/newsfirstlive-kannada/media/post_attachments/wp-content/uploads/2025/05/FIGHT-BACK-INDIA-2.jpg)
ನಾಯಿ ಬಾಲಕ್ಕೆ ಎಷ್ಟೇ ದಬ್ಬೆ ಕಟ್ಟಿದ್ರೂ ಅದು ಹೇಗೆ ನೆಟ್ಟಗಾಗಲ್ವೋ ಹಾಗಾಗಿದೆ ಪಾಕಿಸ್ತಾನದ ಕತೆ. ಭಾರತದ ಹೊಡೆತದಿಂದ ಬಚಾಬ್​ ಆಗಲು ಕದನ ವಿರಾಮದ ಕಳ್ಳಾಟವಾಡಿದ್ದ ಪಾಪಿಸ್ತಾನ ಮೂರೇ ಗಂಟೆಗೆ ತನ್ನ ಕುತಂತ್ರಿ ಬುದ್ಧಿ ತೋರಿಸಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮಾತಿಗೂ ಪಾಕ್​ ಬಿಡುಗಾಸಿನ ಬೆಲೆ ಇಲ್ಲದಂತೆ ಮಾಡಿದೆ.
ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೈ, ಕಾಲು ಹಿಡಿದು ಕದನ ವಿರಾಮದ ಭಿಕ್ಷೆ ಬೇಡಿದ ಪಾಪಿಸ್ತಾನ ಕದನ ವಿರಾಮ ಘೋಷಣೆಯಾದ ಮೂರೇ ಗಂಟೆಗೆ ತನ್ನ ನರಿ ಬುದ್ಧಿ ತೋರಿಸಿದೆ. ಈ ಮೂಲಕ​ ಟ್ರಂಪ್​ ಮರ್ಯಾದೆಯನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್​ ಹರಾಜಿಗಿಡ್ತಾ ಅನ್ನೋ ಚರ್ಚೆ ಶುರುವಾಗಿದೆ. ಪ್ರಧಾನಿ ಮಾತನ್ನೂ ಧಿಕ್ಕರಿಸಿರೋ ಪಾಕಿಸ್ತಾನ ಸೇನೆ ಮತ್ತೆ ಭಾರತದ ಮೇಲೆ ದಾಳಿ ಮಾಡಿದೆ.
/newsfirstlive-kannada/media/post_attachments/wp-content/uploads/2025/05/MODI_TRUMP.jpg)
ಟ್ರಂಪ್ ಬಂದು ದಬ್ಬೆಕಟ್ಟಿದರೂ ನೆಟ್ಟಗಾಗದ ಪಾಕ್​ ಬಾಲ!
ಕದನ ವಿರಾಮ ಘೋಷಣೆಯಾದ ಮೂರೇ ಗಂಟೆಗೆ ಕಳ್ಳಾಟ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಧ್ಯಪ್ರವೇಶದಿಂದ ಯುದ್ಧ ವಿರಾಮದ ಹೈಡ್ರಾಮಾ ಮಾಡಿದ್ದ ಪಾಪಿಸ್ತಾನ ಮೂರೇ ಗಂಟೆಗೆ ತನ್ನ ವರಸೆ ಬದಲಿಸಿದೆ. ಜಮ್ಮುವಿನ ಹಲವೆಡೆ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆ ಮೊಂಡಾಟ ಮೆರೆದಿದೆ.
ಗಡಿಭಾಗದ 11 ಪ್ರದೇಶಗಳಲ್ಲಿ ಪಾಕ್​ ಸೇನೆಯ ಗುಂಡಿನ ದಾಳಿ
ಭಾರತ ಮತ್ತು ಪಾಕ್​ ಗಡಿಯ 11 ಪ್ರದೇಶಗಳಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಉಧಂಪುರ, ಅಖ್ನೂರ್​, ನೌಶಾರಾ, ಪೂಂಚ್​, ರಜೌರಿ, ಮೆಂಧಾರ್​, ಜಮ್ಮು, ಸುಂದರ್​ಬನಿ, ಆರ್​.ಎಸ್​ ಪುರ, ಅರ್ನೆಯಾ, ಕಥುವಾದಲ್ಲಿ ಪಾಕ್​ನಿಂದ ಕದನವಿರಾಮ ಉಲ್ಲಂಘನೆಯಾಗಿದೆ.
/newsfirstlive-kannada/media/post_attachments/wp-content/uploads/2025/05/FIGHT-BACK-INDIA.jpg)
ಪಾಕ್​ನ 100ಕ್ಕೂ ಹೆಚ್ಚು ಡ್ರೋನ್​ಗಳಿಂದ ದಾಳಿಗೆ ಯತ್ನ
ಕಳೆದ ರಾತ್ರಿ ಜಮ್ಮು-ಕಾಶ್ಮೀರದ ಹಲವು ಪ್ರದೇಶಗಳ ಮೇಲೆ ಪಾಕಿಸ್ತಾನದ 100ಕ್ಕೂ ಹೆಚ್ಚು ಡ್ರೋನ್​ಗಳು ದಾಳಿ ಯತ್ನ ನಡೆಸಿವೆ. ಪಾಕ್​ ಡ್ರೋನ್​ಗಳ ಹಾರಾಟದಿಂದ ಶ್ರೀನಗರ, ಕಾರ್ಗಿಲ್​, ಜಮ್ಮು, ಪಂಜಾಬ್​, ರಾಜಸ್ಥಾನ, ಗುಜರಾತ್​, ಪಠಾಣ್​ಕೋಟ್​ನಲ್ಲಿ ಸಂಪೂರ್ಣ ಬ್ಲ್ಯಾಕ್ ಔಟ್​ಗೆ ಕರೆ ನೀಡಲಾಗಿತ್ತು. ಜನರಿಗೆ ಮನೆಯಿಂದ ಹೊರಬರದಿರಲು ಸೂಚನೆ ನೀಡಲಾಗಿತ್ತು.
/newsfirstlive-kannada/media/post_attachments/wp-content/uploads/2025/05/FIGHT-BACK-INDIA-1.jpg)
ಉದಮ್​​ಪುರದಲ್ಲಿ ಪಾಪಿ ಪಾಕ್​ನಿಂದ ಭಾರೀ ಶೆಲ್ ದಾಳಿ
ಜಮ್ಮು-ಕಾಶ್ಮೀರದ ಉದಮ್​​ಪುರದಲ್ಲಿ ಪಾಕಿಸ್ತಾನ ಭಾರೀ ಶೆಲ್ ದಾಳಿ ನಡೆಸಿತ್ತು. ಈ ಹಿನ್ನೆಲೆ ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಹೈ ಅಲರ್ಟ್ ಆಗಿತ್ತು. ಭಾರತದ ಚಿನಾರ್ ಕಾರ್ಪ್ಸ್ ಹೆಡ್ ಕ್ವಾರ್ಟರ್ ಟಾರ್ಗೆಟ್​ಗೆ ಪಾಕಿಸ್ತಾನ ಯತ್ನಿಸಿತ್ತು. ಶ್ರೀನಗರದಲ್ಲಿರುವ ಸೇನೆಯ ಚಿನಾರ್ ಕಾರ್ಪ್ಸ್ ಹೆಡ್ ಕ್ವಾರ್ಟರ್ ಮೇಲಿನ ಅಟ್ಯಾಕ್​ ಯತ್ನವನ್ನ ಭಾರತದ ವಾಯುಪಡೆ ವಿಫಲ ಗೊಳಿಸಿದೆ.
ಪಾಕ್ ದಾಳಿಗೆ ಬಿಎಸ್​ಎಫ್​ ಸಬ್​ಇನ್ಸ್​ಪೆಕ್ಟರ್​ ಸಾವು
ನಗ್ರೋಟಾ ಮಿಲಿಟರಿ ನೆಲೆ ಮೇಲೆ ಉಗ್ರರ ದಾಳಿ ಯತ್ನ
ಪಾಪಿ ಪಾಕಿಸ್ತಾನದ ದಾಳಿಗೆ ​ಜಮ್ಮುನಲ್ಲಿ ಬಿಎಸ್​ಎಫ್​ ಸಬ್​ ಇನ್ಸ್​ಪೆಕ್ಟರ್​ ಇಮ್ತಿಯಾಜ್ ಸಾವನ್ನಪ್ಪಿದ್ದಾರೆ. ನಗ್ರೋಟಾ ಮಿಲಿಟರಿ ನೆಲೆ ಮೇಲೆ ಉಗ್ರರ ದಾಳಿ ಯತ್ನ ನಡೆಸಿದ್ದಾರೆ. ಉಗ್ರರೊಂದಿಗೆ ಸೇನಾಪಡೆ ರಾತ್ರಿ ಗುಂಡಿನ ಚಕಮಕಿ ನಡೆಸಿದೆ. ದಾಳಿ ಬಳಿಕ ಕಾಡಿನಲ್ಲಿ ತಲೆಮರೆಸಿಕೊಂಡಿರೋ ಉಗ್ರರಿಗಾಗಿ ಶೋಧಕಾರ್ಯ ನಡೆದಿದೆ.
ಇದನ್ನೂ ಓದಿ: ತಂದೆ, ತಾಯಿಗೆ ಒಬ್ಬನೇ ಒಬ್ಬ ಮಗ.. ವಾಯುನೆಲೆಯಲ್ಲಿ ಹುತಾತ್ಮನಾದ ಸುರೇಂದ್ರ ಕುಮಾರ್
ಪಾಕ್​ ಸೇನೆಯ ಹುಚ್ಚಾಟಕ್ಕೆ ಭಾರತದ ದಿಟ್ಟ ಉತ್ತರ
ಪಾಕ್​ ಸೈನಿಕರ ಗುಂಡಿನ ದಾಳಿಗೆ ಗುಂಡಿನ ದಾಳಿ ಮೂಲಕವೇ ಬಿಎಸ್​ಎಫ್​ ಯೋಧರು ತಕ್ಕ ಉತ್ತರ ನೀಡಿದ್ದಾರೆ. ಇತ್ತ ಆಗಸದಲ್ಲಿ ಹಾರಿಬಂದ ಪಾಕ್​​ ಡ್ರೋನ್​ಗಳನ್ನ ಏರ್​ ಡಿಫೆನ್ಸ್​ ಸಿಸ್ಟಮ್​ ಉಡೀಸ್​ ಮಾಡಿದೆ. ಕಳೆದೆರೆಡು ದಿನಗಳಿಗಿಂತ ರಾತ್ರಿ ತೀವ್ರ ಸ್ವರೂಪದ ದಾಳಿ ನಡೆಸಿದ ಪಾಕ್​ಗೆ​ ತಿಪ್ಪರಲಾಗ ಹಾಕಿದ್ರು ಏನು ಕಿತ್ತುಕೊಳ್ಳಲಾಗಲ್ಲ ಅನ್ನೋದನ್ನ ಭಾರತ ಮತ್ತೆ ಸಾರಿ ಹೇಳಿದೆ.
ನಾಯಿ ಬಾಲಕ್ಕೆ ದಬ್ಬೆ ಕಟ್ಟಿದ್ರೆ ನೆಟ್ಟಗಾಗಲ್ಲ ಅನ್ನೋ ಹಾಗೇ ಕದನ ವಿರಾಮದ ಕುತಂತ್ರ ಮಾಡಿದ ಪಾಪಿ ಪಾಕ್​ ನರಿ ಬುದ್ಧಿ ತೋರಿಸಿದೆ. ಕದನ ವಿರಾಮ ಘೋಷಿಸಿದ್ದಾಯ್ತು, ಅದರ ಉಲ್ಲಂಘನೆಯೂ ಆಯ್ತು, ವಿಶ್ವದ ಮುಂದೆ ಪಾಕ್ ನರಿ ಬುದ್ಧಿ ಮತ್ತೊಮ್ಮೆ ಬೆತ್ತಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us