ಉಗ್ರರ ನೆಲೆಗಳ ಮೇಲೆ ಭಾರತ ಮಿಸೈಲ್ ಅಟ್ಯಾಕ್.. ಆದರೆ ಪಾಕಿಸ್ತಾನ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತಾ..?

author-image
Ganesh
Updated On
ಅತ್ತ.. ಇತ್ತ.. ಸುತ್ತ.. ಮುತ್ತ.. ಪಾಕ್​​ಗೆ ಹೊಡ್ತ; 20 ಪಾಕ್​ ಸೈನಿಕರ ಜೀವ ತೆಗೆದ ತಾಲಿಬಾನ್ ಉಗ್ರರು..!
Advertisment
  • ಭಾರತದ ದಾಳಿಗೆ ಪ್ರತೀಕಾರ ಫಿಕ್ಸ್ ಎಂದ ಷರೀಫ್
  • 24 ಗಂಟೆಗಳೊಳಗೆ ಉತ್ತರ ಎಂದ ಪಾಕ್ ಪ್ರಧಾನಿ
  • ಜಾಗತಿಕ ನಾಯಕರ ಮುಂದೆ ಪಾಕ್​ಗೆ ದೋವಲ್​ ವಾರ್ನ್​

ಉಗ್ರರ ವಿರುದ್ಧ ಆಪರೇಷನ್ ಸಿಂಧೂರಕ್ಕೆ ಪಾಕಿಸ್ತಾನ ಥರಥರ ಎಂದಿದೆ. ರಣವಿಕ್ರಮ ಭಾರತೀಯ ಸೇನೆಯ ರಣಾರ್ಭಟಕ್ಕೆ ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ವಿಲವಿಲ ಅನ್ನುತ್ತಿರೋ ಪಾಕಿಸ್ತಾನ, ಭಾರತದ ದಾಳಿಗೆ ಪ್ರತೀಕಾರ ತೀರಿಸಿಕೊಳ್ತೀವಿ ಅಂತಿದೆ. ಸತ್ತ ಉಗ್ರರನ್ನು ಹುತಾತ್ಮರು ಅಂತ ಬಣ್ಣಿಸಿರೋ ಪಾಕ್ ಪ್ರಧಾನಿ ಶೀಘ್ರದಲ್ಲೇ ಉತ್ತರ ಕೊಡ್ತೀವಿ ಎಂದಿದೆ.

‘ಭಾರತದ ದಾಳಿಗೆ ಪ್ರತೀಕಾರ ಫಿಕ್ಸ್ ಎಂದ ಷರೀಫ್!

ಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸೇನೆ ಯಶಸ್ವಿಯಾಗಿ ಸೇಡು ತೀರಿಸಿಕೊಂಡಿದದೆ. ಪಿಓಕೆ ಹಾಗೂ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮೂಲಕ ಉಡೀಸ್ ಮಾಡಿದೆ. ಭಾರತೀಯ ಸೇನೆಯ ಈ ಕ್ಷಿಪ್ರ ದಾಳಿಯಿಂದ ಪಾಕಿಸ್ತಾನ ಅಕ್ಷರಶಃ ನಡುಗಿದೆ. ಈ ಭಯವನ್ನು ತೋರ್ಪಡಿಸಿಕೊಳ್ಳದ ಪಾಕಿಸ್ತಾನ, "ಆಪರೇಷನ್‌ ಸಿಂಧೂರ" ಕಾರ್ಯಾಚರಣೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದೆ. ಈ ಕುರಿತು ಮಾತನಾಡಿರುವ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್‌ ಶರೀಫ್‌, ಪಾಕಿಸ್ತಾನ ನೆಲದಲ್ಲಿ ಭಾರತೀಯ ಸೇನೆಯ ದಾಳಿಯನ್ನು ಯುದ್ಧದ ಕೃತ್ಯ ಅಂತ ಪರಿಗಣಿಸುತ್ತೇವೆ, ಶೀಘ್ರದಲ್ಲೇ ಪ್ರತ್ಯುತ್ತರ ನೀಡ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ.. ಆಪರೇಷನ್ ಬಂಗಾರ; ಒಂದೇ ದಿನದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ; ಎಷ್ಟು?

publive-image

ಭಾರತೀಯ ಸೇನೆ ಕಳೆದ ರಾತ್ರಿ ದಾಳಿ ನಡೆಸಿ ನಮ್ಮ ಅಮಾಯಕ ನಾಗರಿಕರನ್ನು ಹೊಡೆದುರುಳಿಸಿದೆ. ಇದಕ್ಕೆ ಭಾರತ ಬೆಲೆ ತೆರಲಿದೆ. ಬಹುಶಃ ನಾವು ಹೆದರಿ ಹಿಂದೆ ಸರಿಯುತ್ತೇವೆ ಅಂತ ಅಂದುಕೊಂಡಿರಬಹುದು, ಆದ್ರೆ ಅವರು ಅದನ್ನು ಮರೆತುಬಿಡಲಿ, ಪಾಕಿಸ್ತಾನಿಗಳು ಧೈರ್ಯಶಾಲಿಗಳು, ಈ ವಿಚಾರದಲ್ಲಿ ನಾವು ದೃಢ ನಿಲುವು ಹೊಂದಿದ್ದೇವೆ-ಶಹಬಾಜ್ ಷರೀಫ್, ಪಾಕಿಸ್ತಾನ ಪ್ರಧಾನಿ

ಪಾಕ್ ಪ್ರಧಾನಿ ಜೊತೆ ಮುನೀರ್ ಮುಲ್ಲಾ ಚರ್ಚೆ

ಭಾರತ ಸೇನೆ ನಡೆಸಿರುವ ದಾಳಿಯಲ್ಲಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ. ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದೆ. ರಾಷ್ಟ್ರೀಯ ಭದ್ರತಾ ಪರಿಷತ್ ಸಭೆ ನಡೆಸಿರೋ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್​, ಸೇನಾ ಮುಖ್ಯಸ್ಥ ಸೈಯದ್ ಅಸಿಮ್ ಮುನೀರ್ ಅಹ್ಮದ್ ಷಾ ಜೊತೆ ಚರ್ಚೆ ನಡೆಸಿದ್ದಾರೆ.. ಭಾರತದ ಮೇಲೆ ದಾಳಿ ನಡೆಸುವ, ಸಮಯ, ಸ್ಥಳ ನಿರ್ಧರಿಸಲು ಸೇನೆ ಫುಲ್ ಫ್ರೀಡಂ ನೀಡಿದ್ದಾರೆ.

ಪಾಕ್ ದಾಳಿ ನಡೆಸಿದರೆ, ಭೀಕರ ಮರು ದಾಳಿ ನಡೆಸದೆ ಬಿಡಲ್ಲ

ಹಲ್ಗಾಮ್​ ಉಗ್ರ ದಾಳಿಗೆ ಪ್ರತೀಕಾರವಾಗಿ ನಡೆದ ಭಾರತೀಯ ಸೇನಾ ಕಾರ್ಯಾಚರಣೆಯಲ್ಲಿ ಉಗ್ರರ ನೆಲೆಗಳನ್ನು ಮಾತ್ರ ಧ್ವಂಸ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ದಾಳಿ ನಡೆಸಿದಲ್ಲಿ, ಭೀಕರ ಮರು ದಾಳಿ ನಡೆಸುವುದಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜಾಗತಿಕ ನಾಯಕರ ಮುಂದೆಯೇ ಪಾಕಿಸ್ತಾನಕ್ಕೆ ಖಡಕ್​ ವಾರ್ನಿಂಗ್​ ರವಾನಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ಪರಮ ಪಾಪಿಗಳಿಗೆ ಈಗ ಕಣ್ಣೀರು.. ನರಕ ತೋರಿಸಿದ ಭಾರತದ ವೈಮಾನಿಕ ದಾಳಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment