/newsfirstlive-kannada/media/post_attachments/wp-content/uploads/2025/05/Pakistan-drone-attack-india.jpg)
ಭಾರತ, ಪಾಕಿಸ್ತಾನದ ಸಂಘರ್ಷದ ಮಧ್ಯೆ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿದೆ. ಭಾರತ ಉಗ್ರರ ಕ್ಯಾಂಪ್‌ಗಳಿಗೆ ದಾಳಿ ಮಾಡಿದ್ರೆ, ಪಾಪಿ ಪಾಕಿಸ್ತಾನ ಭಾರತೀಯ ನಾಗರಿಕರನ್ನೇ ಗುರಿ ಮಾಡಿ ದಾಳಿ ಮಾಡುವ ಯತ್ನ ಮಾಡುತ್ತಿದೆ. ಆದರೆ ಭಾರತೀಯ ಸೇನೆ ಪಾಕಿಸ್ತಾನದ ಸಂಚು ವಿಫಲಗೊಳಿಸಿ ಹಿಮ್ಮೆಟ್ಟಿಸುವಲ್ಲಿ ಯಶಸ್ಸು ಕಂಡಿದೆ.
ಮೇ 8 ಅಂದ್ರೆ ನಿನ್ನೆ ರಾತ್ರಿ ಕೂಡ ಪಾಕಿಸ್ತಾನ ಭಾರತದ ಪ್ರಮುಖ 21 ನಗರಗಳನ್ನೇ ಟಾರ್ಗೆಟ್ ಮಾಡಿತ್ತು ಅನ್ನೋ ಮಾಹಿತಿ ಲಭ್ಯವಾಗಿದೆ. ಭಾರತದ 4 ರಾಜ್ಯದ 21 ನಗರಗಳ ಮೇಲೆ 500 ಡ್ರೋಣ್‌ಗಳ ಮೂಲಕ ಪಾಕಿಸ್ತಾನ ದಾಳಿಗೆ ಯತ್ನಿಸಿದೆ. ಸತತ 210 ನಿಮಿಷಗಳಲ್ಲಿ ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಒಟ್ಟು 500 ಪಾಕಿಸ್ತಾನದ ಡ್ರೋಣ್‌ಗಳನ್ನು ಪೀಸ್, ಪೀಸ್ ಮಾಡಿದೆ.
ಇದನ್ನೂ ಓದಿ: ಆಕಾಶದಲ್ಲೇ ಪಾಕಿಸ್ತಾನದ ಯುದ್ಧ ವಿಮಾನ ಢಮಾರ್.. ಹೇಗಿತ್ತು ಭಾರತದ ದಾಳಿ..? ಈ ವಿಡಿಯೋ ನೋಡಿ
ನಿನ್ನೆ ರಾತ್ರಿ 8 ಗಂಟೆಯಿಂದ 11.30ರ ಸಮಯದಲ್ಲಿ ಭಾರತದ ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ನ 21 ನಗರಗಳನ್ನ ಪಾಕಿಸ್ತಾನ ಟಾರ್ಗೆಟ್ ಮಾಡಿತ್ತು. ಸತತ 200 ನಿಮಿಷಗಳ ಕಾಲ 500 ಚಿಕ್ಕ ಡ್ರೋಣ್‌ಗಳ ಮೂಲಕ ದಾಳಿಯ ಪ್ರಯತ್ನ ಮಾಡಿದೆ.
ಪಾಕಿಸ್ತಾನದ ಈ 500 ಡ್ರೋಣ್ ದಾಳಿಯನ್ನ ಭಾರತೀಯ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ರಷ್ಯಾದ S-400 ಮತ್ತು ಸ್ವದೇಶಿ ಆಕಾಶ್ ಏರ್ ಡಿಫೆನ್ಸ್ ಸಿಸ್ಟಮ್ ಎಲ್ಲವನ್ನು ಹೊಡೆದುರುಳಿಸಿದೆ. ನಿನ್ನೆ ಸಂಜೆ 500 ಡ್ರೋಣ್‌ಗಳಲ್ಲಿ ಕೇವಲ ಒಂದು ಡ್ರೋಣ್ ಜಮ್ಮುವಿನ ಏರ್‌ಪೋರ್ಟ್ ಬಳಿಗೆ ಬಂದು ಬಿದ್ದಿದೆ ಎನ್ನಲಾಗಿದೆ.
ಪಂಜಾಬ್, ರಾಜಸ್ಥಾನ, ಗುಜರಾತ್ ರಾಜ್ಯದ ನಗರಗಳನ್ನೇ ಪಾಕಿಸ್ತಾನ ಟಾರ್ಗೆಟ್ ಮಾಡಿದ್ದು, ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತವು ಪಾಕಿಸ್ತಾನದ ಟೆರರ್ ಹಬ್ ಮೇಲೆ ಏರ್ ಸ್ಟ್ರೈಕ್ ಮಾಡಿದ್ದು, ವಿಡಿಯೋ ರೆಕಾರ್ಡ್ ಸಹ ಮಾಡಲಾಗಿದೆ. ಭಾರತದ ಆರ್ಮಿ ಸಂಪೂರ್ಣ ಪಾರದರ್ಶಕತೆಯಿಂದ ಎಲ್ಲಾ ಮಾಹಿತಿ ಸಂಗ್ರಹ ಮಾಡಿ ಕಾರ್ಯಾಚರಣೆ ನಡೆಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ