/newsfirstlive-kannada/media/post_attachments/wp-content/uploads/2024/08/Pak-ban.jpg)
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್​ ಸರಣಿಯ ಟಿಕೆಟ್​​ ದರಗಳು ದೊಡ್ಡ ಕೋಲಾಹಲ ಸೃಷ್ಟಿಸಿವೆ. ಬರೀ 15 ರೂಪಾಯಿಯಿಂದ ಟಿಕೆಟ್​ ದರಗಳು ಪ್ರಾರಂಭವಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗುತ್ತಿದೆ. ನೆಟಿಜನ್​ಗಳು ಪಾಕ್​ ಕ್ರಿಕೆಟ್​ ಮಂಡಳಿಯು ಸಮೋಸಾ ಬೆಲೆಯಂತಿರುವ ಟಿಕೆಟನ್ನು ಉಚಿತವಾಗಿ ನೀಡಬಹುದಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ.
ಪಾಕ್​ ಮತ್ತು ಬಾಂಗ್ಲಾದೇಶ ನಡುವಿನ ಈ ಟೆಸ್ಟ್​ ಸರಣಿಯು ಐಸಿಸಿ ವಿಶ್ವ ಟೆಸ್ಟ್​​ ಚಾಂಪಿಯನ್​​ಶಿಪ್​​ 2023-25ರ ಪ್ರಮುಖ ಭಾಗವಾಗಿದೆ. ಆಗಸ್ಟ್​​ 21ರಿಂದ ಪ್ರಾರಂಭವಾಗಿ 25ರವರೆಗೆ ರಾವಲ್ಪಿಂಡಿ ಸ್ಟೇಡಿಯಂನಲ್ಲಿ ನಡೆಯಲಿದೆ. ಬಳಿಕ ಆಗಸ್ಟ್​​ 30ರಿಂದ ಸೆಪ್ಟೆಂಬರ್​​ 3ರವರೆಗೆ ಕರಾಚಿಯ ನ್ಯಾಷನಲ್ ಬ್ಯಾಂಕ್​​​ ಸ್ಟೇಡಿಯಂ ಪಂದ್ಯ ನಡೆಯಲಿಕ್ಕಿದೆ.​
[caption id="attachment_81347" align="alignnone" width="800"]
ಪ್ರಾತಿನಿಧಿಕ ಚಿತ್ರ[/caption]
ರಾವಲ್ಪಿಂಡಿಯಲ್ಲಿ ನಡೆಯುವ ಪಾಕಿಸ್ತಾನ-ಬಾಂಗ್ಲಾದೇಶ 1ನೇ ಟೆಸ್ಟ್‌ನ ಟಿಕೆಟ್ ಮಾರಾಟವು ಆಗಸ್ಟ್ 13ರಿಂದ ಪ್ರಾರಂಭವಾಗಿದೆ. ಅಭಿಮಾನಿಗಳ ಅನುಭವವನ್ನು ಹೆಚ್ಚಿಸಲು ಋತುಮಾನದ ಪಾಸ್ ನೀಡುತ್ತಿದೆ. ಟೆಸ್ಟ್ ಪಂದ್ಯದ ಎಲ್ಲಾ ಐದು ದಿನಗಳವರೆಗೆ ಟಿಕೆಟ್ ಖರೀದಿಸುವವರಿಗೆ 15% ರಿಯಾಯಿತಿಯನ್ನು ನೀಡುತ್ತದೆ. ಪಂದ್ಯ ಬೇಗನೆ ಕೊನೆಗೊಂಡರೆ, ಉಳಿದ ದಿನಗಳ ವೆಚ್ಚವನ್ನು ಮರುಪಾವತಿಸಲಾಗುತ್ತದೆ.
ಇನ್ನು ಕರಾಚಿಯ ನಡೆಯವ ಪಂದ್ಯದಲ್ಲಿ ಸ್ಟೇಡಿಯಂನ ವಾಸಿಂ ಬ್ಯಾರಿ ಆವರಣಕ್ಕೆ 15 ರೂಪಾಯಿ ನಿಗದಿ ಪಡಿಸಲಾಗಿದೆ. ಇದಲ್ಲದೆ ಹೆಚ್ಚು ಆರಾಮದಾಯಕ ಅನುಭವಕ್ಕಾಗಿ, ಟಿಕೆಟ್‌ಗಳ ಬೆಲೆ 200 ರೂಪಾಯಿಯಾಗಿದೆ. ಸಾಮಾನ್ಯ ಆಸನಕ್ಕಿಂತ ಉತ್ತಮ ವೀಕ್ಷಣೆಯ ಅನುಭವವನ್ನು ಇದು ನೀಡುತ್ತದೆಯಂತೆ.
/newsfirstlive-kannada/media/post_attachments/wp-content/uploads/2024/08/pak-vs-Bngl.jpg)
ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ವಿಐಪಿ ಆಸನಗಳ ಬೆಲೆ PKR 500 ರೂಪಾಯಿ ಆಗಿದೆ. ವಾರಾಂತ್ಯದಲ್ಲಿ PKR 600 ಏರಿಸುವ ನಿರೀಕ್ಷೆ ಇದೆ. ಇದು ಹೆಚ್ಚುವರಿ ಸೌಕರ್ಯಗಳನ್ನು ಹೊಂದಿದೆ.
ಕರಾಚಿಯ ನ್ಯಾಶನಲ್ ಬ್ಯಾಂಕ್ ಸ್ಟೇಡಿಯಂನಲ್ಲಿನಲ್ಲಿ ಉನ್ನತ-ಶ್ರೇಣಿಯ ಆಯ್ಕೆಯ ಜೊತೆಗೆ ಪೂರ್ಣ ಆತಿಥ್ಯ ನೀಡುವ ಆಸನದ ಬೆಲೆ PKR 250,000 ಆಗಿದೆ. ಇದು ಐಷಾರಾಮಿ ವೀಕ್ಷಣೆಯ ಅನುಭವವನ್ನು ನೀಡುತ್ತದೆ.
ಇದರ ನಡುವೆ ಪಾಕ್​ ಕ್ರಿಕೆಟ್​​ ಮಂಡಳಿ ಖಾಲಿ ಸ್ಟೇಡಿಯಂನಲ್ಲಿ ಪಂದ್ಯ ನಡೆಸಲು ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬುಕ್ಕಿಂಗ್​ ಮಾಡಿದ ಟಿಕೆಟನ್ನು ಕೂಡ ಹಿಂತಿರುಗಿಸುತ್ತಿದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us