/newsfirstlive-kannada/media/post_attachments/wp-content/uploads/2025/05/Pak-pm-terrorist.jpg)
ನವದೆಹಲಿ: ಆಪರೇಷನ್ ಸಿಂಧೂರ ಪಾಕಿಸ್ತಾನದ ಉಗ್ರರ ನೆಲೆಗಳನ್ನ ಧ್ವಂಸ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆ ಭಯೋತ್ಪಾದನೆಯ ಬೆನ್ನು ಮೂಳೆ ಮುರಿದು ಇಡೀ ವಿಶ್ವದ ಗಮನ ಸೆಳೆದಿದೆ. ಆದರೆ ನಾಯಿ ಬಾಲ ಡೊಂಕೆ ಎನ್ನುವಂತೆ ಪಾಕಿಸ್ತಾನಕ್ಕೆ ಮಾತ್ರ ಬುದ್ಧಿ ಬಂದಿಲ್ಲ.
ಭಾರತದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ ಉಗ್ರರ ಕುಟುಂಬಗಳಿಗೆ ಪಾಕಿಸ್ತಾನ ತಲಾ 1 ಕೋಟಿ ರೂ. ಪರಿಹಾರ ಘೋಷಣೆ ಮಾಡಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮತ್ತೊಮ್ಮೆ ತಮ್ಮ ಉಗ್ರ ಪ್ರೇಮವನ್ನು ಮೆರೆದಿದ್ದಾರೆ.
ಪಾಕಿಸ್ತಾನದಲ್ಲಿ ಉಗ್ರಗಾಮಿಗಳು ಸತ್ತರೂ ಅಲ್ಲಿನ ಸರ್ಕಾರ ಪರಿಹಾರ ನೀಡುತ್ತೆ. ಇದೀಗ ಪಾಕಿಸ್ತಾನ ಪಿಎಂಓನಿಂದ ಪರಿಹಾರ ನೀಡುವ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದೆ.
JEM ಹೆಡ್ ಕ್ವಾರ್ಟಸ್ ಮೇಲೆ ಭಾರತ ಏರ್‌ಸ್ಟ್ರೈಕ್ ನಡೆಸಿದ್ದರಿಂದ 14 ಮಂದಿ ಸಾವನ್ನಪ್ಪಿದ್ದರು. ಮೋಸ್ಟ್ ವಾಂಟೆಡ್ ಉಗ್ರ ಮೌಲಾನಾ ಮಸೂದ್ ಅಜರ್ ಕುಟುಂಬದ 14 ಮಂದಿ ಪ್ರಾಣ ಬಿಟ್ಟಿದ್ದಾರೆ. ಹೀಗಾಗಿ ಮೌಲಾನಾ ಮಸೂದ್ ಅಜರ್‌ಗೆ ಈಗ ಪಾಕಿಸ್ತಾನ ಸರ್ಕಾರ 14 ಕೋಟಿ ರೂಪಾಯಿ ಪರಿಹಾರ ನೀಡುತ್ತಿದೆ.
ಭವಾಲ್‌ಪುರದ ಜಾಮೀಯಾ ಮಸೀದಿ ಸುಭಾನಾ ಅಲ್ಲಾ ಮೇಲೆ ಭಾರತ ಏರ್ ಸ್ಟ್ರೈಕ್ ಮಾಡಿದ್ದು, ಮಸೀದಿ ಛಿದ್ರ, ಛಿದ್ರವಾಗಿದೆ. ಹೀಗೆ ನಾಶವಾದ ಉಗ್ರರ ನೆಲೆಗಳು, ಮನೆಗಳನ್ನು ಮರು ನಿರ್ಮಾಣ ಮಾಡುವ ಭರವಸೆಯನ್ನು ಪಾಕಿಸ್ತಾನ ಸರ್ಕಾರ ನೀಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಟರ್ಕಿ ಆ್ಯಪಲ್, ಮಾರ್ಬಲ್ ಬ್ಯಾನ್.. ಭಾರತದ ಬಾಯ್ಕಾಟ್‌ನಿಂದ ಪಾಕ್ ಪ್ರೇಮಿಗೆ ಎಷ್ಟು ಸಾವಿರ ಕೋಟಿ ನಷ್ಟ?
ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿರುವ ಭಾರತೀಯ ಸೇನೆ ಈಗ ಉಗ್ರರ ನೆಲೆಗಳನ್ನು ಮತ್ತೆ ಪಾಕಿಸ್ತಾನವೇ ಮರು ನಿರ್ಮಾಣ ಮಾಡುತ್ತಾ ಅನ್ನೋದರ ಬಗ್ಗೆಯೂ ನಿಗಾ ವಹಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ