/newsfirstlive-kannada/media/post_attachments/wp-content/uploads/2025/05/HSARIF.jpg)
ಬಲೂಚಿಸ್ತಾನದ ಮೂರನೇ ಒಂದು ಭಾಗವನ್ನು ವಶಪಡಿಸಿಕೊಂಡಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ (BLA) ಹೇಳಿಕೊಂಡಿದೆ. ಪಾಕಿಸ್ತಾನಿ ಸೇನೆಯು ತನ್ನ ನೆಲೆಯನ್ನು ತ್ಯಜಿಸಿ ಪಲಾಯನ ಮಾಡಿದೆ ಎಂದು ಬಿಎಲ್‌ಎ ಹೇಳಿದೆ.
ಅಫ್ಘಾನಿಸ್ತಾನ-ಇರಾನ್ ಪಕ್ಕದ ಪ್ರದೇಶವನ್ನು ಬಿಎಲ್‌ಎ ಆಕ್ರಮಿಸಿಕೊಂಡಿದೆ. ಇದರ ಮಧ್ಯೆ ಪಾಕಿಸ್ತಾನದ ಹಲವು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯಂತಹ ಪರಿಸ್ಥಿತಿ ಇದೆ. ಜನರು ತಮ್ಮ ಮನೆಗಳಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಇಂದು ಚೈತ್ರಾ ಕುಂದಾಪುರ ಮದುವೆ; ಹುಡುಗ ಯಾರು.. 12 ವರ್ಷದ ಪ್ರೀತಿ ಹೇಗಿತ್ತು?
ಪಾಕಿಸ್ತಾನಿ ಸೇನೆಯ ಮೇಲೆ ಅಟ್ಯಾಕ್
ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಹೇಳಿಕೆ ಪ್ರಕಾರ, ಮಸ್ತುಂಗ್ ಮತ್ತು ಲಖಿಯಲ್ಲಿ ಪಾಕಿಸ್ತಾನಿ ಸೇನೆ ಮತ್ತು ಅದರ ಮಿತ್ರರಾಷ್ಟ್ರಗಳ ಮೇಲೆ ಆರು ಪ್ರತ್ಯೇಕ ದಾಳಿ ನಡೆಸಲಾಗಿದೆ. ಈ ದಾಳಿಗಳಲ್ಲಿ ಪಾಕಿಸ್ತಾನಿ ಸೇನೆ, ಅದರ ಗುಪ್ತಚರ ಮತ್ತು ಸಂವಹನ ಗೋಪುರಗಳನ್ನು ಐಇಡಿ ಮೂಲಕ ಸ್ಫೋಟಿಸಲಾಗಿದೆ ಎಂದು ತಿಳಿಸಿದೆ.
ಗುರುವಾರ ಬೆಳಗಿನ ಜಾವ 4 ಗಂಟೆಗೆ ಜಮ್ರಾನ್‌ನ ಧಾಂಗ್ ಪ್ರದೇಶದಲ್ಲಿ ಪಾಕ್ ಸೇನೆ ನಮ್ಮ ಮೇಲೆ ಅಟ್ಯಾಕ್ ಮಾಡಿತ್ತು. ಇದರಿಂದ ನಮ್ಮ ಸೇನಾ ಅಧಿಕಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು. ನಮ್ಮ ಮೇಲೆ ಗ್ರೆನೇಡ್ಗಳನ್ನು ಎಸೆದರು ಎಂದಿದೆ.
ಇದನ್ನೂ ಓದಿ: ಭಾರತದಲ್ಲಿ ‘ಸಿಂಧೂರಿ’ ಜನನ.. ದೇಶಪ್ರೇಮಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಓದಲೇಬೇಕಾದ ಸ್ಟೋರಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ