newsfirstkannada.com

ಪಬ್​ಜೀ ಆಡುವಾಗ ಅರಳಿದ ಪ್ರೀತಿ.. ಸಚಿನ್​ಗಾಗಿ ಪಾಕ್​ನಿಂದ 4 ಮಕ್ಕಳ ಜೊತೆ ಓಡಿ ಬಂದ ಮಹಿಳೆ.. ಮುಂದೇನಾಯಿತು ಗೊತ್ತಾ?

Share :

Published July 4, 2023 at 8:53am

    ಆನ್​ಲೈನ್​ ಗೇಮಿಂಗ್ ಮೂಲಕ ಭಾರತ-ಪಾಕ್​ ನಡುವೆ ಹುಟ್ಟಿದ ಪ್ರೀತಿ

    ತನ್ನ ಪ್ರಿಯಕರನ್ನು ಸೇರಲು ಎರಡು ದೇಶಗಳನ್ನು ದಾಟಿ ಬಂದ ಪ್ರೇಯಸಿ

    ಸೀಮಾ ಭಾರತದಲ್ಲಿ ತನ್ನ ಪ್ರಿಯಕರನನ್ನು ಸೇರಿದಳೇ, ಆಮೇಲೇನಾಯ್ತು?​

ಲಕ್ನೋ: ಫೇಸ್​ಬುಕ್​, ವಾಟ್ಸ್​ ಆಪ್​, ಇನ್​ಸ್ಟಾ ಸೇರಿದಂತೆ ಇತರೆ ಸೋಷಿಯಲ್​ ಮೀಡಿಯಾ ಮೂಲಕ ಪ್ರೇಮಾಂಕುರ ಆಗುವುದು ಕೇಳಿದ್ದೇವೆ. ಇಂತಹ ಪ್ರೀತಿಗಳು ಸಕ್ಸಸ್ ಆಗಿವೆ. ಮಧ್ಯದಲ್ಲೇ ಬಿಟ್ಟು ಹೋಗಿರುವುದು ಇವೆ. ಸದ್ಯ ಈ ಲವ್ ಫೇಸ್​ಬುಕ್​, ವಾಟ್ಸ್​ ಆಪ್​ನಂತಹಗಳನ್ನು ಬಿಟ್ಟು ಈಗ ಆನ್​ಲೈನ್​ ಗೇಮಿಂಗ್​ ಮೂಲಕ ಪ್ರಾರಂಭವಾಗಿದೆ. ಮೊಬೈಲ್​ನಲ್ಲಿ ಪಬ್​ಜೀ ಆಡುವಾಗ ಭಾರತದ ವ್ಯಕ್ತಿ ಹಾಗೂ ಪಾಕ್​ನ ಮಹಿಳೆ ನಡುವೆ ಲವ್​ ಆಗಿ ಬಿಟ್ಟಿದೆ. ಇದಕ್ಕಾಗಿ ಪ್ರಿಯಕರನಿಗಾಗಿ, ಮಹಿಳೆ ತನ್ನ 4 ಮಕ್ಕಳ ಜೊತೆ ನೇಪಾಳ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾರೆ.

ಉತ್ತರಪ್ರದೇಶದ ಗ್ರೇಟರ್​ ನೋಯ್ಡಾದ ನಿವಾಸಿಯಾದ ಸಚಿನ್​ ಎನ್ನುವ ವ್ಯಕ್ತಿಯನ್ನು ಹುಡುಕಿಕೊಂಡು ಪಾಕ್​ ಮೂಲದ ಸೀಮಾ ಗುಲಾಮ್ ಹೈದರ್ ಗ್ರೇಟರ್ ನೋಯ್ಡಾಕ್ಕೆ ಬಂದಿದ್ದಾರೆ. ಅಲ್ಲಿ ಪ್ರಿಯಕರನ ಜೊತೆಗೆ ರಬೂಪುರ ಪ್ರದೇಶದ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದರು. ಪಾಕ್​ ಮೂಲದ ಮಹಿಳೆ ಅಕ್ರಮವಾಗಿ ಭಾರತಕ್ಕೆ ಬಂದು ವಾಸವಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ತಿಳಿದಿದೆ. ಇದನ್ನು ಪ್ರಿಯಕರ ತಿಳಿದುಕೊಂಡು ಪ್ರೇಯಸಿಯನ್ನು ಕರೆದುಕೊಂಡು ಓಡಿ ಹೋಗಿದ್ದಾನೆ.

ಈ ಬಗ್ಗೆ ಅಪಾರ್ಟ್​ಮೆಂಟ್​ ಮಾಲೀಕನನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಮಾಲೀಕ ಅವರು ಮನೆ ಕೇಳಿಕೊಂಡು ಬಂದಾಗ ನಾವು ಕೋರ್ಟ್​ನಲ್ಲಿ ಮದುವೆಯಾಗಿದ್ದೇವೆ ಎಂದಿದ್ರು. ಅಲ್ಲದೇ ಆ ಮಹಿಳೆಯು ಥೇಟ್​ ಭಾರತೀಯ ಮಹಿಳೆಯಂತೆ ಸಲ್ವಾರ್ ಸೂಟ್ ಮತ್ತೆ ಸ್ಯಾರಿ ತೊಡುತ್ತಿದ್ದಳು. ಹೀಗಾಗಿ ನನಗೆ ಯಾವುದೇ ಅನುಮಾನ ಬಂದಿಲ್ಲವೇಂದು ಮಾಲೀಕ ತಿಳಿಸಿದ್ದಾನೆ. ಇನ್ನು ಈ ಬಗ್ಗೆ ತನಿಖೆ ಚುರುಕು ಮಾಡಿದ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಸಕ್ಸಸ್​ ಆಗಿದ್ದು ಇಬ್ಬರನ್ನು ಇನ್ನೂ ಹೆಚ್ಚಿನ ವಿಚಾರಣೆಯನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಇಬ್ಬರಿಗೂ ಪ್ರೀತಿ ಹುಟ್ಟಿರುವುದು ಹೇಗೆ..?

ಆನ್​ಲೈನ್​ ಪ್ಲಾಟ್​ಫಾರ್ಮ್​ ಗೇಮ್​ ಪಬ್​ಜೀಯನ್ನು ಸೀಮಾ ಮತ್ತು ಸಚಿನ್​ ಆಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪರಿಚಯ ಬೆಳೆದಿದೆ. ಬಳಿಕ ಇಬ್ಬರು ಬೇರೆ ಸೋಷಿಯಲ್​ ಮೀಡಿಯಾ ಮೂಲಕ ಚಾಟಿಂಗ್​ ಮಾಡಲು ಶುರು ಮಾಡಿದ್ದಾರೆ. ಇದು ಹಾಗೇ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಬ್​ಜೀ ಆಡುವಾಗ ಅರಳಿದ ಪ್ರೀತಿ.. ಸಚಿನ್​ಗಾಗಿ ಪಾಕ್​ನಿಂದ 4 ಮಕ್ಕಳ ಜೊತೆ ಓಡಿ ಬಂದ ಮಹಿಳೆ.. ಮುಂದೇನಾಯಿತು ಗೊತ್ತಾ?

https://newsfirstlive.com/wp-content/uploads/2023/07/PAK_INDIA_LOVE_1.jpg

Load More