/newsfirstlive-kannada/media/post_attachments/wp-content/uploads/2023/07/Pramod-Muthalik.jpg)
ಬೆಂಗಳೂರಲ್ಲಿ ಶಂಕಿತ ಉಗ್ರರನ್ನ ಬಂಧಿಸಿದ್ದು ಶ್ಲಾಘನೀಯ. ಪಾಕ್, ಅಘ್ಘಾನ್, ಬಾಂಗ್ಲಾದವರನ್ನ ಜೈಲಿನಲ್ಲಿ ಇಡಲಾಗಿದೆ. ಒಳಗಿದ್ದುಕೊಂಡೇ ಮುಸ್ಲಿಂ ಯುವಕರಿಗೆ ತರಬೇತಿ ನೀಡ್ತಿದ್ದಾರೆ. ಇದು ಆಘಾತಕಾರಿ, ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ಜೈಲಿನಲ್ಲಿರುವ ವ್ಯವಸ್ಥೆ ಬದಲಾಗಬೇಕು, ಕ್ರಮ ಜರುಗಿಸಬೇಕು ಎಂದು ಮಾಧ್ಯಮದವರ ಮುಂದೆ ಪ್ರತಿಕ್ರಿಯಿಸಿದ್ದಾರೆ.
ಐವರು ಅರೆಸ್ಟ್
ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಸುಹೇಲ್, ಉಮರ್, ಜಾಹಿದ್, ಮುದಾಸಿರ್, ಫೈಜಲ್ ಎಂಬವರನ್ನು ಅರೆಸ್ಟ್ ಮಾಡಿದ್ದಾರೆ. ಅದರಲ್ಲಿ ಜುನೈದ್ ಎಂಬಾತ ತಪ್ಪಿಸಿಕೊಂಡಿದ್ದಾನೆ. ಇನ್ನು ಈ ಘಟನೆಯ ಪ್ರಮುಖ ಆರೋಪಿ ಟಿ ನಜೀರ್ ಜೈಲಿನಲ್ಲಿ ಇದ್ದಾನೆ.
ಸಿಸಿಬಿ ತನಿಖೆಯ ವೇಳೆ ಶಂಕಿತ ಉಗ್ರರು ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ವೆಸಗಲು ಪ್ಲಾನ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಿಎಂಟಿಸಿ ನಿಲ್ದಾಣ ಸೇರಿ ಹಲವು ಪ್ರಮುಖ ಸ್ಥಳಗಳಲ್ಲಿ ಬ್ಲಾಸ್ಟ್ ಮಾಡಲು ಶಂಕಿತ ಉಗ್ರರು ಪ್ಲಾನ್ ಮಾಡಿರುವ ಬಗ್ಗೆ ತನಿಖೆ ವೇಳೆ ತಿಳಿದುಬಂದಿದೆ.
ಇನ್ನು ಪರಾರಿಯಾಗಿರುವ ಜುನೈದ್ ಅಹಮ್ಮದ್ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳಿದ್ದು, ಕೊಲೆ, ರೆಡ್ ಸ್ಯಾಂಡಲ್ ಸಾಗಾಟ ಸೇರಿದಂತೆ 2 ದರೋಡೆ ಯತ್ನ ಪ್ರಕರಣಗಳು ಜುನೈದ್ ಮೇಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ