/newsfirstlive-kannada/media/post_attachments/wp-content/uploads/2025/05/BORDER-1.jpg)
ಪಹಲ್ಗಾಮ್ ನರಮೇಧಕ್ಕೆ ಭಾರತ ಆಪರೇಷನ್ ಸಿಂಧೂರದ ಮೂಲಕ ತಕ್ಕ ಉತ್ತರ ನೀಡಿದೆ. ನಡುರಾತ್ರಿ ಭಾರತ ನಡೆಸಿದ ಏರ್ಸ್ಟ್ರೈಕ್ಗೆ ಪಾಪಿಸ್ತಾನದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಭಾರತದ ಸೇನಾ ಕಾರ್ಯಾಚರಣೆ ಕುದ್ದುಹೋಗಿರುವ ಪಾಕಿಸ್ತಾನ ಸೇನೆ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ಮತ್ತಷ್ಟು ಹೆಚ್ಚಿಸಿದ್ದು, ಇದರಿಂದ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಜಮ್ಮು-ಕಾಶ್ಮೀರದ ವಾಸ್ತವ ನಿಯಂತ್ರಣ ರೇಖೆಯಲ್ಲಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಮಾರ್ಟರ್ ಶೆಲ್ ದಾಳಿ ಮುಂದುವರಿಸಿದೆ. ಇದಕ್ಕೆ ಭಾರತೀಯ ಪಡೆಗಳು ತಕ್ಕ ಎದಿರೇಟು ನೀಡಿದ್ದು, ಎರಡೂ ಕಡೆ ಫೈರಿಂಗ್ ಮುಂದುವರಿದಿದೆ. ಮಾರ್ಟರ್ ಶೆಲ್ ದಾಳಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ 12 ಜನರು ಮೃತಪಟ್ಟಿದ್ದು, 57 ಜನರಿಗೆ ಗಾಯಗಳಾಗಿವೆ. ಪಾಕ್ ಕಡೆಯಲ್ಲೂ ಸಾಕಷ್ಟು ಹಾನಿಯಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ 2.0ಗೆ ಭಾರತ ಪ್ಲಾನ್.. ದೊಡ್ಡ ಸುಳಿವು ಕೊಟ್ಟ 6 ಬೆಳವಣಿಗೆಗಳು..!
ಗಡಿ ಭಾಗದ ಗ್ರಾಮಗಳಲ್ಲಿರುವ ಜನರ ಸ್ಥಳಾಂತರ
ಪೂಂಚ್ ಸೇರಿದಂತೆ ಗಡಿ ಭಾಗದಲ್ಲಿ ಪಾಕ್ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿರುವ ಕಾರಣ, ಭಾರತ ಸರ್ಕಾರ ಎಚ್ಚೆತ್ತುಕೊಂಡಿದೆ. ಮುಂಜಾಗ್ರತಾ ಕ್ರಮವಾಗಿ, ಗಡಿಭಾಗದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗ್ತಿದೆ. ಇನ್ನು ಕಾಶ್ಮೀರದ ಸುಮಾರು 10 ಜಿಲ್ಲೆಗಳಲ್ಲಿ ಪರಿಸ್ಥಿತಿ ಮಾನಿಟರ್ ಮಾಡಲು ಕಂಟ್ರೋಲ್ ರೂಂಗಳನ್ನ ಸಿದ್ಧಪಡಿಸಲಾಗಿದೆ. ಕಾಶ್ಮೀರದ ಪೂಂಚ್ನಲ್ಲಿ ಭಾರೀ ಗುಂಡಿನ ಚಕಮಕಿ ನಡೆಯುತ್ತಿರೋ ಕಾರಣ ಈ ನಡೆಯನ್ನ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ 2.O? ಪೀಸ್, ಪೀಸ್ ಆದ ಉಗ್ರರ 9 ಅಡಗುತಾಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ!
ಪಾಕ್ ಅಪ್ರಚೋದಿತ ದಾಳಿಗೆ ಭಾರತೀಯ ಜವಾನ್ ಹುತಾತ್ಮ
ಪಾಕ್ನ ಶೆಲ್ ದಾಳಿಯಲ್ಲಿ ವೈಟ್ ನೈಟ್ ಕಾರ್ಪ್ಸ್ನ ಜವಾನ್ ದಿನೇಶ್ ಕುಮಾರ್, ಹುತಾತ್ಮರಾಗಿದ್ದಾರೆ. ಪೂಂಚ್ನ ವಲಯದಲ್ಲಿ ನಾಗರೀಕರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ದಿನೇಶ್ ಕುಮಾರ್ ಬಲಿದಾನ ಆಗಿದೆ. ಭಾರತ ಸೇನೆ ಕಾರ್ಯಾಚರಣೆ ಬಳಿಕ ಗಡಿಯಲ್ಲಿ ಪಾಕಿಸ್ತಾನ ಸೇನೆ ಉದ್ಧಟತನವನ್ನು ಮುಂದುವರಿಸಿದೆ. ಇದಕ್ಕೆ ಭಾರತೀಯ ಸೇನೆ ಕೂಡ ಪ್ರತ್ಯುತ್ತರ ನೀಡ್ತಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ 2.0ಗೆ ಭಾರತ ಪ್ಲಾನ್.. ದೊಡ್ಡ ಸುಳಿವು ಕೊಟ್ಟ 6 ಬೆಳವಣಿಗೆಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ