newsfirstkannada.com

ಪಾಕಿಸ್ತಾನ್ ಜಿಂದಾಬಾದ್ ಗಲಾಟೆ: ಸರ್ಕಾರದ ಕೈ ಸೇರಿದ FSL ರಿಪೋರ್ಟ್‌; ಆರೋಪಿ ಏನಂದ..?

Share :

Published March 1, 2024 at 7:54am

    ರಾಜ್ಯ ಸರ್ಕಾರದ ಗೃಹ ಸಚಿವಾಲಯಕ್ಕೆ ಎಫ್​ಎಸ್​ಎಲ್ ವರದಿ

    ದೇಶದ್ರೋಹ ಕೆಲಸ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ

    ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಆಡಿಯೋ ಮಾದರಿ ಸಂಗ್ರಹ

ಪಾಕಿಸ್ತಾನ ಪರ ಘೋಷಣೆ ವಿವಾದ ರಾಜ್ಯದಲ್ಲಿ ಹಲ್‌ಚಲ್​ ಎಬ್ಬಿಸಿದೆ. ಇದರ ಬೆನ್ನಲ್ಲೇ ಪ್ರಕರಣದ ವರದಿ ರಾಜ್ಯ ಸರ್ಕಾರದ ಕೈ ಸೇರಿದೆ. ಇತ್ತ ಬಿಜೆಪಿ ನಾಯಕರು ಪಾಕ್​ ಪರ ಘೋಷಣೆ ಕೂಗಿದವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಿ ಅಂತ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿದ ಆರೋಪ ಕಾಂಗ್ರೆಸ್ ಬೆಂಬಲಿಗರ ವಿರುದ್ಧ ಕೇಳಿಬಂದಿತ್ತು. ಪಾಕ್ ಪರ ಘೋಷಣೆ ಕೂಗಿರೋ ವಿಡಿಯೋ ಬಗ್ಗೆ ಭಾರೀ ಅನುಮಾನ ಶುರುವಾಗಿತ್ತು. ಹೀಗಾಗಿ ವಿಡಿಯೋನ ಎಫ್‌ಎಸ್‌ಎಲ್ ಪರಿಶೀಲನೆಗೆ ಸರ್ಕಾರ ಕಳುಹಿಸಿತ್ತು. ಇದೀಗ ಎಫ್‌ಎಸ್‌ಎಲ್ ವರದಿ ಸರ್ಕಾರದ ಕೈ ಸೇರಿದೆ.

‘ಕೈ’ ಬೆಂಬಲಿಗನಿಂದ ಪಾಕ್‌ ಪರ ಘೋಷಣೆ ಆರೋಪ

ಪಾಕ್‌ ಪರ ಘೋಷಣೆ ಕೂಗಿದ ವಿಡಿಯೋದ ಧ್ವನಿ ಪರೀಕ್ಷೆ ಮಾಡಲು ವಿಡಿಯೋ FSL ಕಳುಹಿಸಿದ ವರದಿಯನ್ನು ಎಫ್​ಎಸ್​ಎಲ್​​ ತಂಡ ತನ್ನ ವರದಿಯನ್ನು ರಾಜ್ಯ ಸರ್ಕಾರದ ಗೃಹ ಸಚಿವಾಲಯಕ್ಕೆ ನೀಡಿದೆ. ಜೊತೆಗೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವವರ ಧ್ವನಿ ಪರೀಕ್ಷೆಯೂ ಆಗಿದೆ.

ಮಹಮದ್ ಶಫಿ ವಿಚಾರಣೆ

  • ಮಹಮದ್ ಶಫಿ ನಾಶಿಪುಡಿಯ ಧ್ವನಿ ಪರೀಕ್ಷೆಗಾಗಿ ವಿಚಾರಣೆ
  • ಬೆಂಗಳೂರು ಪೊಲೀಸರಿಂದ ಮಹಮದ್ ಶಫಿ ನಾಶಿಪುಡಿ ತನಿಖೆ
  • ನಾನು ನಾಸೀರ್ ಸಾಬ್ ಜಿಂದಾಬಾದ್ ಎಂದ ಕೂಗಿದ್ದೇನೆಂದ ಶಫಿ
  • ನನ್ನ ತಾಯಾಣೆಗೂ ಪಾಕ್​ ಪರ ಘೋಷಣೆ ಕೂಗಿಲ್ಲ ಎಂದ ಶಫಿ
  • ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಆಡಿಯೋ ಮಾದರಿ ಸಂಗ್ರಹ

ರಾಜ್ಯ ಸರ್ಕಾರ ವಜಾಕ್ಕೆ ಬಿಜೆಪಿ ನಾಯಕರ ಆಗ್ರಹ

ಪಾಕ್‌ ಪರ ಘೋಷಣೆಯನ್ನೇ ಬಿಜೆಪಿ ಅಸ್ತ್ರ ಮಾಡಿಕೊಂಡಿದೆ. ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಮತ್ತೆ ದೂರು ಸಲ್ಲಿಸಿದೆ. ಅಲ್ಲದೇ ದೇಶದ್ರೋಹ ಕೆಲಸ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹೀಗಾಗಿ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು. ಅಲ್ಲದೇ ಈ ಸರ್ಕಾರವನ್ನು ವಜಾಗೊಳಿಸಬೇಕಿದೆ ಅಂತ ಬಿಜೆಪಿ ನಾಯಕರು ರಾಜಭವನದ ಕದ ತಟ್ಟಿದ್ದಾರೆ.

‘ಭಯೋತ್ಪಾದಕರ ತಾಣ ಆಗುತ್ತಿದೆ’

ಸರ್ಕಾರಕ್ಕೆ ಧೈರ್ಯವಿದ್ದರೇ, ತಾಕತ್ ಇದ್ದರೇ FSL ರಿಪೋರ್ಟ್ ಅನ್ನು ತಕ್ಷಣಕ್ಕೆ ಬಿಡುಗಡೆ ಮಾಡಬೇಕು. ಸರ್ಕಾರ ಏಕೆ ಅದನ್ನು ಇನ್ನು ಇಟ್ಟುಕೊಂಡಿದೆ ಎನ್ನುವುದನ್ನು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಯಾರನ್ನ ರಕ್ಷಣೆ ಮಾಡುವುದಕ್ಕಾಗಿ, ಯಾರನ್ನ ಬೆಂಬಲಿಸುವುದಕ್ಕಾಗಿ FSL ರಿಪೋರ್ಟ್ ಅನ್ನು ಜನರ ಮುಂದಿಡದೇ ಸರ್ಕಾರ ಮುಚ್ಚಿಡುತ್ತಿದೆ.

ಆರ್.ಅಶೋಕ್, ವಿಪಕ್ಷ ನಾಯಕ

ಪೊಲೀಸ್ ಠಾಣೆಯಲ್ಲಿ ಅವನನ್ನು ವಿಚಾರಣೆ ಮಾಡುವುದಿಲ್ಲ ಎಂದರೆ ಇವರು ಯಾವ ಪ್ರಮಾಣದಲ್ಲಿ ಅಕ್ಯೂಸ್​ಮೆಂಟ್​ಗೆ ನಿಂತಿದ್ದಾರೆ ಎನ್ನುವುದು ಅರ್ಥ ಆಗುತ್ತದೆ. ತುಷ್ಠಿಕರಣದ ರಾಜಕಾರಣದ ಪರಾಕಾಷ್ಠೆ ಇದು. ಪಾಕಿಸ್ತಾನದ್ದು, ಕಾಂಗ್ರೆಸ್​ನದ್ದು ಎರಡು ಒಂದೇ ಸ್ಥಿತಿ ಆಗಿದೆ. ಪಾಕ್ ಆರ್ಥಿಕವಾಗಿ ದಿವಾಳಿ ಆದಂತೆ, ಕಾಂಗ್ರೆಸ್​ ರಾಜಕೀಯವಾಗಿ ದಿವಾಳಿ ಆಗಿದೆ.

ಪ್ರಲ್ಹಾದ್​ ಜೋಶಿ, ಕೇಂದ್ರ ಸಚಿವ

ನಾಡಿನ ಶಕ್ತಿಸೌಧದಲ್ಲಿ ಪಾಕ್​ ಪರ ಘೋಷಣೆ ಕೂಗಿರೋ ವಿವಾದ ರಾಜ್ಯಾದ್ಯಂತ ದೊಡ್ಡ ಬೆಂಕಿಯ ಉಂಡೆಯನ್ನ ಉಗುಳಿದೆ. ಎಂಪಿ ಎಲೆಕ್ಷನ್​ ಹೊತ್ತಲ್ಲಿ ಪಾಕ್​ ಪರ ಘೋಷಣೆಯನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್​ನ್ನು ಸೋಲಿಸಲು ಬಿಜೆಪಿ ಲೆಕ್ಕಾಚಾರ ಹಾಕಿದಂತೆ ಕಾಣಿಸ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕಿಸ್ತಾನ್ ಜಿಂದಾಬಾದ್ ಗಲಾಟೆ: ಸರ್ಕಾರದ ಕೈ ಸೇರಿದ FSL ರಿಪೋರ್ಟ್‌; ಆರೋಪಿ ಏನಂದ..?

https://newsfirstlive.com/wp-content/uploads/2024/03/CM_FSL_REPORT.jpg

Load More