/newsfirstlive-kannada/media/post_attachments/wp-content/uploads/2025/05/Sharif.jpg)
ಆಪರೇಷನ್ ಸಿಂಧೂರ ಬಳಿಕ ಪಾಕಿಸ್ತಾನ ತತ್ತರಿಸಿ ಹೋಗಿದೆ. ಬಾಲ ಸುಟ್ಟ ಬೆಕ್ಕಿನಂತೆ ಆಗಿರುವ ಪಾಕ್, ಇದೀಗ ಹೊಸ, ಹೊಸ ನಾಟಕಗಳನ್ನ ಶುರುಮಾಡಿದೆ. ಭಾರತೀಯ ಸೇನೆಯು ಉಗ್ರರ ನೆಲೆಗಳ ಮೇಲೆ ನುಗ್ಗಿ ಹೊಡೆದ ಬೆನ್ನಲ್ಲೇ ಪಾಕ್ ಸರ್ಕಾರ ತುರ್ತಾಗಿ ಅಧಿವೇಶನ ನಡೆಸಿತು.
ಈ ವೇಳೆ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಸದನವನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ‘ಆಪರೇಷನ್ ಸಿಂಧೂರ್’ ಬಗ್ಗೆ ಬರೀ ಸುಳ್ಳುಗಳನ್ನ ಹೇಳಿದ್ದಾರೆ. ಆಪರೇಷನ್ ಸಿಂಧೂರ್ ಮೂಲಕ ಭಾರತದ ಸೇನೆಯು ಪಾಕಿಸ್ತಾನ ಮತ್ತು ಪಿಒಕೆಯಲ್ಲಿದ್ದ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ. ಈ ಕಾರ್ಯಾಚರಣೆಯಲ್ಲಿ 90ಕ್ಕೂ ಹೆಚ್ಚು ಭಯೋತ್ಪಾದಕರು ಉಡೀಸ್ ಆಗಿದ್ದಾರೆ. ಇದರಿಂದ ಷರೀಫ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉದ್ವಿಗ್ನಗೊಂಡಿದ್ದಾರೆ. ಹಾಗಾಗಿ ಸುಳ್ಳುಗಳನ್ನ ಹೇಳಿದ್ದಾರೆ.
ಇದನ್ನೂ ಓದಿ: ಮೊಳಗಿತು ಸೈರನ್, ಗಡಿಯಲ್ಲಿ ಹೈಅಲರ್ಟ್! ಯುದ್ಧ ಪರಿಸ್ಥಿತಿ ನಿಭಾಯಿಸಲು ಟ್ರೈನಿಂಗ್..!
ಪ್ರಧಾನಿ ಹೇಳಿದ ಸುಳ್ಳುಗಳು..
ಸೇನಾ ಮುಖ್ಯಸ್ಥರ ಹೊಗಳಿಕೆ: ಪ್ರಧಾನಿ ಷರೀಫ್ ತಮ್ಮ ಹೇಳಿಕೆಯಲ್ಲಿ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ನನ್ನು ಕೊಂಡಾಡಿದ್ದಾರೆ. ಮುನೀರ್ ಅವರಿಂದಾಗಿ ಪಾಕಿಸ್ತಾನ್ ಬಚಾವ್ ಆಗಿದೆ ಎಂಬ ಅರ್ಥದಲ್ಲಿ ಮಾತನ್ನಾಡಿದ್ದಾರೆ. ಆದರೆ ವಾಸ್ತವ ಹಾಗಿಲ್ಲ. ಪಾಕ್ ಸೇನೆಯ ಕುತಂತ್ರ ಬುದ್ಧಿಯಿಂದಾಗಿಯೇ ಪಹಲ್ಗಾಮ್ ದಾಳಿ ಆಗಿರೋದು. ಪಾಕ್ ಸೇನೆ, ಉಗ್ರರನ್ನು ಪೋಷಿಸಿ, ಭಯೋತ್ಪಾದನೆಗೆ ಟ್ರೈನಿಂಗ್ ನೀಡಿದ ಪರಿಣಾಮವೇ ಆಪರೇಷನ್ ಸಿಂಧೂರ ನಡೆದಿರೋದು. ಈ ಆಪರೇಷನ್ ಸಿಂಧೂರಕ್ಕೆ ನೇರ ಹೊಣೆ ಪಾಕಿಸ್ತಾನಿ ಜನರಲ್ಗಳು.
ಭಾರತ ರಫೇಲ್ ಜೆಟ್ ಬಗ್ಗೆ ಸುಳ್ಳು..
ಭಾರತೀಯ ಯುದ್ಧ ವಿಮಾನಗಳು ಗಡಿ ದಾಟಿವೆಯೋ ಇಲ್ಲವೋ ಎಂಬ ಬಗ್ಗೆ ಶಹಬಾಜ್ ಷರೀಫ್ ತುಂಬಾ ಗೊಂದಲದ ಹೇಳಿಕೆ ನೀಡಿದ್ದಾರೆ. ಭಾರತೀಯ ಜೆಟ್‌ಗಳು ತಮ್ಮದೇ ವಾಯುಪ್ರದೇಶದಿಂದ ಪಾಕಿಸ್ತಾನದ ಗುರಿಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿವೆ ಎಂದಿದ್ದಾರೆ. ಮುಂದುವರಿದು ಪಾಕ್ ಸೇನೆ ಭಾರತದ ಜೆಟ್‌ಗಳ ಸಂವಹನ ವ್ಯವಸ್ಥೆಯನ್ನು ಸ್ಥಗಿತಗೊಳಿಸಿವೆ. ಹಾಗೆ ಮಾಡುವ ಮೂಲಕ ಭಾರತದ ಯುದ್ಧ ವಿಮಾನಗಳು ವಾಪಸ್ ಹೋದವು ಎಂದಿದ್ದಾರೆ. ಅಲ್ಲದೇ ಪಾಕಿಸ್ತಾನ ಸೇನೆಯು ಭಾರತದ 5 ಯುದ್ಧ ವಿಮಾನಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ ಎಂದಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ.
ಇದನ್ನೂ ಓದಿ: 12 ಭಾರತೀಯರ ಜೀವ ತೆಗೆದ ಪಾಕ್.. ಗಡಿಯಲ್ಲಿ ಜನರ ಗುರಿಯಾಗಿಸಿ ಮತ್ತೆ ಮತ್ತೆ ಶೆಲ್ ಅಟ್ಯಾಕ್
ಪಾಕ್ ಸೇನೆ ಮುಂದೆಯೇ ದಾಳಿ
ಪಾಕಿಸ್ತಾನಿ ಸೈನ್ಯವನ್ನು ಶ್ಲಾಘಿಸಿ, ನಮ್ಮ ಸೇನೆ ಸಂಪೂರ್ಣ ಸಿದ್ಧವಾಗಿದೆ ಎಂದು ಷರೀಫ್ ಹೇಳಿದ್ದಾರೆ. ಆದರೆ ಪಾಕ್ ಸೇನೆಯ ಅಡಿಯಲ್ಲೇ ಇರುವ 9 ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿ ಭಾರತ ಅಟ್ಯಾಕ್ ಮಾಡಿದೆ. ಇತ್ತ, ಪ್ರಧಾನಿ ಮೋದಿ ಭಾರತೀಯ ಸೇನೆಯು ಯಾವುದೇ ತಪ್ಪು ಮಾಡದೇ ಸರಿಯಾದ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದೆ ಎಂದು ತಿಳಿಸಿದ್ದಾರೆ. ಹಾಗೆ ನೋಡಿದರೆ ಪಾಕಿಸ್ತಾನಿ ಸೇನೆಯು ಭಾರತದ ನಿಖರ ದಾಳಿಗಳಿಂದ ಪಾರಾಗಲು ಸನ್ನದ್ಧವಾಗಿರಲಿಲ್ಲ ಎಂಬುದು ಸ್ಪಷ್ಟಪಡಿಸುತ್ತದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಮೊತ್ತೊಂದು ದೊಡ್ಡ ಆಘಾತ; 12 ಸೈನಿಕರು ಛಿದ್ರ ಛಿದ್ರ..! VIDEO
ಷರೀಫ್ ಈ ರೀತಿಯ ಸುಳ್ಳು ಹೇಳಿಕೆಗಳನ್ನ ಹೇಳುವ ಮೂಲಕ ಪಾಕ್ನಲ್ಲಿ ನಾಟಕ ಸೃಷ್ಟಿಸಿದ್ದಾರೆ. ಪಾಕ್ ಸೇನೆ ಬೇರೆ ಏನೋ ಹೇಳ್ತಿದೆ. ಸರ್ಕಾರ ಇನ್ನೇನೋ ಹೇಳ್ತಿದೆ. ಭಾರತೀಯ ವೈಮಾನಿಕ ದಾಳಿಗೆ ಪ್ರತಿಯಾಗಿ ಕ್ರಮ ಕೈಗೊಳ್ಳುವ ಬಗ್ಗೆ ಪಾಕ್ ಸೇನೆ, ಅಲ್ಲಿನ ಪ್ರಧಾನಿ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದೆ. ಅವರ ಸೇನೆಗೆ, ಅಲ್ಲಿನ ಸರ್ಕಾರಕ್ಕೆ ಪಾಕ್ ಮಾಧ್ಯಮಗಳೂ ಕೈಜೋಡಿಸಿವೆ. ಹಳೆಯ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಪ್ಪು ಮಾಹಿತಿಯನ್ನು ಹರಡುತ್ತಿವೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಮತ್ತೊಂದು ದೊಡ್ಡ ಆಘಾತ.. ಲಾಹೋರ್ನಲ್ಲಿ ಭೀಕರ ಸರಣಿ ಸ್ಫೋಟ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ