ ವಿಮಾನಗಳಿಗೆ ನಾವಿಗೇಷನ್ ಸಿಗದಂತೆ ಜಾಮರ್ ಅಳವಡಿಕೆ ಮಾಡಲಾಗಿದೆ. ಗ್ಲೋಬಲ್ ನಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಅನ್ನು ಪಾಕ್ ಮಿಲಿಟರಿ ಬಳಸುತ್ತಿದೆ. ರಷ್ಯಾ, ಅಮೆರಿಕಾದ ಸ್ಯಾಟಲೈಟ್ ಮೂಲಕ ನಾವಿಗೇಷನ್ ಸಿಸ್ಟಮ್ ಬಳಸುತ್ತಿದೆ. ಜಾಮರ್ ಅಳವಡಿಕೆಯಿಂದ ಪಾಕ್ನಿಂದ ನಿಖರವಾದ ದಾಳಿ ನಡೆಸಲು ಸಾಧ್ಯವಾವುದಿಲ್ಲ.
ಇದನ್ನೂ ಓದಿ: ಪಾಪರ್ ಪಾಕ್ಗೆ ಭಾರತದಿಂದ ಮತ್ತೊಂದು ಪೆಟ್ಟು.. ತಳಮಳಗೊಂಡ ನಟ, ನಟಿಯರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ