ಪಾಕ್ ಸೇನಾ ಮುಖ್ಯಸ್ಥರಿಗೆ ತಮ್ಮ ದೇಶದಲ್ಲೇ ದೊಡ್ಡ ಮುಜುಗರ.. ರಾಜೀನಾಮೆ ಕೊಟ್ಟು ಪರಾರಿ?

author-image
admin
Updated On
ಪಾಕ್​ನ ಬಣ್ಣ ಬಯಲು ಮಾಡಿದ NIA.. ಪಹಲ್ಗಾಮ್ ದಾಳಿ ತನಿಖೆಗೆ ಹೊಸ ತಿರುವು..!
Advertisment
  • ಬ್ರಿಟನ್​, ನ್ಯೂಜೆರ್ಸಿಗೆ ತಮ್ಮ ಕುಟುಂಬವನ್ನು ಶಿಫ್ಟ್ ಮಾಡಿದ್ದಾರೆ
  • ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ವಿರುದ್ಧ ಆಕ್ರೋಶ
  • ಭಾರತದ ಜೊತೆಗಿನ‌ ಸಂಬಂಧ ಹಾಳಾಗಲು ಇವರೇ ಕಾರಣನಾ?

ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನದಲ್ಲಿ ಅಲ್ಲೋಲ, ಕಲ್ಲೋಲವೇ ಸೃಷ್ಟಿಯಾಗುತ್ತಿದೆ. ಭಾರತದ ದಿಟ್ಟ ಹೆಜ್ಜೆಗಳು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ್ದು, ಪಾಕ್ ಸೇನಾ ಮುಖ್ಯಸ್ಥನಿಗೆ ತಮ್ಮ ದೇಶದಲ್ಲೇ ದೊಡ್ಡ ಮುಜುಗರಗಳು ಎದುರಾಗುತ್ತಿದೆ. ಸೇನಾ ಮುಖ್ಯಸ್ಥರೇ ತಮ್ಮ ಕುಟುಂಬವನ್ನು ಬೇರೆ ದೇಶಕ್ಕೆ ಶಿಫ್ಟ್ ಮಾಡಿದ ಮೇಲೆ ರಾಜೀನಾಮೆ ನೀಡುವ ಆಗ್ರಹ ಕೇಳಿ ಬಂದಿದೆ.

ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರು ನಿನ್ನೆಯಷ್ಟೇ ಪಾಕ್​ನಿಂದ ಬ್ರಿಟನ್​ ಮತ್ತು ನ್ಯೂಜೆರ್ಸಿಗೆ ತಮ್ಮ ಕುಟುಂಬವನ್ನು ಶಿಫ್ಟ್ ಮಾಡಿ ಸುದ್ದಿಯಾಗಿದ್ದರು. ಖಾಸಗಿ ಏರ್ ಕ್ರಾಫ್ಟ್​​ಗಳಲ್ಲಿ ಜನರಲ್ ಶಾಹೀರ್ ಶಂಶಾದ್ ಮಿರ್ಜಾ ಕುಟುಂಬ ಸಹ ವಿದೇಶಕ್ಕೆ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು.

ಇದನ್ನೂ ಓದಿ: ಹೆದರಿದ ಪಾಕ್ ಸೇನಾ ಮುಖ್ಯಸ್ಥ.. ರಾತ್ರೋರಾತ್ರಿ ಕುಟುಂಬವನ್ನು ಲಂಡನ್​​ಗೆ ಶಿಫ್ಟ್ ಮಾಡಿದ ಮುನೀರ್ 

ಈ ಬೆಳವಣಿಗೆ ಮಧ್ಯೆ ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ವಿರುದ್ಧ ಪಾಕ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಂತೂ ಅಸೀಮ್ ಮುನೀರ್ ರಾಜೀನಾಮೆಗೆ ಜನರು ಅಭಿಯಾನ ನಡೆಸುತ್ತಿದ್ದಾರೆ.

publive-image

ಅಸೀಮ್ ಮುನೀರ್ ಸೇನಾ ಮುಖ್ಯಸ್ಥರಾದ ಬಳಿಕ ನೆರೆಹೊರೆಯ ದೇಶಗಳ ಜೊತೆಗೆ ಪಾಕ್ ಸಂಬಂಧ ಹದಗೆಟ್ಟಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಗೆ ಪಾಕ್ ಬೆಂಬಲ ಕೊಟ್ಟು ಪ್ರತಿಷ್ಠಾಪನೆ ಮಾಡಿತ್ತು. ಆದರೆ ಈಗ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವೇ ಪಾಕ್ ವಿರುದ್ದ ತಿರುಗಿ ಬಿದ್ದಿದೆ.

ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರು ಇರಾನ್ ದ್ವೇಷಿ. ಇದರಿಂದಾಗಿ ಇರಾನ್ ಜೊತೆಗಿನ ಪಾಕಿಸ್ತಾನದ ಸಂಬಂಧ ಹಾಳಾಗಿದೆ. ಈಗ ಭಾರತದ ಜೊತೆಗಿನ‌ ಸಂಬಂಧ ಹಾಳಾಗಲು ಕೂಡ ಅಸೀಮ್ ಮುನೀರ್ ಕಾರಣ ಅನ್ನೋ ಮಾತುಗಳು ಕೇಳಿ ಬಂದಿದೆ. ಅಸೀಮ್ ಮುನೀರ್ ಸೇನಾ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಾಗುತ್ತಿದೆ. ಈಗಾಗಲೇ ತಮ್ಮ ಕುಟುಂಬಸ್ಥರನ್ನು ಬ್ರಿಟನ್, ನ್ಯೂಜೆರ್ಸಿಗೆ ಶಿಫ್ಟ್ ಮಾಡಿರುವ ಅಸೀಮ್‌ ದೇಶ ಬಿಟ್ಟು ಹೋಗುವ ಪರಿಸ್ಥಿತಿ ಬರುತ್ತಾ ಅನ್ನೋ ಮಾತು ಕೇಳಿ ಬರುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment