/newsfirstlive-kannada/media/post_attachments/wp-content/uploads/2025/05/India-Pakistan-War-1.jpg)
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಮತ್ತೆ ಗುಂಡಿನ ದಾಳಿ ಆರಂಭವಾಗಿದೆ. ಬೆಳಗ್ಗೆ ಇಂದ ತಣ್ಣಗಾಗಿದ್ದ ಗುಂಡಿನ ಚಕಮುಕಿ ಮತ್ತೆ ಆರಂಭವಾಗಿದೆ. ಪಾಕಿಸ್ತಾನ ಮತ್ತೆ ಜಮ್ಮು ಕಾಶ್ಮೀರದ ಉರಿ, ಪೂಂಚ್ ಭಾಗದಲ್ಲಿ ಗುಂಡಿನ ದಾಳಿ ಮಾಡಿದೆ.
ನಿನ್ನೆ ತಡರಾತ್ರಿಯಿಂದ ಇದೇ ಭಾಗದಲ್ಲಿ ನಿರಂತರ ಗುಂಡಿನ ದಾಳಿ ಆಗುತ್ತಿರೋದ್ರಿಂದ ಪೂಂಚ್, ಉರಿ ಹಾಗೂ ಜಮ್ಮುವಿನಲ್ಲಿ ಬ್ಲಾಕ್ ಔಟ್ ಘೋಷಣೆ ಮಾಡಲಾಗಿದೆ.
ಜಮ್ಮುವಿನಲ್ಲಿ ಮಿಸೈಲ್ ಅಟ್ಯಾಕ್‌ಗೆ ಪಾಕಿಸ್ತಾನ ಯತ್ನಿಸಿದ್ದು, ಭಾರತ ಏರ್ ಡಿಫೈನ್ ಸಿಸ್ಟಮ್ ಪಾಕ್ ಮಿಸೈಲ್ ಅನ್ನು ಹೊಡೆದುರುಳಿಸಿದೆ. ನಿನ್ನೆಯಂತೆ ರಾಜಸ್ಥಾನದ ಜೈಸಲ್ಮೇರ್ ಮೇಲೂ ಪಾಕಿಸ್ತಾನ ದಾಳಿಗೆ ಯತ್ನಿಸಿದೆ ಅನ್ನೋ ವರದಿಯಾಗಿದೆ.
ಇದನ್ನೂ ಓದಿ: ಪಾಕ್ನ 500 ಡ್ರೋಣ್ ಹೊಡೆದುರುಳಿಸಿದ್ದು ಹೇಗೆ..? ಭಾರತದ ರಕ್ಷಣಾ ಮೂಲಗಳಿಂದ ವಿಡಿಯೋ ರಿಲೀಸ್
ರಾಜಸ್ಥಾನದ ಜೈಸಲ್ಮೇರ್, ಜಮ್ಮುವಿನ ಪಠಾಣ್ ಕೋಟ್, ಪಂಜಾಬ್‌ನ ಫಿರೋಜ್ ಪುರ್‌ನಲ್ಲೂ ಬ್ಲಾಕ್ ಔಟ್ ಘೋಷಣೆ ಆಗಿದೆ.
ಭಾರತ, ಪಾಕಿಸ್ತಾನದ ಸಂಘರ್ಷದ ಹಿನ್ನೆಲೆಯಲ್ಲಿ ಜಮ್ಮು, ಶ್ರೀನಗರ, ಅಮೃತಸರ ಸೇರಿದಂತೆ ದೇಶದ 24 ಏರ್‌ಪೋರ್ಟ್ ಬಂದ್ ವಿಸ್ತರಣೆಯಾಗಿದೆ. ಮೇ 15ರವರೆಗೆ ಉತ್ತರ ಭಾರತದ ಹಲವು ಏರ್‌ಪೋರ್ಟ್‌ಗಳನ್ನು ಬಂದ್ ಮಾಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ