/newsfirstlive-kannada/media/post_attachments/wp-content/uploads/2025/07/PAK-SOCIAL-MEDIA-1.jpg)
ಭಾರತದಲ್ಲಿ ಮತ್ತೆ ಪಾಕಿಸ್ತಾನದ ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಅಕೌಂಟ್ ಬ್ಯಾನ್ ಮಾಡಲಾಗಿದೆ. ನಿನ್ನೆ ಸ್ಪಲ್ಪ ಹೊತ್ತು ಅಕೌಂಟ್ ಬ್ಯಾನ್ ತೆರವು ಮಾಡಲಾಗಿತ್ತು. ಇದಕ್ಕೆ ಭಾರತದಲ್ಲಿ ಜನರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಹೀಗಾಗಿ ಮತ್ತೆ ಪಾಕ್ ಸೆಲೆಬ್ರೆಟಿಗಳ ಅಕೌಂಟ್ ಬ್ಯಾನ್ ಮುಂದುವರಿಸಲಾಗಿದೆ.
ಪಾಕಿಸ್ತಾನ ಸೆಲೆಬ್ರೆಟಿಗಳ 18 ಸಾವಿರ ಅಕೌಂಟ್ಗಳ ಬ್ಲಾಕ್ ಮುಂದುವರಿಸಲಾಗಿದೆ. ಪಾಕ್ ಸೆಲೆಬ್ರೆಟಿಗಳ ಯೂಟ್ಯೂಬ್ ಚಾನಲ್, ಸೋಷಿಯಲ್ ಮೀಡಿಯಾ ಅಕೌಂಟ್ ಬ್ಲಾಕ್ ಮಾಡಲಾಗಿದೆ. ಇಂದು ಬೆಳಗ್ಗೆಯಿಂದ ಮತ್ತೆ ಪಾಕ್ ಚಾನಲ್, ಅಕೌಂಟ್ಗಳ ಬ್ಲಾಕ್ ಮುುಂದುವರಿದಿದೆ. ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಪಾಕ್ ಪರ ಪಾಕ್ ಸೆಲೆಬ್ರೆಟಿಗಳು ಮಾತನಾಡಿದ್ದರು.
ಇದನ್ನ ಓದಿ: ಕಿರಣ್ ರಾಜ್ ಅಭಿಮಾನಿಗಳಿಗೆ ಇಂದು ಹಬ್ಬ.. ಕರ್ಣನ ಮನೆ ತುಂಬಿಸಿಕೊಳ್ಳಲು ಫ್ಯಾನ್ಸ್ ಎಕ್ಸೈಟ್..!
ಭಾರತದಲ್ಲಿ ತಪ್ಪು ಮಾಹಿತಿ ನೀಡಿಕೆ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡಿದ್ದರು. ಹೀಗಾಗಿ ಪಾಕಿಸ್ತಾನದ ಸೆಲೆಬ್ರೆಟಿಗಳ ಯೂ ಟ್ಯೂಬ್ ಚಾನಲ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಅಕೌಂಟ್ ಸೇರಿದಂತೆ ಸೋಷಿಯಲ್ ಮೀಡಿಯಾದ ಎಲ್ಲ ಅಕೌಂಟ್ಗಳನ್ನು ಭಾರತವು ಪಹಲ್ಗಾಮ್ ದಾಳಿಯ ಬಳಿಕ ಬ್ಲಾಕ್ ಮಾಡಿತ್ತು. ನಿನ್ನೆ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಪಾಕ್ ಸೆಲೆಬ್ರೆಟಿಗಳ ಅಕೌಂಟ್ ಗಳು ಭಾರತದಲ್ಲಿ ಜನರಿಗೆ ಲಭ್ಯವಾಗುತ್ತಿದ್ದವು. ಇದನ್ನು ಗಮನಿಸಿದ ಭಾರತದ ಜನರು ಭಾರತದಲ್ಲಿ ಪಾಕ್ ಸೆಲೆಬ್ರೆಟಿಗಳ ಯೂಟ್ಯೂಬ್ ಚಾನಲ್, ಅಕೌಂಟ್ಗಳ ಬ್ಲಾಕ್ ಮುಂದುವರಿಯಬೇಕೆಂದು ಆಗ್ರಹಿಸಿದ್ದರು.
ನಿನ್ನೆ ಶಹೀದ್ ಆಫ್ರಿದಿ, ಶೋಯಿಬ್ ಅಖ್ತರ್ ಯೂಟ್ಯೂಬ್ ಚಾನಲ್ಗಳು ಭಾರತದಲ್ಲಿ ಪ್ರಸಾರವಾಗಿದ್ದವು. ಪಾಕ್ ನಟ, ನಟಿಯರ ಇನ್ಸ್ಟಾಗ್ರಾಮ್ ಅಕೌಂಟ್ಗಳು ಓಪನ್ ಆಗಿದ್ದವು. ಪಾಕಿಸ್ತಾನದ ಮನರಂಜನಾ ಯೂಟ್ಯೂಬ್ ಚಾನಲ್ಗಳು ಭಾರತದಲ್ಲಿ ಪ್ರಸಾರವಾಗಿದ್ದವು. ಆದರೆ ಇಂದು ಬೆಳಗ್ಗೆ ಈ ಚಾನಲ್ಗಳು ಭಾರತದಲ್ಲಿ ಲಭ್ಯವಿಲ್ಲ. ಈ ಅಕೌಂಟ್ಗಳನ್ನು ನಿರ್ಬಂಧಿಸುವಂತೆ ಮನವಿ ಮೇರೆಗೆ ನಿರ್ಬಂಧಿಸಿದ್ದೇವೆ ಎಂಬ ಸಂದೇಶ ಬರುತ್ತಿದೆ.
ಇದನ್ನೂ ಓದಿ: ಗೂಡ್ಸ್ ವಾಹನ ಬಾವಿಗೆ ಬಿದ್ದು ಇಬ್ಬರು ಬಲಿ; ಮಗನ ಸುದ್ದಿ ತಿಳಿದು ತಾಯಿಗೆ ಹೃದಯಾಘಾತ
ಭಾರತದ ಸರ್ಕಾರದ ಅಧಿಕಾರಿಗಳು ಹೇಳುವ ಪ್ರಕಾರ.. ಪಾಕಿಸ್ತಾನದ ಸೆಲೆಬ್ರೆಟಿಗಳ ಅಕೌಂಟ್ ಭಾರತದಲ್ಲಿ ನಿನ್ನೆ ಲಭ್ಯವಾಗಿದೆ. ಕೇಂದ್ರ ಸರ್ಕಾರದ ಕಾರಣದಿಂದ ಅಲ್ಲ. ಕೇಂದ್ರ ಸರ್ಕಾರ ಪಾಕಿಸ್ತಾನದ ಸೋಷಿಯಲ್ ಮೀಡಿಯಾ ಅಕೌಂಟ್ ಬ್ಯಾನ್ ಮಾಡಿದ್ದನ್ನು ಇನ್ನೂ ಹಿಂತೆಗೆದುಕೊಂಡಿಲ್ಲ. ಸರ್ಕಾರದ ನೀತಿ, ನಿಯಮಗಳಲ್ಲಿ ಬದಲಾವಣೆ ಆಗಿಲ್ಲ. ತಾಂತ್ರಿಕ ತೊಂದರೆ ಇಲ್ಲವೇ ಮೆಟಾ ಸರ್ಕಾರದ ಸೂಚನೆಯನ್ನು ಪಾಲಿಸಲು ವಿಳಂಬ ಮಾಡಿದ್ದರಿಂದ ಹೀಗೆ ಆಗಿರಬಹುದು. ನಿನ್ನೆಯೇ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಟ್ವೀಟರ್ ಖಾತೆಗಳು, ಯೂ ಟ್ಯೂಬ್ ಚಾನಲ್, ಸೋಷಿಯಲ್ ಮೀಡಿಯಾದ ಎಲ್ಲ ಅಕೌಂಟ್ಗಳು ಬ್ಲಾಕ್ ಆಗಿವೆ ಎಂದು ಭಾರತ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. 2025ರ ಮೇ 8 ರಿಂದ ಭಾರತದಲ್ಲಿ ಪಾಕ್ ಸೆಲೆಬ್ರೆಟಿಗಳ ಅಕೌಂಟ್ ಬ್ಯಾನ್ ಆದೇಶ ಹೊರಡಿಸಲಾಗಿದೆ. ಓಟಿಟಿ ಪ್ಲಾಟ್ ಫಾರಂಗಳಿಗೂ ಪಾಕಿಸ್ತಾನದ ವೆಬ್ ಸೀರೀಸ್, ಫಿಲಂ, ಸಾಂಗ್ ಸೇರಿದಂತೆ ಎಲ್ಲ ಮನರಂಜನೆಯನ್ನು ಭಾರತದಲ್ಲಿ ಬ್ಲಾಕ್ ಮಾಡುವಂತೆ ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ.
ನಿನ್ನೆ ಭಾರತದಲ್ಲಿ ಪಾಕ್ ಸೋಷಿಯಲ್ ಮೀಡಿಯಾ ಅಕೌಂಟ್ ಓಪನ್ ಆಗಿದ್ದಕ್ಕೆ ಆಲ್ ಇಂಡಿಯಾ ಸಿನಿ ವರ್ಕರ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿತ್ತು. ಪಹಲ್ಗಾಮ್ ದಾಳಿಯ ಸಂತ್ರಸ್ತರ ಕುಟುಂಬಗಳಿಗೆ ಇದು ಅವಮಾನ ಎಂದು ಸಿನಿ ವರ್ಕರ್ ಅಸೋಸಿಯೇಷನ್ ಹೇಳಿತ್ತು.
ಇದನ್ನೂ ಓದಿ: Ramayana Teaser: 5000 ವರ್ಷಗಳಿಂದ ಆರಾಧಿಸ್ತಿರುವ ರಾಮ-ರಾವಣರ ಅಮರಕತೆಯೇ.. ರಾಮಾಯಣ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ