ಫೈನಲ್ ಗೆಲ್ಲುವ ಭರವಸೆಯಲ್ಲಿರೋ ಯುವರಾಜ್ ಸಿಂಗ್ ತಂಡ
ಇಂಡಿಯಾ ಚಾಂಪಿಯನ್ಸ್ ವರ್ಸಸ್ ಪಾಕಿಸ್ತಾನ ಚಾಂಪಿಯನ್ಸ್
ಸೆಮಿಫೈನಲ್ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದ ಭಾರತ
ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ (WCL) ಟೂರ್ನಿಯ ಫೈನಲ್ ಮ್ಯಾಚ್ ಅನ್ನು ಇಂದು ಪಾಕ್ ವಿರುದ್ಧ ಯುವರಾಜ್ ಸಿಂಗ್ ನೇತೃತ್ವದ ಇಂಡಿಯಾ ಚಾಂಪಿಯನ್ಸ್ ತಂಡ ಆಡಲಿದೆ. ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಸೆಮಿಫೈನಲ್ ಪಂದ್ಯವಾಡಿದ್ದ ಪಾಕ್ ಗೆದ್ದು ಫೈನಲ್ಗೆ ಎಂಟ್ರಿ ಕೊಟ್ಟಿತ್ತು. ಇತ್ತ 2ನೇ ಸೆಮಿಫೈನಲ್ನಲ್ಲಿ ಆಸಿಸ್ ಅನ್ನು ಮಣಿಸಿ ಭಾರತ ಫೈನಲ್ಗೆ ಲಗ್ಗೆ ಇಟ್ಟಿತ್ತು. ಇನ್ನು ಪಂದ್ಯ ಇವತ್ತು ಎಷ್ಟು ಗಂಟೆಗೆ, ಎಲ್ಲಿ ಹಾಗೂ ಯಾವ ಟಿವಿ ಚಾನೆಲ್ನಲ್ಲಿ ನೇರ ಪ್ರಸಾರವಾಗುತ್ತದೆ ಎನ್ನುವುದು ನೋಡುವುದಾದರೆ..
ಇದನ್ನೂ ಓದಿ: ಇಂದು ಭಾರತ-ಪಾಕ್ ಮಧ್ಯೆ ಫೈನಲ್ ಪಂದ್ಯ.. ಯುವಿ ನೇತೃತ್ವದ ಇಂಡಿಯಾ ಚಾಂಪಿಯನ್ಸ್ ತಂಡದಲ್ಲಿ ಯಾರೆಲ್ಲ ಇದ್ದಾರೆ..?
ಇಂಡಿಯಾ ಚಾಂಪಿಯನ್ಸ್ ತಂಡವನ್ನು ಯುವರಾಜ್ ಸಿಂಗ್ ಅವರು ಮುನ್ನಡೆಸುತ್ತಿದ್ದಾರೆ. ಅತ್ತ ಪಾಕ್ ತಂಡ ಯೂನಿಸ್ ಖಾನ್ ನೇತೃತ್ವದಲ್ಲಿ ಕಣಕ್ಕೆ ಇಳಿಯಲಿದೆ. ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ ಫೈನಲ್ ಪಂದ್ಯ ಆಡಲಿರುವ ಇಂಡಿಯಾ ಟ್ರೋಫಿ ಗೆಲ್ಲುವ ಭರವಸೆ ಮೂಡಿಸಿದೆ. ಲೀಗ್ ಹಾಗೂ ಸೆಮಿಸ್ನಲ್ಲಿ ಮನಮೋಹ ಪ್ರದರ್ಶನ ನೀಡಿದ್ದ ಯುವಿ ಟೀಮ್ ಕಪ್ಗೆ ಮುತ್ತಿಕ್ಕುವ ಫೆವರೀಟ್ ತಂಡ ಎನಿಸಿಕೊಂಡಿದೆ.
ಇದನ್ನೂ ಓದಿ: ಟ್ರಕ್ಕಿಂಗ್ಗೆ ಹೋಗುವಾಗ ಬೊಲೆರೋ ವಾಹನಕ್ಕೆ ಬೈಕ್ ಡಿಕ್ಕಿ.. ಸ್ಥಳದಲ್ಲೇ ಯುವಕ ಸಾವು
ಇನ್ನು ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ನ ಫೈನಲ್ ಪಂದ್ಯ ಇಂದು ರಾತ್ರಿ 9 ಗಂಟೆಗೆ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ರಾತ್ರಿ 9 ಗಂಟೆಗೆ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮೈದಾನದಲ್ಲಿ ಹೊಡೆದುರುಳಿಸಲು ಯುವಿ ಪಡೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್ಗಳಲ್ಲಿ ಈ ಫೈನಲ್ ಪಂದ್ಯ ನೇರ ಪ್ರಸಾರವಾಗುತ್ತದೆ.
ಇದನ್ನೂ ಓದಿ: ಒಳಹರಿವಿನಲ್ಲಿ ಭಾರೀ ಇಳಿಕೆ.. KRSನಲ್ಲಿ ಎಷ್ಟು ಸಾವಿರ ಕ್ಯೂಸೆಕ್ ನೀರು ಕಡಿಮೆ ಆಗಿದೆ ಗೊತ್ತಾ?
ಇಂಡಿಯಾ ಚಾಂಪಿಯನ್ಸ್ ತಂಡ
ಯುವರಾಜ್ ಸಿಂಗ್ (ಕ್ಯಾಪ್ಟನ್ ), ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಸುರೇಶ್ ರೈನಾ, ಅಂಬಾಟಿ ರಾಯುಡು, ಯೂಸಫ್ ಪಠಾಣ್, ಇರ್ಫಾನ್ ಪಠಾಣ್, ವಿನಯ್ ಕುಮಾರ್, ಹರ್ಭಜನ್ ಸಿಂಗ್, ಪವನ್ ನೇಗಿ, ಗುರು ಕೀರತ್ ಸಿಂಗ್, ರಾಹುಲ್ ಶುಕ್ಲಾ, ಆರ್.ಪಿ ಸಿಂಗ್, ಸೌರಭ್ ತಿವಾರಿ, ಅನುರೀತ್ ಸಿಂಗ್, ನಮನ್ ಓಜಾ, ಧವಳ್ ಕುಲಕರ್ಣಿ, ರಾಹುಲ್ ಶರ್ಮಾ.
ಪಾಕಿಸ್ತಾನ್ ಚಾಂಪಿಯನ್ಸ್ ಟೀಮ್
ಯೂನಿಸ್ ಖಾನ್ (ನಾಯಕ), ಕಮ್ರಾನ್ ಅಕ್ಮಲ್ (ಕೀಪರ್), ಶಾಹಿದ್ ಅಫ್ರಿದಿ, ಮಿಸ್ಬಾ-ಉಲ್-ಹಕ್, ಶರ್ಜೀಲ್ ಖಾನ್, ಸೊಹೈಬ್ ಮಕ್ಸೂದ್, ಶೋಯೆಬ್ ಮಲಿಕ್, ಸೊಹೈಲ್ ತನ್ವೀರ್, ವಹಾಬ್ ರಿಯಾಜ್, ಅಮರ್ ಯಾಮಿನ್, ಸೊಹೈಲ್ ಖಾನ್, ಅಬ್ದುಲ್ ರಜಾಕ್, ತೌಫೀಕ್ ಉಮರ್, ಮೊಹಮ್ಮದ್ ಹಫೀಜ್, ಉಮರ್ ಅಕ್ಮಲ್, ತನ್ವಿರ್ ಅಹ್ಮದ್, ಯಾಸಿರ್ ಅರಾಫತ್, ಸಯೀದ್ ಅಜ್ಮಲ್.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ